ಮತ್ತೆ ಹಿರಿತೆರೆಗೆ ರಮಣ್‌ ಖ್ಯಾತಿಯ ಸ್ಕಂದ

ಕಿರುತೆರೆಯ ಫೆವರಿಟ್‌ ಧಾರಾವಾಹಿಯ ಎಂದೆ ಹೆಸರು ಮಾಡಿರುವ ರಾಧಾ ರಮಣದ ನಾಯಕ ಸ್ಕಂದ ಈಗ ಮತ್ತೆ ಹಿರಿತೆರೆಯತ್ತ ಬಂದಿದ್ದಾರೆ.


ರಾಧಾ ರಮಣ ಮೂಲಕ ಸಾಕಷ್ಟು ಹುಡುಗಿಯರ ಮನಗೆದ್ದಿರುವ ರಮಣ್‌ ಅರ್ಥಾತ್‌ ಸ್ಕಂದ ಕಾನೂರಾಯಣ ಎಂಬ ಸಿನಿಮಾದಲ್ಲಿ ನಾಯಕರಾಗಿದ್ದಾರೆ.

ಸ್ಕಂದ ಯುಟರ್ನ್‌, ಚಾರುಲತ ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದವರು. ನಂತರದ ದಿನಗಳಲ್ಲಿ ರಾಧಾ ರಮಣ ಸೀರಿಯಲ್‌ನಲ್ಲಿ ನಟಿಸಲು ಆರಂಭಿಸಿದರು. ಸ್ಕಂದ ಅವರಿಗೆ ಸಿನಿಮಾದಲ್ಲಿನ ಜನಪ್ರಿಯತೆಗಿಂತ ಸೀರಿಯಲ್‌ನಲ್ಲೇ ಅವರು ಫೇಮಸ್‌ ಆದರು. ಅದರಲ್ಲೂ ರಮಣ್‌ ಪಾತ್ರಕ್ಕೆ ಅವರಿಗೆ ಮಹಿಳಾ ಅಭಿಮಾನಿಗಳೇ ಅತಿ ಹೆಚ್ಚು ಸೃಷ್ಟಿಯಾಗಿದ್ದಾರೆ.
ಈಗ ಇವರು ನಾಗಭರಣ ನಿರ್ದೇಶನದ ಕಾನೂರಾಯಣ ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮತ್ತೆ ಹಿರಿತೆರೆಗೆ ಮರಳಿದ್ದಾರೆ. ಕಾನೂರಾಯಣ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸುವ ಸಿನಿಮಾವಾಗಿದೆ. ಒಬ್ಬ ರೈತ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಯೋಜನೆಗಳಿಂದ ಅನುಕೂಲ ಪಡೆದು ಹೇಗೆ ಪ್ರಗತಿ ಸಾಧಿಸುತ್ತಾನೆ ಎಂಬುದನ್ನು ಇಟ್ಟುಕೊಂಡು ಹಿರಿಯ ನಿರ್ದೇಶಕ ನಾಗಭರಣ ಕತೆ ಸಿದ್ದ ಪಡಿಸಿದ್ದಾರೆ.ಈ ಸಿನಿಮಾದಲ್ಲಿ ಸ್ಕಂದಗೆ ನಟಿ ಸೋನುಗೌಡ ನಾಯಕಿಯಾಗಿದ್ದಾರೆ. ಒಟ್ಟಿನಲ್ಲಿ ಕಾನೂರಾಯಣ ಮೂಲಕ ಸ್ಕಂದ ಬಿಗ್‌ ಸ್ಕ್ರೀನ್‌ನಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಮತ್ತೆ ಹಿರಿತೆರೆಗೆ ರಮಣ್‌ ಖ್ಯಾತಿಯ ಸ್ಕಂದ ಮತ್ತೆ ಹಿರಿತೆರೆಗೆ ರಮಣ್‌ ಖ್ಯಾತಿಯ ಸ್ಕಂದ Reviewed by VIVEKARAMA on ನವೆಂಬರ್ 06, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.