ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.!

ಸ್ಯಾಂಡಲ್ ವುಡ್ ಸಿನಿ ಪ್ರಿಯರ ಮುಂದೆ ರಾಕಿಂಗ್ ಸ್ಟಾರ್ ಯಶ್ ಏನಾದರೂ ಇದಕ್ಕಿದ್ದಂತೆ ಪ್ರತ್ಯಕ್ಷವಾದರೆ, ಥಟ್ ಅಂತ ಎಲ್ಲರೂ ಮಾಡುವ ಮೊಟ್ಟ ಮೊದಲ ಕೆಲಸ 'ಯಶ್ ಜೊತೆಗೆ ಒಂದು ಫೋಟೋ/ಸೆಲ್ಫಿ' ಕ್ಲಿಕ್ ಮಾಡಿಕೊಳ್ಳುವುದು.

ಆದ್ರೆ, ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಿನ್ನೆ ನಡೆದಿದೆ. ಹೋಟೆಲ್ ಒಂದಕ್ಕೆ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಹೋಗಿದ್ದಾಗ, ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಇಬ್ಬರು ಹುಡುಗಿಯರು ''ನಮ್ಮದೊಂದು ಫೋಟೋ ಕ್ಲಿಕ್ ಮಾಡ್ತೀರಾ, ಪ್ಲೀಸ್'' ಎಂದು ಯಶ್ ರವರಲ್ಲಿ ಕೇಳಿಕೊಂಡಿದ್ದಾರೆ.


'ಸೆಲೆಬ್ರಿಟಿ' ಎಂಬ ಹಮ್ಮು-ಬಿಮ್ಮು ಇಲ್ಲದೆ, ಕೊಂಚ ಕೂಡ ಜಂಭ ಪಡದೆ, ಆ ಇಬ್ಬರು ಹುಡುಗಿಯರ ಫೋಟೋವನ್ನ ಮೊಬೈಲ್ ನಲ್ಲಿ ಯಶ್ ಕ್ಲಿಕ್ಕಿಸಿದ್ದಾರೆ.

ಈ ಫೋಟೋ ನೋಡಿ 'ಯಶ್ ರವರ ಸರಳತೆ' ಬಗ್ಗೆ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಹಾಗೊಂದು ವೇಳೆ, ಆ ಹುಡುಗಿಯರಿಗೆ ತಮ್ಮ ಫೋಟೋಗ್ರಾಫರ್ 'ರಾಕಿಂಗ್ ಸ್ಟಾರ್ ಯಶ್' ಅಂತ ಗೊತ್ತಾದರೆ, ''ಯಶ್ ಜೊತೆ ಒಂದು ಸೆಲ್ಫಿ ಮಿಸ್ ಮಾಡಿಕೊಂಡ್ವಲ್ಲ'' ಅಂತ ಬೇಸರ ಪಡುವುದು ಗ್ಯಾರೆಂಟಿ ಅಂತಲೂ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.! ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.! Reviewed by VIVEKARAMA on ಅಕ್ಟೋಬರ್ 16, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.