ಕಾಲೇಜ್ ಕುಮಾರ್ ಸಿನಿಮಾದಲ್ಲಿ 'ಲೂನಾ' ಕಮಾಲ್

 ಸಿನಿಮಾದಲ್ಲಿ ಕೇವಲ ನಾಯಕ ನಟ ಮಾತ್ರ ಪರದೆ ಮೇಲೆ ಲೈಮ್ ಲೈಟ್ ಆಗುವುದಿಲ್ಲ, ಕೆಲವೊಮ್ಮೆ ಹೀರೋ ಬಳಸಿದ ವಾಹನಗಳು ಕೂಡ ಬೆಳಕಿಗೆ ಬರುತ್ತವೆ, ಅಂತಹುದ್ದೇ ಮ್ಯಾಜಿಕ್ ಕಾಲೇಜ್ ಕುಮಾರ್ ಸಿನಿಮಾದಲ್ಲೂ ನಡೆದಿದೆ.ಕಿರಿಕ್ ಪಾರ್ಟಿ ಸಿನಿಮಾದಲ್ಲಿ  ಹಳದಿ ಬಣ್ಣದ ಕಂಟೆಸ್ಸಾ ಕಾರು ಗಮನ ಸೆಳೆದಂತೆ ಕಾಲೇಜ್ ಕುಮಾರ್ ಸಿನಿಮಾದಲ್ಲಿ  ಲೂನಾ ಕೂಡ ಅಭಿಮಾನಿಗಳ ಮನಗೆದ್ದಿದೆ.ಕಾಲೇಜ್ ಕುಮಾರನ ತಂದೆಯಾಗಿ ನಟಿಸಿರುವ ರವಿಶಂಕರ್ ಲುಕ್ ಮತ್ತು ಅವರ ಅಭಿನಯ ಬೊಂಬಾಟ್ ಆಗಿದೆ.  ನಾಯಕ ವಿಕ್ಕಿ ಬಳಸಿರುವ ಕ್ಲಾಸಿಕ್ ಮಾಡೆಲ್ ಲೂನಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದು ತಂದೆ-ಮಗನ ಕಥೆಯಾಗಿದೆ.

ರವಿಶಂಕರ್ ಆಡಿಟರ್ ಕಚೇರಿಯಲ್ಲಿ ಕ್ಲರ್ಕ್ ಆಗಿರುತ್ತಾರೆ. ಅವರ ಬಳಿ ಒಂದು ಲೂನಾ ಇದ್ದು ನಂತರ ಅದನ್ನು ತಮ್ಮ ಮಗನಿಗೆ ನೀಡುತ್ತಾರೆ.ತಮಿಳಿನ ವಿಐಪಿ ಸಿನಿಮಾದಿಂದ ಪ್ರೇರಿತಗೊಂಡು ಕಾಲೇಜ್ ಕುಮಾರ್ ಚಿತ್ರ ತೆಗೆಯಲಾಗಿದೆ ಎಂಬ ರೂಮರ್ಸ್ ಕೇಳಿ ಬಂದಿವೆ ಎಂಬ ಮಾತಿಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಸಂತೋಷ್, ಲೂನಾ ಮಧ್ಯಮ ವರ್ಗದ ಜನರ ಮೌಲ್ಯಗಳ ಸಂಕೇತ, ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಬಗ್ಗೆ ನೋಡಬಹುದು, ತಂದೆ-ಮಗ ಇಬ್ಬರು ಲೂನಾ ಬಗ್ಗೆ ಹೊಂದಿರುವ ಭಾವನಾತ್ಮಕ  ಸಂಬಂಧದ ಕಥೆಯಾಗಿದೆ ಎಂದು ಹೇಳಿದ್ದಾರೆ.

ಲೂನಾ ಸೆಟ್ ನಲ್ಲಿ ಹಲವು ಕಲಾವಿದರ ಮನ ಸೆಳೆದಿದೆ, ನಟಿ ಸಂಯುಕ್ತಾ ಹೆಗಡೆ ಸೇರಿದಂತೆ ಪ್ರತಿಯೊಬ್ಬರು ಅದನ್ನು ಓಡಿಸಬೇಕೆಂದು ಬಯಸುತ್ತಿದ್ದರು ಎಂದು ಹೇಳಿದ್ದಾರೆ. ಒಂದು ವೇಳೆ ಪೆಟ್ರೋಲ್ ಮುಗಿದರೇ ಪೆಟಲ್ ತುಳಿಯುವ ಮೂಲಕ ಅದನ್ನು ಓಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಕಾಲೇಜ್ ಕುಮಾರ್ ಸಿನಿಮಾದಲ್ಲಿ 'ಲೂನಾ' ಕಮಾಲ್ ಕಾಲೇಜ್ ಕುಮಾರ್ ಸಿನಿಮಾದಲ್ಲಿ 'ಲೂನಾ' ಕಮಾಲ್ Reviewed by VIVEKARAMA on ನವೆಂಬರ್ 03, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.