ಮೊದಲ ದಿನವೇ ಟ್ರೋಲಿಗರಿಂದ 'TRP' ಗಳಿಸಿದ 'ಬಿಗ್ ಬಾಸ್' ನಿವೇದಿತಾ ಗೌಡ

'ಬಿಗ್ ಬಾಸ್ ಕನ್ನಡ 5'ನೇ ಆವೃತ್ತಿಯಲ್ಲಿ ಮನೆಯೊಳಗೆ ಒಟ್ಟು 17 ಜನ ಸ್ಪರ್ಧಿಗಳು ಪ್ರವೇಶ ಮಾಡಿದ್ದಾರೆ. ಎಲ್ಲರೂ ಒಂದೊಂದು ರೀತಿಯಲ್ಲಿ ಡಿಫ್ರೆಂಟ್ ಆಗಿದ್ದಾರೆ. ಈ 17 ಜನರ ಪೈಕಿ ಮೈಸೂರಿನ ಯುವಕಿ ನಿವೇದಿತಾ ಗೌಡ ಮೊದಲ ದಿನವೇ 'TRP' ಗಳಿಸಿದ್ದಾರೆ.

ಹೌದು, ನಿವೇದಿತಾ ಗೌಡ 'ಬಿಗ್ ಬಾಸ್' ವೇದಿಕೆಗೆ ಬರುತ್ತಿದ್ದಂತೆ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಇನ್ನು ಅವರ ವೇಷಭೂಷಣ, ಮಾತು, ಅವರು ಮಾತನಾಡುವ ಕನ್ನಡ....ಎಲ್ಲವೂ ಬಿಗ್ ಬಾಸ್ ಮನೆಯ ಹಾಟ್ ಟಾಪಿಕ್ ಆಗಿದೆ. ಇದು ಟ್ರೋಲಿಗರನ್ನ ಕೆರಳಿಸಿದೆ. ಹೀಗಾಗಿ, ಮೊದಲ ದಿನವೇ ಟ್ರೋಲಿಗರಿಗೆ ನಿವೇದಿತಾ ಗೌಡ ಆಹಾರವಾಗಿದ್ದಾರೆ.


ಅಪ್ಪಿ ತಪ್ಪಿ ಕಳೆದ ಬಾರಿ ಬಿಗ್ ಬಾಸ್ ಗೆ ನಿವೇದಿತಾ ಗೌಡ ಬಂದಿದ್ದರೇ, ಪ್ರಥಮ್ ಮತ್ತು ಈಕೆಯ ಕಾಂಬಿನೇಷನ್ ಸೂಪರ್ ಆಗಿರುತ್ತಿತ್ತಂತೆ.

ನಿಮ್ಮಲ್ಲಿ ಯಾರಾದ್ರೂ ಕಂಗ್ಲೀಷ್ ಮಾತನಾಡುವ ಸ್ನೇಹಿತರಿದ್ದಾರೆ ನಿವೇದಿತಾ ಗೌಡ ಅವರನ್ನ ಟ್ಯಾಗ್ ಮಾಡಬಹುದಂತೆ.

ಸಂಜನಾ ತಂಗಿ ಬಂದ್ರು 

ನಿವೇದಿತಾ ಗೌಡ ಅವರ ಲುಕ್, ಗೆಟಪ್ ಎಲ್ಲವೂ ನೋಡಿದ ಟ್ರೋಲಿಗರು ಸಂಜನಾ ಅವರ ತಂಗಿ ಎಂದು ಕಾಲೆಳೆಯುತ್ತಿದ್ದಾರೆ.

ಕನ್ನಡ ಬರಲ್ವಾ ಅಮ್ಮಿ.... 

ಮೂಲತಃ ಮೈಸೂರಿನವರಾಗಿದ್ದು, ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುವುದಿಲ್ಲವೆಂದು ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಅವರನ್ನ ಟ್ರೋಲ್ ಪೇಜ್ ಗಳು ಟ್ರೋಲ್ ಮಾಡಿವೆ.
ಮೊದಲ ದಿನವೇ ಟ್ರೋಲಿಗರಿಂದ 'TRP' ಗಳಿಸಿದ 'ಬಿಗ್ ಬಾಸ್' ನಿವೇದಿತಾ ಗೌಡ ಮೊದಲ ದಿನವೇ ಟ್ರೋಲಿಗರಿಂದ 'TRP' ಗಳಿಸಿದ 'ಬಿಗ್ ಬಾಸ್' ನಿವೇದಿತಾ ಗೌಡ Reviewed by VIVEKARAMA on ಅಕ್ಟೋಬರ್ 16, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.