ಬಾಲಿವುಡ್‌ನಲ್ಲಿ ಬಿಝಿಯಾದ ಕೃತಿ ಕರಂಬಂದ

ಕನ್ನಡ ಮತ್ತು ತೆಲುಗಿನ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಕೃತಿ ಕರಂಬಂಧ ಇದೀಗ ಬಾಲಿವುಡ್‌ನಲ್ಲಿ ಬಿಝಿಯಾಗಿದ್ದಾರೆ. ಸದ್ಯಕ್ಕೆ ಹಿಂದಿಯಲ್ಲಿ ಶಾದಿ ಮೈನೆ ಜರೂರ್‌ ಆನಾ ಚಿತ್ರದಲ್ಲಿ ರಾಜಕುಮಾರ್‌ ರಾವ್‌ ಜತೆ ನಟಿಸಿದ್ದಾರೆ.ಜತೆಗೆ ಇದೇ ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್‌ ಆಗಿ ಕಾಣಿಸಿಕೊಂಡಿರುವ ಕೃತಿಗೆ ಹಿಂದಿಯಲ್ಲಿ ಇನ್ನಷ್ಟು ಅವಕಾಶಗಳು ಅರಸಿ ಬರುತ್ತಿವೆ. ಹೀಗಿದ್ದಾಗ್ಯೂ ಬಾಲಿವುಡ್‌ನಲ್ಲಿ ಯಾವುದೇ ಪಾತ್ರ ಬಂದರೂ ನಾನು ರೆಡಿ ಎಂದು ಅವರು ಹೇಳಿದ್ದಾರೆ.ಮೂರು ವರ್ಷಗಳ ಹಿಂದೆ ನಾನು ಕನ್ನಡದಲ್ಲಿ ಗೂಗ್ಲಿ ಚಿತ್ರದ ಮೂಲಕ ನಟಿಯಾದೆ. ಅದು ದೊಡ್ಡ ಹಿಟ್‌. ಅದಾದ ಮೇಲೆ ಕನ್ನಡವೂ ಸೇರಿ ತೆಲುಗಿನಲ್ಲೂ ನನಗೆ ಅವಕಾಶಗಳು ಸಿಕ್ಕಿದವು. ಈಗ ಬಾಲಿವುಡ್‌ನಲ್ಲೂ ನಾನು ಗೆಲ್ಲಬಲ್ಲೆ ಎಂಬ ವಿಶ್ವಾಸವಿದೆ ಎಂದು ಕೃತಿ ತಿಳಿಸಿದ್ದಾರೆ. ಸಿನಿಮಾ ರಂಗದಲ್ಲಿ ಸ್ಟಾರ್‌ಡಂ ಕೂಡ ಮುಖ್ಯವಾಗುತ್ತದೆ.
ಬಾಲಿವುಡ್‌ನಲ್ಲಿ ಬಿಝಿಯಾದ ಕೃತಿ ಕರಂಬಂದ ಬಾಲಿವುಡ್‌ನಲ್ಲಿ ಬಿಝಿಯಾದ ಕೃತಿ ಕರಂಬಂದ Reviewed by VIVEKARAMA on ನವೆಂಬರ್ 09, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.