ವಿದೇಶಗಳಲ್ಲಿ ಸಂಗೀತ ಸುಧೆ ಹರಿಸಲಿರುವ ಅರ್ಜುನ್ ಜನ್ಯ

ಸ್ಯಾಂಡಲ್‌ವುಡ್‌ನ ಎ ಆರ್ ರೆಹಮಾನ್ ಎಂದೇ ಗುರುತಿಸಿಕೊಂಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದೀಗ ಸಂಗೀತ ಸುಧೆ ಹರಿಸಲು ಪ್ರಪಂಚ ಪರ್ಯಟನೆಗೆ ಸಜ್ಜಾಗಿದ್ದಾರೆ. ಇದೇ ವಾರದಿಂದ ಅವರ ಸಂಗೀತ ಪರ್ಯಟನೆ ಆರಂಭವಾಗಲಿದೆ.ಸಿಂಗಪುರ, ಆಸ್ಟ್ರೇಲಿಯಾ, ಲಂಡನ್ ಹಾಗೂ ಯುಎಸ್‌ನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ನವೆಂಬರ್ 5ರಿಂದ ಅವರ ಪರ್ಯಟನೆ ಸಿಂಗಪುರದಿಂದ ಶುರುವಾಗಲಿದೆ. ಅಲ್ಲಿ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದು ಅವರ ಜತೆಗೆ ಅನುರಾಧಾ ಭಟ್, ವ್ಯಾಸರಾಜ್ ಹಾಗೂ ಅನುಪಮಾ ಭಟ್ ಸಹ ಇರುತ್ತಾರೆ.ಸತತ ಮೂರು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಅವರ ಹಿಟ್ ಹಾಡುಗಳ ಸುರಿಮಳೆಯಾಗಲಿದೆ. ಹೆಬ್ಬುಲಿ, ಚಕ್ರವರ್ತಿ, ಅಧ್ಯಕ್ಷ, ವಿಕ್ಟರಿ, ಭಜರಂಗಿ, ಮುಂಗಾರು ಮಳೆ 2 ಸೇರಿದಂತೆ ಹಲವಾರು ಸಿನಿಮಾಗಳ ಹಿಟ್ ಸಾಂಗ್ಸ್ ಸಿಂಗಪುರದಲ್ಲಿ ಅಬ್ಬರಿಸಲಿವೆ.

ಇದರ ಜತೆಗೆ ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರ ಹಾಡುಗಳನ್ನೂ ಅನಿವಾಸಿ ಕನ್ನಡಿಗರು ಕೇಳಿ ಆನಂದಿಸಬಹುದು. ಅರ್ಜುನ್ ಜನ್ಯ ಹಾಡುಗಳನ್ನು ಕೇಳುವುದರ ಜತೆಗೆ ಮಲೇಷ್ಯಾದ ನೃತ್ಯಗಾರ್ತಿಯರ ಡಾನ್ಸ್ ಸಹ ಕಣ್ತುಂಬಿಕೊಳ್ಳಬಹುದು. ಇನ್ನೊಂದು ವಿಶೇಷ ಎಂದರೆ ರ‍್ಯಾಪ್ ಹಾಡುಗಳ ಮೂಲಕ ಕನ್ನಡವನ್ನು ಕಲಿಸುವ ಪ್ರಯತ್ನವನ್ನೂ ಈ ಸಂದರ್ಭದಲ್ಲಿ ಅರ್ಜುನ್ ಜನ್ಯ ಮಾಡಲಿದ್ದಾರೆ. ಇದೇ ಕಾರ್ಯಕ್ರಮದ ಹೈಲೈಟ್ ಎನ್ನಬಹುದು.
ವಿದೇಶಗಳಲ್ಲಿ ಸಂಗೀತ ಸುಧೆ ಹರಿಸಲಿರುವ ಅರ್ಜುನ್ ಜನ್ಯ ವಿದೇಶಗಳಲ್ಲಿ ಸಂಗೀತ ಸುಧೆ ಹರಿಸಲಿರುವ ಅರ್ಜುನ್ ಜನ್ಯ Reviewed by VIVEKARAMA on ನವೆಂಬರ್ 04, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.