ಯಶ್ 'KGF' ಅಡ್ಡದಿಂದ ಹೊರಬಂದ 'ಪಾರ್ಟ್-2' ಕಥೆ ಇದು.!

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷೆಯ ಸಿನಿಮಾ 'ಕೆ.ಜಿ.ಎಫ್' ಹಲವು ವಿಷ್ಯಗಳಿಗೆ ಕುತೂಹಲ ಹೆಚ್ಚಿಸಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ದಕ್ಷಿಣ ಭಾರತದಲ್ಲೇ ಹೆಚ್ಚು ಸುದ್ದಿ ಮಾಡುತ್ತಿದೆ.

ಯಶ್ ಅವರ ಗೆಟಪ್ ಮತ್ತು ಸಿನಿಮಾದ ಕಥೆಯಿಂದ ಇಡೀ ಭಾರತ ಚಿತ್ರರಂಗದ ಗಮನ ಸೆಳೆದಿರುವ 'ಕೆ.ಜಿ.ಎಫ್' ತಂಡದಿಂದ ಈಗ ಎಕ್ಸ್ ಕ್ಲೂಸಿವ್ ಸುದ್ದಿ ಹೊರಬಿದ್ದಿದೆ.

ಯಶ್ 'ಕೆ.ಜಿ.ಎಫ್' ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂಬ ಅಚ್ಚರಿಯ ವಿಷ್ಯ ಬಹಿರಂಗವಾಗಿದೆ.


'ಬಾಹುಬಲಿ'ಯಂತೆ 'ಕೆ.ಜಿ.ಎಫ್' ಕೂಡ ಎರಡು ಭಾಗ.! 
ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮಾಡಿತ್ತು. ಈಗ ಅದೇ ಸೂತ್ರವನ್ನ ಅನುಸರಿಸುತ್ತಿರುವ 'ಕೆ.ಜಿ.ಎಫ್' ಎರಡು ಭಾಗಗಳಲ್ಲಿ ತಯಾರಾಗುತ್ತಿದೆಯಂತೆ.


ಆರಂಭದಲ್ಲಿ ಈ ಬಗ್ಗೆ ಚಿಂತಿಸದ ಚಿತ್ರತಂಡ ಈಗ ಇಂತಹದೊಂದು ನಿರ್ಧಾರಕ್ಕೆ ಬಂದಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತಿದೆ. 'ಬಾಹುಬಲಿ' ಚಿತ್ರದಂತೆ 'ಕೆ.ಜಿ.ಎಫ್' ಚಿತ್ರಕ್ಕೂ ಮಾರುಕಟ್ಟೆಯಲ್ಲಿ ಕ್ರೇಜ್ ಹೆಚ್ಚಿರುವುದರಿಂದ ಪಾರ್ಟ್ 2 ಬರಲು ಕಾರಣವಾಗುತ್ತಿದೆ ಎನ್ನಲಾಗಿದೆ.


ಐದು ಭಾಷೆಗಳಲ್ಲಿ ಸಿದ್ದವಾಗುತ್ತಿರುವ 'ಕೆ.ಜಿ.ಎಫ್' ಚಿತ್ರದ ಸ್ಯಾಟ್ ಲೈಟ್ ಮತ್ತು ಆಡಿಯೋ ಹಕ್ಕಿಗೆ ಹೆಚ್ಚಿನ ಬೇಡಿಕೆ ಇದೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎರಡರಲ್ಲೂ 'ಕೆ.ಜಿ.ಎಫ್' ಚಿತ್ರವನ್ನ ದೊಡ್ಡ ಮಟ್ಟದ ಯಶಸ್ಸು ಕಾಣಿಸಲು ಸಿನಿಮಾ ಮಂದಿ ಯೋಜನೆ ಹಾಕಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಪಾಲಿಗೆ 'ಮಾಸ್ಟರ್ ಪೀಸ್' ಎನಿಸಿಕೊಂಡಿರುವ ನಟ ಯಶ್ ಅಭಿನಯದ ಹಲವು ಚಿತ್ರಗಳು ಹಿಂದಿ ಹಾಗೂ ಬೋಜ್ ಪುರಿ ಭಾಷೆಗಳಿಗೆ ಡಬ್ ಆಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಕರ್ನಾಟಕದಾಚೆಯೂ ಯಶ್ ಅಭಿಮಾನಿಗಳಿದ್ದಾರೆ ಎನ್ನುವುದು ಚಿತ್ರದ ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.


'ಕ್ರಿಸ್ ಮಸ್'ಗೆ ಕೆ.ಜಿ.ಎಫ್ ತೆರೆಕಾಣಬೇಕಿದೆ 
ಅಂದ್ಹಾಗೆ, ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ 'ಕೆ.ಜಿ.ಎಫ್' ಸಿನಿಮಾ ಇದೇ ಡಿಸೆಂಬರ್ ನಲ್ಲಿ 'ಕ್ರಿಸ್ ಮಸ್' ಹಬ್ಬದ ಪ್ರಯುಕ್ತ ತೆರೆ ಕಾಣಬೇಕಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆಡಿಯೋ ಹಾಗೂ ಟೀಸರ್ ಬಿಡುಗಡೆ ಮಾಡಲು ಸಿದ್ದವಾಗುತ್ತಿದೆ.

'ಕೆ.ಜಿ.ಎಫ್' ಪಾರ್ಟ್-2 ಬರುತ್ತಾ? 
ಇಷ್ಟೆಲ್ಲಾ ಬೇಡಿಕೆಗಳಿರುವ 'ಕೆ.ಜಿ.ಎಫ್' ಚಿತ್ರದ ಪಾರ್ಟ್ 2 ಬರುತ್ತೆ ಎಂದು ಹೇಳಲಾಗುತ್ತಿದೆ. ಇದನ್ನ ಚಿತ್ರತಂಡ ಸ್ಪಷ್ಟಪಡಿಸುವರೆಗೂ ನಂಬಲು ಸಾಧ್ಯವಿಲ್ಲ. ಇನ್ನುಳಿದಂತೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದು, ಚಿತ್ರದಲ್ಲಿ ಯಶ್ ಡಾನ್ ಪಾತ್ರದಲ್ಲಿ ಮಿಂಚಲಿದ್ದಾರೆ. 80ರ ದಶಕದ ಪಾತ್ರದಲ್ಲಿ ಯಶ್ ಬಣ್ಣ ಹಚ್ಚಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದೆ.

ಯಶ್ 'KGF' ಅಡ್ಡದಿಂದ ಹೊರಬಂದ 'ಪಾರ್ಟ್-2' ಕಥೆ ಇದು.! ಯಶ್ 'KGF' ಅಡ್ಡದಿಂದ ಹೊರಬಂದ 'ಪಾರ್ಟ್-2' ಕಥೆ ಇದು.! Reviewed by VIVEKARAMA on ಅಕ್ಟೋಬರ್ 17, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.