'ಬಾಹುಬಲಿ' ಪ್ರಭಾಸ್‌ ಜತೆ 'ಕಿರಿಕ್‌ ಪಾರ್ಟಿ' ಸಾನ್ವಿ?

ರಿಷಬ್‌ ಶೆಟ್ಟಿ ನಿರ್ದೇಶನದ 'ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ ರಶ್ಮಿಕಾ ಮಂದಣ್ಣ ಈಗ ಬಹುಬೇಡಿಕೆಯ ನಟಿ. ಸ್ಯಾಂಡಲ್‌ವುಡ್‌ ಮತ್ತು ಟಾಲಿವುಡ್‌ನಿಂದ ಈ ಚೆಲುವೆಗೆ ಸಾಲು ಸಾಲಾಗಿ ಆಫರ್‌ಗಳು ಬರುತ್ತಿವೆ.


 ವಿಶ್ವದಾದ್ಯಂತ 'ಬಾಹುಬಲಿ'ಯಾಗಿ ಮೆರೆಯುತ್ತಿರುವ ಪ್ರಭಾಸ್‌ ಚಿತ್ರದಲ್ಲಿ ಕಿರಿಕ್‌ ಪಾರ್ಟಿ ಸಾನ್ವಿ ನಟಿಸಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬಂದಿವೆ. ಪ್ರಭಾಸ್‌ ಚಿತ್ರವೊಂದಕ್ಕೆ ನಾಯಕಿಯಾಗಲು ರಶ್ಮಿಕಾಗೆ ಕರೆ ಬಂದಿದೆಯಂತೆ.


ಈ ಕುರಿತು ರಶ್ಮಿಕಾ ಅವರನ್ನೇ ಕೇಳಿದಾಗ, ಅವರು ತುಟಿಬಿಚ್ಚದೆ ಮೌನಕ್ಕೆ ಶರಣಾದರು. 'ನಾನು ಈಗಲೇ ಏನು ಹೇಳಲಾರೆ. ಎಲ್ಲವೂ ಫೈನಲೈಸ್‌ ಆದಮೇಲಷ್ಟೇ ಈ ಕುರಿತು ಮಾತನಾಡುವೆ' ಎಂದು ಕಿರಿಕ್‌ ಪಾರ್ಟಿ ಚೆಲುವೆ ಹೇಳಿದ್ದಾರೆ. ಸದ್ಯಕ್ಕೆ ಟಾಲಿವುಡ್‌ನ ಎರಡು ಚಿತ್ರಗಳಲ್ಲಿ ರಶ್ಮಿಕಾ ಬಿಝಿಯಾಗಿದ್ದಾರೆ. ತೆಲುಗು ಸ್ಟಾರ್‌ ನಾಗ ಶೌರ್ಯ ಜತೆಗೆ ನಟಿಸುತ್ತಿರುವ ಚಿತ್ರದ ಶೂಟಿಂಗ್‌ ಈಗಾಗಲೇ ಶುರವಾಗಿದೆ. ಇದರ ಜತೆ ರಾಮ್ ಪೊಥಿನೆನಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕೆ ಸಹಿ ಕೂಡ ಮಾಡಿದ್ದಾರೆ.


'ಬಾಹುಬಲಿ' ಪ್ರಭಾಸ್‌ ಜತೆ 'ಕಿರಿಕ್‌ ಪಾರ್ಟಿ' ಸಾನ್ವಿ? 'ಬಾಹುಬಲಿ' ಪ್ರಭಾಸ್‌ ಜತೆ 'ಕಿರಿಕ್‌ ಪಾರ್ಟಿ' ಸಾನ್ವಿ? Reviewed by VIVEKARAMA on ಅಕ್ಟೋಬರ್ 10, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.