ಹಾಲಿವುಡ್ ಸಿನಿಮಾದಲ್ಲಿ ಅನೂಪ್ ರೇವಣ್ಣ: ದ್ವಿಭಾಷಾ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ

ನಟ ಅನೂಪ್ ರೇವಣ್ಣ ಅವರಿಗೆ ಸಿನಿಮಾ  ಬಗ್ಗೆ ಇರುವ ಅಭಿರುಚಿಯಿಂದಾಗಿ ಕಳೆದ ವರ್ಷ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ  ಹಾಲಿವುಡ್ ಸ್ಟೈಲ್ ನಲ್ಲಿ ಸಿನಿಮಾ ತಯಾರಿಸುವ ಬಗ್ಗೆ ತರಬೇತಿ ಪಡೆಯುವಂತೆ ಮಾಡಿದೆ.ಲಕ್ಷ್ಮಣ, ಪಂಟ ಸಿನಿಮಾ ನಂತರ ಅನೂಪ್ ಹಾಲಿವುಡ್ ನಲ್ಲಿ ತಮ್ಮ ಅದೃಷ್ಟ
ಪರೀಕ್ಷಿಸಲು ಮುಂದಾಗಿದ್ದಾರೆ. ಅನೂಪ್ ಮುಂದಿನ ಸಿನಿಮಾ ಕನ್ನಡ ಮತ್ತು ಇಂಗ್ಲೀಷ್ ಗಳಲ್ಲಿ ತಯಾರಾಗಲಿದ್ದು ನಂದಕಿಶೋರ್ ನಿರ್ದೇಶನ ಮಾಡಲಿದ್ದಾರೆ.


ಅನೂಪ್ ಜೊತೆ ನಂದಕಿಶೋರ್ ಸಹ ಮೊದಲ ಬಾರಿಗೆ ಹಾಲಿವುಡ್ ಪ್ರವೇಶಿಸುತ್ತಿದ್ದಾರೆ. ಈ ಸಂಬಂಧ ನಟ ಅನೂಪ್ ಸಿಟಿ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ. ಹಾಲಿವುಡ್ ನ ಹಾರರ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಲು ನನಗೆ ಹೆಮ್ಮೆಯೆನಿಸುತ್ತಿದೆ, ಈ ಸಿನಿಮಾ ಕನ್ನಡ ಭಾಷೆಯಲ್ಲಿ ಕೂಡ ತಯಾರಾಗುತ್ತಿದೆ, ಕಳೆದ 1 ತಿಂಗಳ ಹಿಂದೆಯೇ ನಂದ ಕಿಶೋರ್ ಜೊತೆ ಮಾತನಾಡಿದ್ದೇವೆ. ಅದಕ್ಕಾಗಿ ಅವರು ಕಥೆ ಸಿದ್ಧ ಪಡಿಸುತ್ತಿದ್ದಾರೆ.ಬೇರೆ ಪ್ರಾಜೆಕ್ಟ್ ಗಳ ಜೊತೆಗೆ ನಮ್ಮ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ. ಫೆಬ್ರವರಿಯಲ್ಲಿ ನಡೆಯುವ ನನ್ನ ಹುಟ್ಟುಹಬ್ಬದಂದು ಟೀಸರ್ ರೀಲಿಸ್ ಮಾಡಲಿದ್ದಾರೆ.


ಲಕ್ಷ್ಮಣ' ಚಿತ್ರದ ಬಳಿಕ 'ಪಂಟ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಅನೂಪ್ ರೇವಣ್ಣ, 'ಪಂಟ' ಚಿತ್ರೀಕರಣದ ನಂತರ ಆಕ್ಟಿಂಗ್ ಕೋರ್ಸ್ ಗಾಗಿ ಅಮೇರಿಕಾಗೆ ಹೋಗಿದ್ದರಂತೆ. ಅಲ್ಲಿ ಹಾಲಿವುಡ್ ನ ಅನೇಕ ನಟರು, ನಿರ್ದೇಶಕರು ಅನೂಪ್ ಗೆ ನಟನೆಯ ಪಾಠ ಹೇಳಿಕೊಟ್ಟಿದ್ದಾರೆ.
ತಮ್ಮ ಹಾಲಿವುಡ್ ಕನಸನ್ನು ನನಸು ಮಾಡುವುದಕ್ಕಾಗಿ ಅನೂಪ್  ಸಾಯಿ ರಂದ ಎಂಟರಟ್ರೈನ್ ಮೆಂಟ್,  ಎಂಬ ಪ್ರೊಡಕ್ಷನ್ ಕಂಪನಿ ತೆರೆದಿದ್ದಾರೆ. ಅಮೆರಿಕಾದಿಂದಲೇ ಕಂಪನಿ ನಿರ್ವಹಿಸಲು ನಿರ್ಧರಿಸಿದ್ದು, ಸಿನಿಮಾ ನನ್ನ ಬ್ಯಾನರ್ ಅಡಿಯಲ್ಲೇ ನಿರ್ಮಾಣವಾಗಲಿದ್ದು,  ಅಣ್ಣಾಜಿ ನಾಗರಾಜ್ ಸೇರಿದಂತೆ ಐವರು ನಿರ್ಮಾಪಕರಿರಲಿದ್ದಾರೆ. ಹಾಲಿವುಡ್ ಮತ್ತು ಕನ್ನಡ ಸಿನಿಮಾಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದಾರೆ.


ನಾನು ಈ ಸಂಬಂಧ ಈಗಾಗಲೇ ಹಲವು ನಿರ್ದೇಶಕರುಗಳ ಜೊತೆ ಮಾತನಾಡಿದ್ದೇನೆ, ಈ ಪ್ರಾಜೆಕ್ಟ್ ಗಾಗಿ ಅನೂಪ್ ಮತ್ತು ನಂದ ಕಿಶೋರ್ ಹಾಲಿವುಡ್ ತಂತ್ರಜ್ಞರನ್ನು  ಬಳಸಿಕೊಳ್ಳುವ ಸಾಧ್ಯತೆಯಿದೆ. ನಂದ ಕಿಶೋರ್ ಜೊತೆ ಕೆಲಸ ಮಾಡಲು ಉತ್ಸುಕರಾಗಿರುವ ಅನೂಪ್, ಹಾಲಿವುಡ್ ಸಿನಿಮಾ ಮಾಡುವ ಮೂಲಕ ನನ್ನ ಎಲ್ಲಾ ಕನಸುಗಳನ್ನು ನನಸು ಮಾಡಿಕೊಳ್ಳಲು ಬಯಸಿದ್ದಾರೆ.
ಹಾಲಿವುಡ್ ಸಿನಿಮಾದಲ್ಲಿ ಅನೂಪ್ ರೇವಣ್ಣ: ದ್ವಿಭಾಷಾ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ ಹಾಲಿವುಡ್ ಸಿನಿಮಾದಲ್ಲಿ ಅನೂಪ್ ರೇವಣ್ಣ: ದ್ವಿಭಾಷಾ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ Reviewed by VIVEKARAMA on ನವೆಂಬರ್ 07, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.