ಮುಫ್ತಿ ಟೀಸರ್ ಬಿಡುಗಡೆ: ಶಿವಣ್ಣ, ಶ್ರೀಮುರುಳಿ ಘರ್ಜನೆ!

ಕನ್ನಡ ರಾಜ್ಯೋತ್ಸವದಂದು ಮುಫ್ತಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಹವಾ ಸೃಷ್ಟಿಸಿದೆ.
ಸುಮಾರು 1.50 ಲಕ್ಷ ಮಂದಿ ಟೀಸರ್ ವೀಕ್ಷಿಸಿದ್ದು,  ಹವು ಪಂಚಿಂಗ್ ಡೈಲಾಗ್ ಗಳು ಎಲ್ಲರ ಮನಸೆಳೆದಿವೆ. ಗ್ಯಾಂಗ್ ಸ್ಟರ್ ಲುಕ್ ನಲ್ಲಿ ಶ್ರೀಮುರುಳಿ ಸಿಗ್ನೇಚರ್ ಸ್ಟೈಲ್ ಭಾರೀ ಮೆಚ್ಚುಗೆ ಪಡೆದಿದೆ.
ನಟ ಶಿವರಾಜ್ ಕುಮಾರ್ ಅವರ ಬೆರಗುಗೊಳಿಸುವ ಪಾತ್ರ ಎಲ್ಲರ ಗಮನ ಸೆಳೆದಿದೆ. ಮುಫ್ತಿಯಲ್ಲಿ ಶಿವಣ್ಣ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಟ್ರೈಲರ್ ಅನ್ನು ಪ್ರೇಕ್ಷಕರು ಸ್ವೀಕರಿಸಿರುವುದಕ್ಕೆ ನಟ ಶ್ರೀ ಮುರುಳಿ ಸಂತಸಗೊಂಡಿದ್ದಾರೆ. ಪ್ರೇಕ್ಷಕರನ್ನು ತಲುಪಲು ಇದು ಮತ್ತೊಂದು ಪ್ರಯತ್ನವಾಗಿದ್ದು,  ಅವರ ನಿರೀಕ್ಷೆಯನ್ನು ಹುಸಿಗೊಳಿಸುವುದಗಿಲ್ಲ ಎಂದು ಹೇಳಿದ್ದಾರೆ.ಟ್ರೈಲರ್ ಜೊತೆ ಚಿತ್ರ ತಂಡ ಮುಫ್ತಿ ಸಿನಿಮಾದ ಪ್ರಮೋಷನ್ ಕೂಡ ಆರಂಭಿಸಿದ್ದಾರೆ. ಸಿನಿಮಾ ಸೆನ್ಸಾರ್  ಪೂರ್ಣಗೊಂಡ ನಂತರ ಚಿತ್ರ ಬಿಡುಗಡೆ ದಿನಾಂಕ ನಿರ್ಧರಿಸುವುದಾಗಿ ತಿಳಿಸಿದ್ದಾರೆ.
ಮುಫ್ತಿ ಟೀಸರ್ ಬಿಡುಗಡೆ: ಶಿವಣ್ಣ, ಶ್ರೀಮುರುಳಿ ಘರ್ಜನೆ! ಮುಫ್ತಿ ಟೀಸರ್ ಬಿಡುಗಡೆ: ಶಿವಣ್ಣ, ಶ್ರೀಮುರುಳಿ ಘರ್ಜನೆ! Reviewed by VIVEKARAMA on ನವೆಂಬರ್ 03, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.