ಕಾಮಿಡಿ ಟಾಕೀಸ್ ಜಡ್ಜ್ ಆಗಿ ರಚಿತಾ ರಾಮ್, ಸೃಜನ್ ಲೋಕೇಶ್

ಸದ್ಯ ಸ್ಯಾಂಡಲ್ ವುಡ್ ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ರಚಿತಾರಾಮ್ ಜಾನಿ ಜಾನಿ ಎಸ್ ಪಾಪ, ಉಪ್ಪಿ-ರುಪ್ಪಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ, ಇದರ ಜೊತೆಗೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.ಈ ಮೊದಲು ಡ್ಯಾನ್ಸ್ ರಿಯಾಲಿಟಿ ಶೋ ಗೆ ಜಡ್ಜ್ ಆಗಿದ್ದ ರಚಿತಾ, ಈಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಟಾಕೀಸ್ ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಭಾಗವಹಿಸಲಿದ್ದಾರೆ.
ರಚಿತಾ ಜೊತೆಗೆ ಮತ್ತೊಬ್ಬ ಪಾಪ್ಯುಲರ್ ನಿರೂಪಕ ಸೃಜನ್ ಲೋಕೇಶ್ ಕೂಡ  ಈ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬರಲಿದ್ದಾರೆ, ಇನ್ನೂ ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದಿರುವ ನೀಲಿ ಕಣ್ಣಿನ ಹುಡುಗ ವಿಜಯ್ ಸೂರಿಯಾ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.ಮೊದಲ ಕೆಲವೊಂದು ಎಪಿಸೋಡ್ ಗಳ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ನವೆಂಬರ್ 4 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮೂವರು ಒಟ್ಟಿಗೆ ಬರುತ್ತಿರುವ ರಿಯಾಲಿಯಿ ಶೋ ಬಗ್ಗೆ ಈಗಾಗಲೇ ಕೂತೂಹಲ ಮೂಡಿದೆ, ಸೃಜನ್ ಅದ್ಬುತ ಕಾಮಿಡಿ ಕಾರ್ಯಕ್ರಮದ ಹೈಲೈಟ್ ಆಗಲಿದೆ.


ಕಾಮಿಡಿ ಟಾಕೀಸ್ ಜಡ್ಜ್ ಆಗಿ ರಚಿತಾ ರಾಮ್, ಸೃಜನ್ ಲೋಕೇಶ್ ಕಾಮಿಡಿ ಟಾಕೀಸ್ ಜಡ್ಜ್ ಆಗಿ ರಚಿತಾ ರಾಮ್, ಸೃಜನ್ ಲೋಕೇಶ್ Reviewed by VIVEKARAMA on ಅಕ್ಟೋಬರ್ 25, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.