ಟೈಗರ್ ಪ್ರಭಾಕರ್, ವಶಿಷ್ಠ ಸಿಂಹ ನನ್ನ ನೆಚ್ಚಿನ ಖಳನಾಯಕರು: ಸಂಯುಕ್ತಾ ಹೆಗಡೆ

ವಿಲ್ಲನ್ ಗಳು ತುಂಬಾ ಹೆಚ್ಚು ಹಾರ್ಡ್ ವರ್ಕ್ ಮಾಡುವ ಕಲಾವಿದರು, ಪರದೆಯ ಮೇಲೆ ಕೆಟ್ಟವರಾಗಿ ಕಾಣಿಸಿಕೊಳ್ಳಲು ಹೆಚ್ಚು ಹಾರ್ಡ್ ವರ್ಕ್ ಮಾಡುತ್ತಾರೆ, ಪ್ರೇಕ್ಷಕರು ಅವರನ್ನು ದ್ವೇಷಿಸುವಂತೆ ಮಾಡಲು ತಮ್ಮ ಪ್ರತಿಭೆಯನ್ನೆಲ್ಲಾ ಬಳಸುತ್ತಾರೆ, ಅವರ ಬಗ್ಗೆ ನನಗೆ ಗೌರವವಿದೆ ಎಂದು ನಟಿ ಸಂಯುಕ್ತಾ ಹೆಗಡೆ ಹೇಳಿದ್ದಾರೆ.ಹರಿ ಸಂತೋಷ್ ನಿರ್ದೇಶನದ ಕಾಲೇಜಿ ಕುಮಾರ್ ಸಿನಿಮಾದಲ್ಲಿ ನಟಿಸುತ್ತಿರುವ ಸಂಯುಕ್ತಾ ಖಳನಾಯಕರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹಿಂದಿನ ಕಾಲದ ಖಳನಾಯಕರಲ್ಲಿ ಪ್ರಭಾಕರ್ ಅವರ ಮೆಚ್ಚಿನ ನಟರಂತೆ, ಸದ್ಯದಲ್ಲಿರುವ ವಿಲ್ಲನ್ ಕಲಾವಿದರಲ್ಲಿ ವಶಿಷ್ಠ ಸಿಂಹ ಸಂಯುಕ್ತಾ  ಅವರ ಫೇವರಿಟ್ ವಿಲ್ಲನ್, ವಶಿಷ್ಠ ಸಿಂಹ ಉತ್ತಮ ನಟ, ಅವರು ಮತ್ತಷ್ಟು ಹೆಚ್ಚಿನ ನೆಗೆಟಿವ್ ಪಾತ್ರಗಳಲ್ಲಿ ನಟಿಸಲು ಎಂದು ಹೇಳಿದ್ದಾರೆ.ಶಾಂತವಾಗಿರುವ ವಿಲ್ಲನ್ ಗಳು ನನಗೆ ಇಷ್ಟವಾಗುತ್ತಾರೆ, ಎಂಟ್ರಿ ಸಾಂಗ್ ಅತಿ ಹೆಚ್ಚಿನ ಡೈಲಾಗ್ ಜೊತೆ ಬರುವ ಖಳನಾಯಕರು ನನಗೆ ಇಷ್ಟವಾಗುವುದಿಲ್ಲ, ನನ್ನ ಪ್ರಕಾರ ವಿಲ್ಲನ್ ಎಂದರೇ ಸೈಲೆಂಟ್ ಕಿಲ್ಲರ್, ಆತ ಸ್ಮಾರ್ಟ್ ಮತ್ತು ಸ್ಟ್ರಾಂಗ್ ಆಗಿರಬೇಕು ಎಂದು ವರ್ಣಿಸಿದ್ದಾರೆ.

ಖಳನಾಯಕರ ಮುಂದೆ ನಾಯಕಿಯಾಗಿ ನಟಿಸಲು ಸಿದ್ದವಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಂಯುಕ್ತಾ ವಿಲ್ಲನ್ ಯಾರು ಎಂಬುದರ ಮೇಲೆ ನಿರ್ಧರಿತವಾಗುತ್ತದೆ ಎಂದು ಹೇಳಿದ್ದಾರೆ. ನನಗೆ ಅವಕಾಶ ಸಿಕ್ಕರೇ ವಿಲ್ಲನ್ ಪಾತ್ರದಲ್ಲಿ ನಟಿಸುತ್ತೇನೆ, ಕ್ರೂರವಾಗಿ ಅಭಿನಯಿಸುವುದು ಸುಲಭದ ಕೆಲಸವಲ್ಲ ಎಂಬುದು ಗೊತ್ತು,. ಹೀಗಿದ್ದರೂ ನನ್ನಲ್ಲಿರುವ ಪ್ರತಿಭೆ ಹೊರತರುತ್ತೇನೆ ಎಂದು ಹೇಳಿದ್ದಾರೆ.

ಸದ್ಯ ಕಾಲೇಜ್ ಕುಮಾರ್ ಚಿತ್ರದಲ್ಲಿ ನಟಿಸುತ್ತಿರುವ ಸಂಯುಕ್ತಾ ಮುಂದೆ ಕೂಡ ಕಾಲೇಜ್ ಕಥೆಯಾಧರಿತ ಚಿತ್ರ ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ, ಅಂಥ ಪಾತ್ರಗಳು ನನಗೆ ಸರಿ ಹೊಂದುತ್ತವೆ ಎಂದು ಜನ ಭಾವಿಸಿದ್ದಾರೆ, ಒಂದು ವೇಳೆ ನನಗೆ ಅಂತ ಪಾತ್ರಗಳು ಹುಡುಕಿ ಬಂದರೇ ಹೊಸ ರೀತಿಯ ಪಾತ್ರಗಳಲ್ಲಿ ನಟಿಸಲು ಸಿದ್ದವಿದ್ದೇನೆ.

ಕಾಲೇಜ್ ಕುಮಾರ್ ಸಿನಿಮಾದಲ್ಲಿ ಕೀರ್ತಿ ಪಾತ್ರದಲ್ಲಿ ನಟಿಸಿರುವ ಸಂಯುಕ್ತಾ ನಾಯಕ ಮತ್ತು ಆತನ ತಂದೆಯ ನಡುವೆ ಮಧ್ಯವರ್ತಿಯಂತೆ ಕೆಲಸ ಮಾಡಿದ್ದಾರೆ, ಟ್ರೈಲರ್ ನೋಡಿದ ಜನ ಈ ಪಾತ್ರದ ಬಗ್ಗೆ  ಉತ್ತಮ ಪ್ರತಿಕ್ರಿಯೆ  ನೀಡಿದ್ದಾರೆ, ಪ್ರೇಕ್ಷಕರಿಗೆ ಸಿನಿಮಾ ಕೂಡ ಇಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

20 ವರ್ಷದ ನಟಿ ಸಂಯುಕ್ತಾಗೆ ಕಾಲೇಜಿನಲ್ಲಿ ಬಹು ದೊಡ್ಡ  ಅಭಿಮಾನಿ ಬಳಗವಿದೆಯಂತೆ, ಕಿರಿಕ್ ಪಾರ್ಟಿ ಮೂಲಕ ಹೊಸ ಪ್ರತಿಭೆಗೆ ಉತ್ತಮ ಅವಕಾಶ ಸಿಕ್ಕಿದ್ದು, ಕಾಲೇಜ್ ಕುಮಾರ್ ನಲ್ಲೂ ಅದೇ ರೀತಿಯ ಪಾತ್ರ ದೊರಕಿದೆಯಂತೆ, ಸಿನಿಮಾದಲ್ಲಿ ಫೈಟ್ ಕೂಡ ಮಾಡಿದ್ದೇನೆ, ಟಾಮ್ ಬಾಯ್ ಪಾತ್ರ ನನಗೆ ಇಷ್ಟವಾಗುವುದಿಲ್ಲ, ಆ್ಯೆಂಗ್ರಿ ಯಂಗ್ ಗರ್ಲ್ ಆಗಿರಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಟೈಗರ್ ಪ್ರಭಾಕರ್, ವಶಿಷ್ಠ ಸಿಂಹ ನನ್ನ ನೆಚ್ಚಿನ ಖಳನಾಯಕರು: ಸಂಯುಕ್ತಾ ಹೆಗಡೆ ಟೈಗರ್ ಪ್ರಭಾಕರ್, ವಶಿಷ್ಠ ಸಿಂಹ ನನ್ನ ನೆಚ್ಚಿನ ಖಳನಾಯಕರು: ಸಂಯುಕ್ತಾ ಹೆಗಡೆ Reviewed by VIVEKARAMA on ನವೆಂಬರ್ 07, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.