ಅನಂತು v/s ನುಸ್ರತ್ ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ

ಸುಧೀರ್ ನಿರ್ದೇಶನದ ಅನಂತು v/s ನುಸ್ರತ್ ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ವಕೀಲರ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಸದ್ಯ ಹಲಸೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು, ನಾಯಕಿಯಾಗಿ ಲತಾ ಹೆಗಡೆ ನಟಿಸುತ್ತಿದ್ದು, ನವೆಂಬರ್ 13 ರಿಂದ ಆಕೆ ಚಿತ್ರೀಕರಣದಲ್ಲಿ ಪಾಲ್ಗೋಳ್ಳಲಿದ್ದಾರೆ. ಸಿನಿಮಾದ ಮತ್ತೊಂದು ಆಸಕ್ತಿದಾಯಕ ವಿಷಯವೇನೆಂದರೇ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಪ್ರಸಿದ್ದವಾಗಿರು ನಯನ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಮಿಡಿ ಕಿಲಾಡಿಗಳಲ್ಲಿ ತಮ್ಮ ಉತ್ತಮ ಹಾಸ್ಯ ಪ್ರಜ್ಞೆ ಮೂಲಕ ಎಲ್ಲರ ಗಮನ ಸೆಳೆದಿದ್ದ ನಯನ ಕೆಜಿಎಫ್ ಸಿನಿಮಾದಲ್ಲೂ ನಟಿಸಿದ್ದಾರೆ. ಮತ್ತೊಂದು ಕಾಮಿಡಿ ಸಿನಿಮಾ ಜಂತರ್ ಮಂಥರ್ ನಲ್ಲೂ ಅಭಿನಯಿಸಿದ್ದು, ಅನಂತು...ವಿನಲ್ಲಿ ನಾಯಕ ಅನಂತು ಸಹೋದ್ಯೋಗಿ ಶಾಂತಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದಾರೆ.ಖಳನಾಯಕನಾಗಿ ಪ್ರಸಿದ್ಧಿಹೊಂದಿರುವ ರವಿಶಂಕರ್ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ,ಅನಂತು... ಸಿನಿಮಾದಲ್ಲಿ ರವಿಶಂಕರ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ, ಗವಿಲಿಂಗಸ್ವಾಮಿ ಕೇತಮಾರನಹಳ್ಳಿ ಎಂಬ ಪಾತ್ರದಲ್ಲಿ ಅನಂತುವಿನ ಗಿರಾಕಿಯಾಗಿ ಸಿನಿಮಾದಲ್ಲಿ ರವಿಶಂಕರ್ ನಟಿಸಿದ್ದಾರೆ.


ಅನಂತು v/s ನುಸ್ರತ್ ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ ಅನಂತು v/s ನುಸ್ರತ್ ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ Reviewed by VIVEKARAMA on ನವೆಂಬರ್ 01, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.