ಶಿವಣ್ಣ ಮೆಚ್ಚಿದ ಮಾನ್ವಿತಾ ಕಾಸ್ಟ್ಯೂಮ್‌

ನಟಿ ಮಾನ್ವಿತಾ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹತ್ತಿಸಲು ಬರುತ್ತಿದ್ದು, ಟಗರು ಚಿತ್ರದಲ್ಲಿ ಅವರು ಧರಿಸಿರುವ ಉಡುಪು ಇದೀಗ ಫ್ಯಾಶನ್‌ಲೋಕದಲ್ಲಿ ಚರ್ಚೆಯ ವಸ್ತುವಾಗಿದೆ. ಅಷ್ಟೇ ಏಕೆ ಈ ಕಾಸ್ಟ್ಯೂಮ್‌ಗೆ ಸ್ವತಃ ಸೂರಿ ಮತ್ತು ಶಿವರಾಜ್‌ ಕುಮಾರ್‌ ಫಿದಾ ಆಗಿದ್ದಾರೆ. ಈ ಕಾಸ್ಟ್ಯೂಮ್‌ಗಳನ್ನು ರಷ್ಯಾ ಮೂಲದ ವಸ್ತ್ರ ವಿನ್ಯಾಸಕಿ ಎರಿಕಾ ಸಿದ್ಧಪಡಿಸಿದ್ದಾರೆ.'ಬಹಳ ಬ್ಯೂಟಿಫುಲ್‌ ಆಗಿದೆ. ರಷ್ಯಾ ಮತ್ತು ಇಂಗ್ಲೆಂಡ್‌ ದೇಶಗಳ ವಿನ್ಯಾಸಗಳನ್ನು ಬೆರೆಸಿ ಈ ಡ್ರೆಸ್‌ಗಳನ್ನು ಎರಿಕಾ ಡಿಸೈನ್‌ ಮಾಡಿದ್ದಾರೆ. ಶೂಟಿಂಗ್‌ನಲ್ಲಿ ನನ್ನನ್ನು ನೋಡಿ ಎಲ್ಲರೂ ಸ್ಟನ್‌ ಆದರು. ಶಿವಣ್ಣ ಅವರಿಗಂತೂ ತುಂಬಾ ಇಷ್ಟವಾಗಿಬಿಡ್ತು. ಬ್ಯೂಟಿಫುಲ್‌ ಅಂತ ಹೇಳುತ್ತಲೇ ಇದ್ದರು. ಸೂರಿಯವರೂ ಅಷ್ಟೆ. ಅಷ್ಟು ಚೆನ್ನಾಗಿ ಡಿಸೈನ್‌ ಮಾಡಿದ್ದಾರೆ ಎರಿಕಾ' ಎಂದು ಫುಲ್‌ ಖುಷಿಯಿಂದ ಹೇಳಿದ್ದಾರೆ ಮಾನ್ವಿತಾ.ಎರಿಕಾ ಅವರ ವಿನ್ಯಾಸವೇ ವಿಶೇಷ. ಅವರು ಹಲವು ದೇಶಗಳನ್ನು ಸುತ್ತಿ ಅಲ್ಲಿಂದ ತಂದ ಬಟ್ಟೆಗಳನ್ನು ಬಳಸಿ ವಸ್ತ್ರ ವಿನ್ಯಾಸ ಮಾಡುತ್ತಾ ಬಂದಿದ್ದಾರೆ. ವರ್ಷದಲ್ಲಿ 3-4 ತಿಂಗಳು ಗೋವಾದಲ್ಲಿ ದುಡಿದು, ಆ ಹಣದಿಂದ ಬಟ್ಟೆಗಳನ್ನು ಹುಡುಕಿಕೊಂಡು ಪ್ರಪಂಚ ಸುತ್ತುತ್ತಾರೆ. 'ಅವರು ನಮಗೆ ಸಿಕ್ಕಿದ್ದೇ ಆಶ್ಚರ್ಯ. ನಿರ್ದೇಶಕ ಸೂರಿ ಗೋವಾದಲ್ಲೇ ಸಿಗುವ ಬಟ್ಟೆಗಳನ್ನು ಈ ಹಾಡಿಗೆ ಬಳಸಲು ಯೋಚಿಸಿದ್ದರು. ಅಲ್ಲಿ ಹೋದಾಗ ಇವರು ಸಿಕ್ಕರು. ಗೋವಾದಲ್ಲಿ ಸಂಡೇ ಬಜಾರ್‌, ಸ್ಯಾಟರ್‌ಡೇ ಹೀಗೆ ರಸ್ತೆ ಬದಿಯಲ್ಲಿ, ಶಾಪ್‌ನಲ್ಲಿ ಬಟ್ಟೆ ಮಾರುತ್ತಾರೆ ಎರಿಕಾ. ನಮಗಾಗಿ ವಿಶೇಷ ಉಡುಪನ್ನು ಸಿದ್ಧ ಪಡಿಸಿಕೊಟ್ಟರು. ಮಜಾ ಇದೆ. ಅವು ಎಷ್ಟು ಕ್ಲಾಸಿಕ್‌ ಆಗಿದ್ದವು ಎಂದರೆ ನಾನಂತೂ ಫಿದಾ ಆಗಿಬಿಟ್ಟೆ. ಶಿವಣ್ಣ ಸಖತ್‌ ಆಗಿದೆ ಎಂದ್ರು. ಸೂರಿ ಸರ್‌ ಮಾಧುರಿ ತರ ಕಾಣ್ತಿದ್ದೀಯಾ ಎನ್ನುತ್ತಿದ್ದರು' ಎಂದು ಥ್ರಿಲ್‌ ಆಗಿ ಹೇಳುತ್ತಾರೆ ಮಾನ್ವಿತಾ. ಗೋವಾದ ಬೀಚ್‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.ಟಗರು ಚಿತ್ರದ ಟೀಸರ್‌ ನಿನ್ನೆ ಬೆಂಗಳೂರಿನಲ್ಲಿ ರಿಲೀಸ್‌ ಮಾಡಲಾಯಿತು. ಶಿವರಾಜ್‌ ಕುಮಾರ್‌ ಅಭಿಮಾನಿಗಳೇ ಹಣ ಖರ್ಚು ಮಾಡಿ ಈ ಆಡಿಯೋ ಬಿಡುಗಡೆ ಸಮಾರಂಭವನ್ನು ಏರ್ಪಡಿಸಿರೋದು ವಿಶೇಷ.
'ಟಗರು ಚಿತ್ರದಲ್ಲಿ ಬಹಳ ಡಿಫರೆಂಟ್‌ ರೋಲ್‌ ಸಿಕ್ಕಿದೆ. ಇಂಥದ್ದು ಮತ್ತೆ ನನ್ನ ಜೀವನದಲ್ಲಿ ಸಿಗುತ್ತೋ ಇಲ್ಲವೋ. ಟಗರು ರಿಲೀಸ್‌ ಆದ ಮೇಲೆ ಹೊಸ ಸಿನಿಮಾ ಬಗ್ಗೆ ಯೋಚಿಸುತ್ತೇನೆ. ಒಂದೇ ರೀತಿಯ ಪಾತ್ರಗಳಲ್ಲಿ ನಟಿಸಲು ನನಗೆ ಇಷ್ಟ ಇಲ್ಲ.'
ಶಿವಣ್ಣ ಮೆಚ್ಚಿದ ಮಾನ್ವಿತಾ ಕಾಸ್ಟ್ಯೂಮ್‌ ಶಿವಣ್ಣ ಮೆಚ್ಚಿದ ಮಾನ್ವಿತಾ ಕಾಸ್ಟ್ಯೂಮ್‌ Reviewed by VIVEKARAMA on ನವೆಂಬರ್ 08, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.