ನ.7 ಕ್ಕೆ ಅರ್ಜುನ್ ಸರ್ಜಾ ನಿರ್ದೇಶನದ ಪ್ರೇಮ ಬರಹ ಟೀಸರ್ ಬಿಡುಗಡೆ?

ಸ್ಯಾಂಡಲ್ ವುಡ್ ನ ಖ್ಯಾತನಾಮರು "ವಾಚ್ ಇಟ್ ಔಟ್ ಆನ್ ನವೆಂಬರ್ 7" ಎಂದಷ್ಟೇ ಹೇಳುತ್ತಿರುವ 5 ಸೆಕೆಂಡ್ ಗಳ ಟೀಸರ್ ಇಂಟರ್ ನೆಟ್ ನಲ್ಲಿ ಸಂಚಲನ ಮೂಡಿಸಿದೆ.ಅಂಬರೀಷ್, ಸುಮಲತಾ, ದರ್ಶನ್, ಅರ್ಜುನ್ ಸರ್ಜಾ, ಐಶ್ವರ್ಯ ಅರ್ಜುನ್, ದೃವ ಸರ್ಜಾ, ಚಿರಂಜೀವಿ ಸರ್ಜಾ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಗಣ್ಯರು 5 ಸೆಕೆಂಡ್ ಗಳ ಟೀಸರ್ ನಲ್ಲಿದ್ದಾರೆ. ಟೀಸರ್ ನಲ್ಲಿ ಕೇವಲ ದಿನಾಂಕದ ಬಗ್ಗೆಯಷ್ಟೇ ಮಾತನಾಡಿರುವುದು ಕುತೂಹಲ ಕೆರಳಿಸಿದ್ದು ಚಲನಚಿತ್ರ ಪ್ರಿಯರು ನ.07 ಕ್ಕಾಗಿ ಕಾಯುತ್ತಿದ್ದಾರೆ.ಚಿತ್ರರಂಗವೂ ಸಹ ಈ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ, ಆದರೆ ಸಿಟಿ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ನ.07 ರಂದು ಅರ್ಜುನ್ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ರೇಮ ಬರಹ ಟೀಸರ್ ಬಿಡುಗಡೆಯಾಗಲಿದೆ. ಅರ್ಜುನ್ ಸರ್ಜಾ ನಟನೆಯ ಪ್ರೇಮ ಬರಹ, ಕೋಟಿ ತರಹ ಹಾಡಿನ ಸಾಲು ಈ ಚಿತ್ರದ ಶೀರ್ಷಿಕೆಯಾಗಿದ್ದು, ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದರಿಂದ ಈ ಚಿತ್ರ ಮತ್ತಷ್ಟು ವಿಶೇಷವೆನಿಸಿದೆ.


ತಮಿಳಿನಲ್ಲೂ ಚಿತ್ರ ನಿರ್ಮಾಣವಾಗುತ್ತಿದ್ದು, ಅರ್ಜುನ್ ಸರ್ಜಾ ಚಿತ್ರಕಥೆ ರಚಿಸಿ, ನಿರ್ಮಾಣ ಮಾಡುತ್ತಿದ್ದಾರೆ. ಸುಹಾಸಿನಿ, ಸಾಧುಕೋಕಿಲಾ, ರಂಗಾಯಣ ರಘು ನಟಿಸಿದ್ದಾರೆ
ನ.7 ಕ್ಕೆ ಅರ್ಜುನ್ ಸರ್ಜಾ ನಿರ್ದೇಶನದ ಪ್ರೇಮ ಬರಹ ಟೀಸರ್ ಬಿಡುಗಡೆ? ನ.7 ಕ್ಕೆ ಅರ್ಜುನ್ ಸರ್ಜಾ ನಿರ್ದೇಶನದ ಪ್ರೇಮ ಬರಹ ಟೀಸರ್ ಬಿಡುಗಡೆ? Reviewed by VIVEKARAMA on ನವೆಂಬರ್ 07, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.