ಕನ್ನಡದಲ್ಲಿ 'ಶಿವಗಾಮಿ' ರಮ್ಯಾಕೃಷ್ಣ

ಬಾಹುಬಲಿ ಸಿನಿಮಾದಲ್ಲಿ ನಾಯಕ ಪ್ರಭಾಸ್‌ನಷ್ಟೇ ಖ್ಯಾತಿ ಗಳಿಸಿದ್ದ ರಮ್ಯ ಕೃಷ್ಣ ಕನ್ನಡಕ್ಕೆ ಶಿವಗಾಮಿಯಾಗಿ ಆಗಮಿಸುತ್ತಿದ್ದಾರೆ. ಅರ್ಥಾತ್‌, ಶಿವಗಾಮಿ ಎಂಬ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಈಗಾಗಲೇ ಕೊನೆಯ ಹಂತದ ಚಿತ್ರೀಕರಣದಲ್ಲಿರುವ ಈ ಚಿತ್ರದಲ್ಲಿ ರಮ್ಯಕೃಷ್ಣ ರಾಣಿ ಶಿವಗಾಮಿಯಾಗಿ ನಟಿಸಿರುವ ಫೋಟೋಗಳು ಬಿಡುಗಡೆಯಾಗದೆ. ಇದು 9 ನೇ ಶತಮಾನದ ರಾಣಿ ಶಿವಗಾಮಿಯ ಕತೆಯಾಗಿದ್ದು, ಅರಮನೆಯ ದೊಡ್ಡ ದೊಡ್ಡ ಸೆಟ್‌ ಹಾಕಿ ಶೂಟಿಂಗ್‌ ಮಾಡಲಾಗಿದೆ.ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿದ್ದ ಮಧು ಮಿಣಕನ ಗುರ್ಕಿ ಶಿವಗಾಮಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಗಂಗ ಪಟ್ಟಂ ಶ್ರೀಧರ್‌ ಇದರ ನಿರ್ಮಾಪಕರು. ರಮ್ಯಕೃಷ್ಣ ಜತೆ ಸಿಂಪಾಲ್ಲಾಗಿನ್ನೊಂದ್‌ ಲವ್‌ಸ್ಟೋರಿ ಖ್ಯಾತಿಯ ಪ್ರವೀಣ್‌, ಪಾಯಲ್‌, ರವಿಕಾಳೆ, ಅವಿನಾಶ್‌, ಮಧುಸೂದನ್‌, ರಮೇಶ್‌ ಪಂಡಿತ್‌ ಮತ್ತಿತರರು ನಟಿಸುತ್ತಿದ್ದಾರೆ. ಈ ಸಿನಿಮಾಗೆ ಬಾಹುಬಲಿ ಚಿತ್ರಕ್ಕೆ ಗ್ರಾಫಿಕ್ಸ್‌ ಮಾಡಿದ್ದವರಿಂದ ಸಿಜಿ ವರ್ಕ್‌ ಮಾಡಿಸಲಾಗುತ್ತಿದೆ.
ಕನ್ನಡದಲ್ಲಿ 'ಶಿವಗಾಮಿ' ರಮ್ಯಾಕೃಷ್ಣ ಕನ್ನಡದಲ್ಲಿ 'ಶಿವಗಾಮಿ' ರಮ್ಯಾಕೃಷ್ಣ Reviewed by VIVEKARAMA on ನವೆಂಬರ್ 07, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.