ಅಂಜನೀಪುತ್ರ ಸಿನಿಮಾದಲ್ಲಿ ಗೃಹಿಣಿಯರಿಗಾಗಿ ವಿಶೇಷ ಸಾಂಗ್

 ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಸಿನಿಮಾದ ಆಡಿಯೋ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

ರವಿ ಬಸ್ರೂರು ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಗೃಹಿಣಿಯರಿಗಾಗಿ ಹಾಡೊಂದನ್ನು ಸಮರ್ಪಸಲಾಗಿದೆ. ಇದೇ ಚಿತ್ರದ ಹೈಲೈಟ್ ಆಗಿದ್ದು, ಹಾಡು ಹಿಟ್ ಆಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.


ಪುನೀತ್ ಮತ್ತು ರಶ್ಮಿಕಾ ಈ ಹಾಡಿನಲ್ಲಿ ನಟಿಸಿದ್ದಾರೆ.  ಸಂಪೂರ್ಣವಾಗಿ ಕರಾವಳಿ ಮಾದರಿಯಲ್ಲಿ ನೃತ್ಯ ಸಂಯೋಜಿಸಲಾಗಿದೆ,  ಮೈಸೂರು ಮತ್ತು ಉತ್ತರ ಕರ್ನಾಟಕ ಭಾಷೆಗಳಲ್ಲಿ ಸಾಹಿತ್ಯ ರಚಿಸಲಾಗಿದೆ.  ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ತಮಿಳಿನ ಸೂಪರ್ ಸಿನಿಮಾ ಪೂಜೈ ನಿಂದ ಪ್ರೇರಿತಗೊಂಡು ಎಂ ಎನ್ ಕುಮಾರ್ ಅಂಜನೀಪುತ್ರ ಸಿನಿಮಾ ನಿರ್ಮಾಣ ಮಾಡಿದ್ದಾರೆ. ರಮ್ಯ ಕೃಷ್ಣ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಹರಿಪ್ರಿಯಾ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅಂಜನೀಪುತ್ರ ಸಿನಿಮಾದಲ್ಲಿ ಗೃಹಿಣಿಯರಿಗಾಗಿ ವಿಶೇಷ ಸಾಂಗ್ ಅಂಜನೀಪುತ್ರ ಸಿನಿಮಾದಲ್ಲಿ ಗೃಹಿಣಿಯರಿಗಾಗಿ ವಿಶೇಷ ಸಾಂಗ್ Reviewed by VIVEKARAMA on ಅಕ್ಟೋಬರ್ 21, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.