ಶುಭನುಡಿ

ಧ್ವನಿ ನಡುಗಿದರೂ ಪರವಾಗಿಲ್ಲ. ಯಾವಾಗಲೂ ಸತ್ಯವನ್ನೇ ನುಡಿಯಿರಿ. ಸತ್ಯ ನಿಮ್ಮ ವ್ಯಕ್ತಿತ್ವವನ್ನೇ ಬದಲಿಸುತ್ತದೆ. 🌻ಮಾತು ಸಾವಿರ ಸಮಸ್ಯೆ ಉಂಟು ಮಾಡಿದರೆ ಮೌನ ಸಾವಿರ ಉತ್ತರ ಹುಡುಕಿ ಕೊಡುತ್ತದೆ 🌻
ಎಲ್ಲಾ ತಿಳಿದವ ಎಂಬ ಜ್ಞಾನಿಗಿಂತ *ಏನೂ ತಿಳಿದಿಲ್ಲ ಎಂದೆನ್ನುವ ಅಜ್ಞಾನಿಯೇ ಶ್ರೇಷ್ಠ.. ತಿಳಿದವ ಎಂಬ ಜ್ಞಾನಿಗೆ ಅಹಂಕಾರವೆಂಬ ಪೊರೆ ಕಣ್ಣಿಗೆ ಆವರಿಸಿ ಎದುರಿರುವ ಎಲ್ಲವನ್ನೂ ಮರೆಮಾಚಿಸುತ್ತೆ.. ತಿಳಿದಿಲ್ಲವೆಂಬ ಪ್ರಾಮಾಣಿಕ ಅಜ್ಞಾನಿಗೆ ಸೂರ್ಯನ ಬೆಳಕಷ್ಟೇ ಅಲ್ಲ ಮಿಂಚುಹುಳದ ಬೆಳಕು ಕೂಡ ದಾರಿ ದೀಪ ಆಗಿ ತೋರುತ್ತೆ. ""ಹೃದಯ ಎಂಬುದು ಕೃಷಿಗೆ ಯೋಗ್ಯವಾದ ಭೂಮಿ ಇದ್ದಂತೆ...ಅದರಲ್ಲಿ ಪ್ರೀತಿ,ದ್ವೇಷ,ತ್ಯಾಗ, ಹಗೆತನ, ಅಸೂಯೆ, ಮತ್ಸರ,ಗಳೆಂಬ ಬೀಜಗಳು.ಯಾವುದನ್ನು ಬಿತ್ತಿದರೂ ಫಲ ಕೊಡುತ್ತೆ..ಯಾವುದನ್ನು ಬಿತ್ತಬೇಕೆಂಬ ತೀರ್ಮಾನ ನಿನ್ನದು"".
ಬದುಕನ್ನು ಪ್ರೀತಿಸುತ್ತಾ ಸಾಗಿ* ಬದುಕು ನಮ್ಮನ್ನು ಪ್ರೀತಿಸುತ್ತೆ ಸೋಲನ್ನು ನಗುತ್ತಾ ಸ್ವಾಗತಿಸಿ ಗೆಲುವು ನಮ್ಮನ್ನು ಸ್ವಾಗತಿಸುತ್ತೆ. 🌺ಎದುರಾಳಿಯನ್ನು ಮಾತಿನಲ್ಲಿ ಬಾಯಿ ಮೇಲೂ ಮಾಡಿ ಗೆಲ್ಲುವುದಕ್ಕಿಂತ ಮೌನದಲ್ಲಿ ಸುಮ್ಮನಿದ್ದು ಗೆಲ್ಲುವುದು ಉತ್ತಮ🌼
ಅನುಭವವು ಒಂದು ಒಳ್ಳೆಯ ಉಪಾಧ್ಯಾಯನಂತೆ ಅದು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ 🍃ತಾನೂ ಯಾರಿಗೂ ಅನಿವಾರ್ಯವಲ್ಲವೆಂದು ಗೊತ್ತಾದಾಗ ಮನುಷ್ಯನ ಅಹಂಕಾರ ತಾನಾಗಿಯೇ ಕಡಿಮೆಯಾಗುತ್ತದೆ🍃
ನೀವು ಯಾವಾಗಲು ಒಳ್ಳೆಯವರಾಗಿಯೇ ಇರಿ, ಹಾಗಂತ ನಾನು ಒಳ್ಳೆಯವನು ಎಂದು ಸಾಬೀತು ಮಾಡಲು ಹೋಗಬೇಡಿ. ಮನಸಿಟ್ಟು ಕಲಿತ ಅಕ್ಷರ,ಕಷ್ಟಪಟ್ಟು ದುಡಿದು ತಿನ್ನಿವ ಅನ್ನ,🍛 ಕಷ್ಟಪಟ್ಟು ಗಳಿಸಿದ ಸಂಪಾದನೆ, ಇಷ್ಟದಿಂದ ಮಾಡುವ ದೈವಭಕ್ತಿ, ಯಾವತ್ತೂ ಯಾರನ್ನೂ ಕೈಬಿಡುವುದಿಲ್ಲ....!
ನಿರ್ಗಮಿಸಲು ಅನೇಕ ದಾರಿಗಳಿವೆ. ಬದುಕಲು ಇರುವುದು ಒಂದೇ ದಾರಿ. ಅದನ್ನೇ ಆತ್ಮವಿಶ್ವಾಸ ಅನ್ನುವುದು. ಕನ್ನಡಿಯಲ್ಲೊಮ್ಮೆ ನೋಡಿ, ನಿಮ್ಮ ಪ್ರತಿಸ್ಪರ್ಧಿ ಅದರಲ್ಲಿ ಕಾಣಿಸುತ್ತಾನೆ. ನಿಮ್ಮ ಹೋರಾಟವಿರುವುದು ಅವನ ಜೊತೆ.
"ಸಮುದ್ರ ಎಂದೂ ನೀರಿಗಾಗಿ ಯೋಚಿಸುವುದಿಲ್ಲ". "ತಾನಾಗಿಯೇ ನೀರು ಅಲ್ಲಿಗೆ ಹರಿದು ಬರುತ್ತದೆ". "ಯಶಸ್ಸು ಮತ್ತು ಕೀರ್ತಿಗಳೂ ಹಾಗೆಯೆ ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದೇ ಆದಲ್ಲಿ ಅವು ನಮ್ಮನ್ನು ಹಿಂಬಾಲಿಸಿ ಬರುತ್ತವೆ".... ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ; ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ."🌼 🌸ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ ಆದ್ದರಿಂದ ನಾವು ಕಷ್ಟಗಳನ್ನು ಎದುರಿಸಿ ಮುನ್ನುಗಿದಾಗ ಮಾತ್ರ ಜೀವನದಲ್ಲಿ ಸುಟ್ಟ ಇಟ್ಟಿಗೆಯಂತೆ ಗಟ್ಟಿಯಾಗುತ್ತೇವೆ.🌸
ಶುಭನುಡಿ ಶುಭನುಡಿ Reviewed by VIVEKARAMA on ನವೆಂಬರ್ 01, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.