ಗಾದೆಗಳು

1.     ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.

2.     ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?

3.     ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.

4.     ಸಂತೋಷವೇ ಯೌವನ, ಚಿಂತೆಯೇ ಮುಪ್ಪು.

5.     ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.

6.     ಹಳೆಯ ಕೋಟು ಧರಿಸಿ, ಹೊಸ ಪುಸ್ತಕ ಕೊಳ್ಳಿ.

7.     ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.

8.     ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.

9.     ಸ್ವಾತಿ ಮಳೆ ಬಿದ್ರೆ ಮುತ್ತಿನಂಥ ಜೋಳ.

10. ಕುಲ ಬಿಟ್ಟರೂ ಛಲ ಬಿಡಬೇಡ.

11. ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.

12. ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.

13. ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.

14. ಮಾನ ಹೋದ ಮೇಲೆ ಮರಣ ಬಂದ ಹಾಗೆ.

15. ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.

16. ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.

17. ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.

18. ಕೀಟ ಸಣ್ಣದಾದರೂ ಕಾಟ ಬಹಳ.

19. ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ

20. ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ

21. ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ

22. ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ

23. ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು

24. ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ

25. ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.

26. ಅಳಿಯ ಅಲ್ಲ ಮಗಳ ಗಂಡ

27. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ

28. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.

29. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

30. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

31. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.

32. ಉಚ್ಚೇಲಿ ಮೀನು ಹಿಡಿಯೋ ಜಾತಿ.

33. ಸಾವಿರ ಸುಳ್ಳು ಹೇಳಿ ಒಂದು ಮಾಡುವೆ ಮಾಡು

34. ಕಾಸಿಗೆ ತಕ್ಕ ಕಜ್ಜಾಯ

35. ಹರೆಯದಲ್ಲಿ ಹಂಧಿ ಕೂಡ ಚೆನ್ನಾಗಿರುತ್ತೆಯ್

36. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು

37. ಹೆತ್ತೋರಿಗೆ ಹೆಗ್ಗಣ ಮುದ್ಧು , ಕಟ್ಕೊಂಡೋವ್ರಿಗೆ ಕೋಡಂಗಿ ಮುದ್ಧು

38. ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು

39. ಅದಲ್ಲ ದಾಸಪ್ಪ ಅಂದ್ರೆ ಗುಡಿ ಮುಂದೆ ಟಿಂಗ್ ಅಂದಿದ್ನಂತೆ

40. ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.

41. ಅಜ್ಜಿಗೆ ಅರಿವೇ ಚಿಂತೆ ಮಗಳಿಗೆ ಮದುವೆಯ ಚಿಂತೆ

42. ಅಂಬಲಿ ಕುಡಿಯೊವನಿಗೆ ಮೀಸೆ ತಿಕ್ಕುವನೊಬ್ಬ

43. ಬೇಲೀನೇ ಎದ್ದು ಹೊಲ ಮೇದರೆ ಹೇಗೆ ?

44. ಅಳಿವುದೇ ಕಾಯ ಉಳಿವುದೇ ಕೀರ್ತಿ

45. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲುದು

46. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು

47. ಕಾರ್ಯವಾಸಿ ಕತ್ತೆ ಕಾಲು ಕಟ್ಟು

48. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ?

49. ಕೆಟ್ಟ ಮೇಲೆ ಬುದ್ಧಿ ಬಂತು ; ಅತ್ತ ಮೇಲೆ ಓಲೆ ಉರಿಯಿತು

50. ನಗುವ ಹೆಂಗಸು , ಅಳುವ ಗಂಡಸು ಇಬ್ಬರನ್ನು ನಂಬಬಾರದು

51. ನೂರು ಜನಿವಾರ ಒಟ್ಟಿಗಿರಬಹುದು ; ಮೂರೂ ಜಡೇ ಒಟ್ಟಿಗಿರುವುದಿಲ್ಲ

52. ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ

53. ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.

54. ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.

55. ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ

56. ಆಳಾಗಬಲ್ಲವನು ಅರಸನಾಗಬಲ್ಲ

57. ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು

58. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

59. ರಾಮೇಶ್ವರಕ್ಕೆ ಹೋದರೂ ಶನೀಶ್ವರನ ಕಾಟ ತಪ್ಪಲಿಲ್ಲ

60. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು

61. ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ

62. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ

63. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು

64. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ

65.  ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

66.  ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ

67.  ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ

68.  ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು

69.  ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು

70. ಒಪ್ಪತ್ತಿನ ತುಪ್ಪದ ಊಟದ ಆಸೆಗೆ ಬಿದ್ದು ವರ್ಷದ ಕೂಳು ಕಳಕೊಂಡರಂತೆ

71. ಆಡುತ್ತ ಆಡುತ್ತ ಭಾಷೆ ಹಾಡುತ್ತ ಹಾಡುತ್ತ ರಾಗ

72. ಹೇಳೋದು ವೇದ ಹಾಕೋದು ಗಾಳ

73. ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ

74. ಹಲ್ಲು ಬಿದ್ದ ಮುದುಕಿ ಎಲ್ಲಿ ಬಿದ್ದರೇನು

75. ಹತ್ತು ಮಕ್ಕಳ ತಾಯಿಯಾದರೂ ಸತ್ತ ಮಗನ್ನ ಮರೆಯೋದಿಲ್ಲ

76. ರಾಗ ನೆನಪಾದಾಗ ತಾಳ ಮರೆತೋಯಿತಂತೆ

77. ಕಾಯಕವೇ ಕೈಲಾಸ

78. ಕೈ ಕೆಳಸರಾದರೆ ಬಾಯಿ ಮೊಸರು

79. ಹಾಸಿಗೆ ಇದ್ದಷ್ಟು ಕಾಲು ಚಾಚು

80. ಮಾತು ಮನೆ ಕೆಡಿಸಿತು , ತೂತು ಓಲೆ ಕೆಡಿಸಿತು
81. ತುಂಬಿದ ಕೊಡ ತುಳುಕುವುದಿಲ್ಲ.

82. ಆಕಳು ಕಪ್ಪಾದರೆ ಹಾಲು ಕಪ್ಪೆ !?

83. ಮಾಡಿದುಣ್ಣು ಮಾರಾಯ

84. ಹೊಳೆಯುವುದೆಲ್ಲಾ ಚಿನ್ನವಲ್ಲ.

85. ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.

86. ಆಪತ್ತಿಗಾದವನೇ ನಿಜವಾದ ಗೆಳೆಯ.

87. ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.

88. ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.

89. ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.

90. ಊಟ ಬ್ಬಲ್ಲವನಿಗೆ ರೋಗವಿಲ್ಲ , ಮಾತು ಬಲ್ಲವನಿಗೆ ಜಗಳವಿಲ್ಲ.

91. ಜಟ್ಟಿ ಅಡಿಗೆ ಬಿದ್ದರೂ ಮೂಗು ಮೇಲಿದೆ ಅಂದ.

92. ಹಾವೂ ಸಾಯ್ಬೇಕು ಕೋಲೂ ಮುರೀಬಾರ್ದು

93. ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು

94. ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು

95. ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ

96. ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ

97. ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ

98. ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ

99.ಯುದ್ಫ ಕಾಲದಲ್ಲಿ ಶಸ್ತ್ರಾಭ್ಯಾಸ.

100. ಊಟ ಬ್ಬಲ್ಲವನಿಗೆ ರೋಗವಿಲ್ಲ , ಮಾತು ಬಲ್ಲವನಿಗೆ ಜಗಳವಿಲ್ಲ

101. ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ

102. ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ

103.ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ

104.ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ

105.ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ

106. ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ

107. ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ

108.ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.


ಗಾದೆಗಳು ಗಾದೆಗಳು Reviewed by VIVEKARAMA on ನವೆಂಬರ್ 01, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.