ನಿರ್ದೇಶನಕ್ಕಿಳಿದ ನಟ ಭಯಂಕರ ವಜ್ರಮುನಿ ಕುಟುಂಬದ ಕುಡಿ

ಕನ್ನಡದ ಅನೇಕ ಸ್ಟಾರ್‌ ನಟರ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಜೀವನ್‌ ಹಳ್ಳಿಕಾರ್‌, ಈಗ ನಿರ್ದೇಶಕರಾಗಿ ಹೊಸ ಕನಸು ಕಾಣುತ್ತಿದ್ದಾರೆ. ತಾವೇ ಕತೆ ಬರೆದುಕೊಂಡು ತಮ್ಮ ಡ್ರೀಮ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಬಹುತೇಕ ಹೊಸಬರೇ ಸೇರಿಕೊಂಡು ಮಾಡಿರುವ ಈ ಸಿನಿಮಾವನ್ನು ಸ್ಯಾಂಡಲ್‌ವುಡ್‌ ದಿಗ್ಗಜರಿಗೆ ಅರ್ಪಿಸಿರುವುದು ವಿಶೇಷ. ಇವರು ದಿವಂಗತ ವಜ್ರಮುನಿಯವರ ಸಹೋದರನ ಮರಿಮೊಮ್ಮಗ ಅನ್ನುವುದು ಮತ್ತೊಂದು ವಿಶೇಷ. ಹಿರಿತೆರೆಯಲ್ಲಿ ಮಾತ್ರವಲ್ಲ, ಕಿರುತೆರೆಯಲ್ಲೂ ಇವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ತಮ್ಮ ಹೊಸ ಸಿನಿಮಾಗೆ 'ಚಿತ್ರಪಟ' ಎಂದು ಹೆಸರಿಡಲಾಗಿದ್ದು, ಈಗಾಗಲೇ ಟೀಸರ್‌ ಕೂಡ ರಿಲೀಸ್‌ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಅದು ಸಖತ್‌ ಸದ್ದು ಮಾಡುತ್ತಿದೆ. ಕಿರುತೆರೆಯ ನಟ ಶ್ರೀರಾಮ್‌ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ಚಿತ್ರರಂಗದಲ್ಲಿ ನಾಯಕನಾಗಲು ಹೊರಟ ಯುವಕನ ಸುತ್ತ ನಡೆಯುವ ಘಟನೆಗಳನ್ನು ಚಿತ್ರದಲ್ಲಿವೆ. ತಮ್ಮ ಜೀವನದಲ್ಲೂ ಕಂಡುಂಡ ಅನುಭವಗಳನ್ನೂ ಚಿತ್ರಕತೆಯಲ್ಲಿ ಬಳಸಿಕೊಂಡಿದ್ದಾರಂತೆ ನಿರ್ದೇಶಕ ಜೀವನ್‌.

ಇಂದ್ರಜೀತ್‌ ಲಂಕೇಶ್‌ ಸೇರಿದಂತೆ ಅನೇಕ ನಿರ್ದೇಶಕರ ಸಿನಿಮಾಗಳಿಗೆ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡಿರುವ ಇವರು, ನಿರ್ದೇಶನದ ಜತೆಗೆ ತಮ್ಮ ನೃತ್ಯ ಸಂಯೋಜನೆಯನ್ನೂ ಮುಂದುವರೆಸಿಕೊಂಡು ಹೋಗಲಿದ್ದಾರಂತೆ.
ನಿರ್ದೇಶನಕ್ಕಿಳಿದ ನಟ ಭಯಂಕರ ವಜ್ರಮುನಿ ಕುಟುಂಬದ ಕುಡಿ ನಿರ್ದೇಶನಕ್ಕಿಳಿದ ನಟ ಭಯಂಕರ ವಜ್ರಮುನಿ ಕುಟುಂಬದ ಕುಡಿ Reviewed by VIVEKARAMA on ನವೆಂಬರ್ 06, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.