ಅನುಷ್ಕಾ ಬರ್ತ್‌ಡೇಗೆ "ಭಾಗಮತಿ' ಗಿಫ್ಟ್

ಖ್ಯಾತ ಬಹುಭಾಷಾ ನಟಿ "ಬಾಹುಬಲಿ'ಯ "ದೇವಸೇನಾ' ಅನುಷ್ಕಾ ಶೆಟ್ಟಿಗೆ ಇಂದು 35ನೇ ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಅವರ ಹೊಸ ಚಿತ್ರ 'ಭಾಗಮತಿ'ಯ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಕರ್ನಾಟಕದ ಕರಾವಳಿ ಭಾಗದವರಾದ ಅನುಷ್ಕಾ ಶೆಟ್ಟಿ ಟಾಲಿವುಡ್ ಚಿತ್ರರಂಗಕ್ಕೆ 2005ರಲ್ಲಿ ಪ್ರವೇಶಿಸಿದ್ದರಲ್ಲದೇ ಅವರ ನಟನೆಯಿಂದಲೇ ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ.ಮುಖ್ಯವಾಗಿ "ಬಾಹುಬಲಿ 1 ಮತ್ತು 2' ಚಿತ್ರಗಳ ಅಭಿನಯದಿಂದ ಪ್ರಖ್ಯಾತರಾಗಿದ್ದಾರೆ. ಇದೀಗ ಅವರ ನಟನೆಯ ಲೀಡ್‌ ರೋಲ್‌ನ ವಿಭಿನ್ನ ಕಾನ್ಸೆಪ್ಟ್‌ನ "ಭಾಗಮತಿ' ಚಿತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಅನುಷ್ಕಾ ಜನ್ಮ ದಿನದ ಹಿನ್ನೆಲೆಯಲ್ಲೇ "ಭಾಗಮತಿ' ಫಸ್ಟ್‌ಲುಕ್‌ನ್ನು ಸೋಮವಾರ ರಿಲೀಸ್‌ ಮಾಡಲಾಗಿದೆ. "ಭಾಗಮತಿ' ಚಿತ್ರವನ್ನು ಜಿ.ಅಶೋಕ್‌ ನಿರ್ದೇಶಿಸಿದರೆ, ಯುವಿ ಕ್ರಿಯೇಷನ್‌ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದೆ."ಭಾಗಮತಿ' ಫಸ್ಟ್‌ಲುಕ್‌ ಗಮನಿಸಿದರೆ ಅನುಷ್ಕಾ ಒಂದು ಕೈಯಲ್ಲಿ ರಕ್ತದ ಕಲೆಗಳಿರುವ ಸುತ್ತಿಗೆ ಹಾಗೂ ಮತ್ತೊಂದು ಕೈಯಲ್ಲಿ ಗಾಯಗೊಂಡು ರಕ್ತ ಮೆತ್ತಿಕೊಂಡಿರುವುದನ್ನು ಕಾಣಬಹುದು. ತೆಲುಗು ಹಾಗು ತಮಿಳು ಭಾಷೆಯಲ್ಲಿ "ಭಾಗಮತಿ' ಚಿತ್ರ ನಿರ್ಮಾಣವಾಗುತ್ತಿದ್ದು, ಡಿಸೆಂಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ಅಲ್ಲದೇ ಚಿತ್ರದಲ್ಲಿ ಆದಿ, ಉನ್ನಿ ಮುಕುಂದನ್‌, ಜಯರಾಮ್, ಆಶಾ ಶರತ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಅನುಷ್ಕಾ ಬರ್ತ್‌ಡೇಗೆ "ಭಾಗಮತಿ' ಗಿಫ್ಟ್ ಅನುಷ್ಕಾ ಬರ್ತ್‌ಡೇಗೆ "ಭಾಗಮತಿ' ಗಿಫ್ಟ್ Reviewed by VIVEKARAMA on ನವೆಂಬರ್ 07, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.