'ರಂಗಿತರಂಗ' ನಾಯಕನ ಸೂಪರಮ್ಯಾನ್‌ ಅವತಾರ

ರಂಗಿತರಂಗ ನಿರ್ದೇಶಕ ಅನೂಪ್‌ ಭಂಡಾರಿ ನಿರ್ದೇಶನದ 'ರಾಜರಥ' ಚಿತ್ರದ ಹೊಚ್ಚ ಹೊಸ ಪೋಸ್ಟರ್‌ ಬಿಡುಗಡೆಯಾಗಿದ್ದು, ನಾಯಕ ನಿರೂಪ್‌ ಭಂಡಾರಿ ಸೂಪರಮ್ಯಾನ್‌ ಅವತಾರದಲ್ಲಿ ಸಖತ್‌ ಮಿಂಚಿದ್ದಾರೆ.

ಅಂದಹಾಗೆ ಇಲ್ಲಿ ನಿರೂಪ್‌ ಪಾತ್ರದ ಹೆಸರು 'ಅಭಿ'. ರೋಮ್ಯಾಂಟಿಕ್‌ ಕಾಲೇಜ್‌ ಬಾಯ್‌ ಪಾತ್ರದಲ್ಲಿ ಮಿಂಚಲಿರುವ ನಿರೂಪ್‌, ಸೂಪರಮ್ಯಾನ್‌ ಟಿಶರ್ಟ್‌ ಮೇಲೆ '35/100' ಎಂದು ಬರೆದುಕೊಂಡಿದ್ದಾರೆ. ಕಾಲೇಜ್‌ ದಿನಗಳಲ್ಲಿ 100ಕ್ಕೆ 35 ಅಂಕ ಪಡೆದವನು ಒಂಥರಾ ಸೂಪರಮ್ಯಾನ್‌ ಇದ್ದಹಾಗೆ ಎನ್ನುವುದು ನಿರ್ದೇಶಕ ಅನೂಪ್‌ ಅಭಿಪ್ರಾಯ.ಈ ಪೋಸ್ಟರ್‌ನ ಮತ್ತೊಂದು ವಿಶೇಷತೆ ಎಂದರೆ ಅತ್ಯಾಧುನಿಕ hasselblad ಕ್ಯಾಮೆರಾವನ್ನು ಬಳಸಿದ್ದು. ಬಾಲಿವುಡ್‌ನ ಮನೀಶ್‌ ಠಾಕೂರ್‌ ಕ್ಯಾಮೆರಾ ಕಣ್ಣಲ್ಲಿ ಚಿತ್ರದ ಪೋಸ್ಟರ್‌ ಸೆರೆಯಾಗಿದೆ. ಅಷ್ಟೇ ಅಲ್ಲದೆ ಪೋಸ್ಟರ್‌ನಲ್ಲಿ ನಿರೂಪ್‌ ಗರ್ಲ್ಸ್‌ ಹಾಸ್ಟೆಲ್‌ ಮುಂದೆ ನಿಂತಿರುವುದು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.'ರಂಗಿತರಂಗ' ನಾಯಕನ ಸೂಪರಮ್ಯಾನ್‌ ಅವತಾರ 'ರಂಗಿತರಂಗ' ನಾಯಕನ ಸೂಪರಮ್ಯಾನ್‌ ಅವತಾರ Reviewed by VIVEKARAMA on ನವೆಂಬರ್ 04, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.