'ಅಂಬಿ ನಿಂಗೆ ವಯಸ್ಸಾಯ್ತೋ' ಅಂತ ಹೇಳುತ್ತಿದ್ದಾರೆ ಕಿಚ್ಚ ಸುದೀಪ್.!

ಕನ್ನಡದಲ್ಲಿ ಮಲ್ಟಿ ಸ್ಟಾರ್ ಚಿತ್ರಗಳನ್ನು ಮಾಡುವುದಕ್ಕೆ ಇದು ನಿಜಕ್ಕೂ ಸುಗ್ಗಿ ಕಾಲ. ಯಾಕಂದ್ರೆ ದಿನ ಕಳೆಯುತ್ತಾ ಇದ್ದ ಹಾಗೆ ಒಂದೊಂದೇ ಮಲ್ಟಿ ಸ್ಟಾರ್ ಸಿನಿಮಾಗಳು ಶುರು ಆಗುತ್ತಲೇ ಇವೆ.

ಅದೇ ರೀತಿ ಇದೀಗ ಮತ್ತೆ ಸುದೀಪ್ ಹಾಗೂ ಅಂಬರೀಶ್ ಕಾಂಬಿನೇಶನ್ ನಲ್ಲಿ ಸಿನಿಮಾವೊಂದು ಬರಲಿದೆ ಎಂಬ ಸುದ್ದಿ ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ. ಈ ಹಿಂದೆ 'ವೀರ ಪರಂಪರೆ' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಸುದೀಪ್ ಮತ್ತು ಅಂಬರೀಶ್ ಜೋಡಿ 7 ವರ್ಷಗಳ ನಂತರ ಮತ್ತೆ ಒಂದಾಗಲಿದೆ.


'ಅಂಬಿ ನಿಂಗೆ ವಯಸ್ಸಾಯ್ತೋ'

'ಅಂಬಿ ನಿಂಗೆ ವಯಸ್ಸಾಯ್ತೋ' ಎಂಬ ವಿಭಿನ್ನ ಸಿನಿಮಾದ ಮೂಲಕ ಅಂಬರೀಶ್ ಮತ್ತು ಸುದೀಪ್ 7 ವರ್ಷಗಳ ನಂತರ ಮತ್ತೆ ಒಂದಾಗಲಿದ್ದಾರೆ ಎನ್ನುವ ಸುದ್ದಿ ಇದೆ.ಸದ್ಯ ಪೋಷಕ ಪಾತ್ರದಲ್ಲಿ ಹೆಚ್ಚಾಗಿ ನಟಿಸುತ್ತಿರುವ ಅಂಬರೀಶ್ ಈಗ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರದ ಅತಿಥಿ ಪಾತ್ರವನ್ನು ಮಾಡುವ ಮೂಲಕ ಸುದೀಪ್ ಅಂಬಿಗೆ ಸಾಥ್ ನೀಡಲಿದ್ದಾರಂತೆ.ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರವನ್ನು ಸ್ಟಾರ್ ಡೈರೆಕ್ಟರ್ ನಂದ ಕಿಶೋರ್ ನಿರ್ದೇಶನ ಮಾಡಲಿದ್ದಾರಂತೆ.
ವಿಶೇಷ ಅಂದರೆ ಸುದೀಪ್ ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾತ್ರವಲ್ಲದೆ, ಈ ಚಿತ್ರವನ್ನು ಅವರೇ ತಮ್ಮ 'ಕಿಚ್ಚ ಕ್ರಿಯೇಷನ್ಸ್' ನಲ್ಲಿ ನಿರ್ಮಾಣ ಮಾಡಲಿದ್ದಾರೆ.

'ಅಂಬಿ ನಿಂಗೆ ವಯಸ್ಸಾಯ್ತೋ' ಅಂತ ಹೇಳುತ್ತಿದ್ದಾರೆ ಕಿಚ್ಚ ಸುದೀಪ್.! 'ಅಂಬಿ ನಿಂಗೆ ವಯಸ್ಸಾಯ್ತೋ' ಅಂತ ಹೇಳುತ್ತಿದ್ದಾರೆ ಕಿಚ್ಚ ಸುದೀಪ್.! Reviewed by VIVEKARAMA on ಅಕ್ಟೋಬರ್ 05, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.