ಒಂದೇ ವೇದಿಕೆಯಲ್ಲಿ ಶಿವಣ್ಣ ಜತೆ ಸ್ಟೆಪ್ ಹಾಕಿದ ಅಲ್ಲು ಶಿರೀಶ್

ದುನಿಯಾ ಸೂರಿ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ 'ಟಗರು'. ಇದೀಗ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಕೇವಲ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲ್ಪಟ್ಟಿದೆ.ಕೆ ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದ ಪಾತ್ರವರ್ಗದಲ್ಲಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ ಹಾಗೂ ವಸಿಷ್ಠ ಸಿಂಹ ಇದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸಿದ್ದು ಮಾಹೇನ್ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಟೀಸರ್‌ನಲ್ಲಿ ಪ್ರತೀಕಾರ, ಸೆಂಟಿಮೆಂಟ್, ರೊಮ್ಯಾನ್ಸ್, ರಕ್ತದೋಕುಳಿ ಹಾಗು ಗುಂಡಿನ ಮೊರೆತವನ್ನು ಕಾಣಬಹುದು.ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ತೆಲುಗು ನಟ ಅಲ್ಲು ಶಿರೀಶ್ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹಾಡೊಂದಕ್ಕೆ ಅವರು ಶಿವಣ್ಣ ಜತೆಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ಇನ್ನಷ್ಟು ಥ್ರಿಲ್ಲಾಗಿಸಿದ್ದಾರೆ. ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಕುಮಾರ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಒಟ್ಟಾರೆ ಟಗರು ಚಿತ್ರದ ಟೀಸರ್ ಸೂಪರ್ ಹಿಟ್ ಆಗಿದೆ.
ಒಂದೇ ವೇದಿಕೆಯಲ್ಲಿ ಶಿವಣ್ಣ ಜತೆ ಸ್ಟೆಪ್ ಹಾಕಿದ ಅಲ್ಲು ಶಿರೀಶ್ ಒಂದೇ ವೇದಿಕೆಯಲ್ಲಿ ಶಿವಣ್ಣ ಜತೆ ಸ್ಟೆಪ್ ಹಾಕಿದ ಅಲ್ಲು ಶಿರೀಶ್ Reviewed by VIVEKARAMA on ನವೆಂಬರ್ 09, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.