ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ


ನಿನ್ನೆ ಸಂಜೆ ವರೆಗೂ ನಿವೇದಿತಾ ಗೌಡ ಅಂದ್ರೆ ಯಾರು ಅನ್ನೋದೇ ಕನ್ನಡಿಗರಿಗೆ ಗೊತ್ತಿರಲಿಲ್ಲ. ಅದ್ಯಾವಾಗ, ತಿಳಿ ಕೆಂಪು ಬಣ್ಣದ ಲಾಂಗ್ ಫ್ರಾಕ್ ಧರಿಸಿ, 'ಬಿಗ್ ಬಾಸ್' ವೇದಿಕೆ ಮೇಲೆ 'ಬಾರ್ಬಿ ಡಾಲ್'ನಂತೆ ನಿವೇದಿತಾ ಗೌಡ ಕಾಲಿಟ್ಟರೋ... ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಶುರು ಆಯ್ತು.

ಕನ್ನಡವನ್ನ ಆಂಗ್ಲ ಭಾಷೆಯಂತೆ ಮಾತನಾಡುವ, ಮಾತು ಮಾತಿಗೂ ವೈಯ್ಯಾರದಿಂದ ನುಲಿಯುವ ನಿವೇದಿತಾ ಗೌಡ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಕ್ಷಣವೇ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ.

ಕಳೆದ ಆವೃತ್ತಿಯ 'ಸಂಜನಾ ತಂಗಿ' ಅಂತಲೇ ಟ್ರೋಲ್ ಆಗುತ್ತಿರುವ ಈ ನಿವೇದಿತಾ ಗೌಡ ಯಾರು.? ಆಕೆಯ ಹಿನ್ನಲೆ ಏನು ಅನ್ನೋದರ ಕಂಪ್ಲೀಟ್ ಕಹಾನಿ ಇಲ್ಲಿದೆ.ಮೈಸೂರಿನ ಹುಡುಗಿ 
ಉಡುಗೆ ಹಾಗೂ 'ಕಂಗ್ಲೀಷ್' ಮಾತಿನ ಶೈಲಿಯಿಂದ 'ಬಿಗ್ ಬಾಸ್' ಮನೆಯಲ್ಲಿ 'ಬಾರ್ಬಿ ಡಾಲ್' ಅಂತಲೇ ಎಲ್ಲರಿಂದ ಕರೆಯಿಸಿಕೊಳ್ಳುತ್ತಿರುವ ನಿವೇದಿತಾ ಗೌಡ ಮೈಸೂರಿನ ಹುಡುಗಿ.
ಮೈಸೂರಿನಲ್ಲಿಯೇ ಹುಟ್ಟಿ-ಬೆಳೆದ ನಿವೇದಿತಾ ಗೌಡ ರವರಿಗಿನ್ನೂ ಹದಿನೆಂಟು ವರ್ಷ. ಸದ್ಯ ಮಹಾಜನ್ ಫಸ್ಟ್ ಗ್ರೇಡ್ ಕಾಲೇಜ್ ನಲ್ಲಿ ಎರಡನೇ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ ನಿವೇದಿತಾ ಗೌಡ.

'ಬಿಗ್ ಬಾಸ್' ಕನ್ನಡ ಇತಿಹಾಸದಲ್ಲಿಯೇ ನಿವೇದಿತಾ ಗೌಡ ಅತಿ ಕಿರಿಯ ಸ್ಪರ್ಧಿ. 18 ವರ್ಷ ವಯಸ್ಸಿಗೆ 'ಬಿಗ್ ಬಾಸ್' ಸ್ಪರ್ಧಿಯಾಗಿದ್ದಾರೆ ಈ ನಿವೇದಿತಾ.


'ಬಿಗ್ ಬಾಸ್' ಸ್ಪರ್ಧಿ ಆಗಿರುವುದಕ್ಕೆ ನಿವೇದಿತಾಗೆ ಸಿಕ್ಕಾಪಟ್ಟೆ ಖುಷಿ ಇದೆ.

ಹತ್ತತ್ತು ನಿಮಿಷಕ್ಕೂ ಬಟ್ಟೆ ಬದಲಾಯಿಸುವ ನಿವೇದಿತಾ ಗೌಡಗೆ ಯಾವುದೇ ಕೆಲಸ ಬರಲ್ಲ. ಅಡುಗೆ ಮಾಡಲು ಗೊತ್ತಿಲ್ಲ. ಪಾತ್ರೆ ತೊಳೆಯುವುದಕ್ಕೂ ಬರಲ್ಲ. ಹೀಗಿದ್ದರೂ, ಎಲ್ಲವನ್ನೂ ಕಲೆಯುತ್ತೇನೆ ಎಂಬ ಆತ್ಮವಿಶ್ವಾಸದಿಂದ ನಿವೇದಿತಾ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿದ್ದಾರೆ.

ಅಚ್ಚ ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಡಬ್ ಮಾಡಿ ಮಾತನಾಡುವುದರಲ್ಲಿ ನಿವೇದಿತಾ ಎತ್ತಿದ ಕೈ. ಹಾಡುವುದು ಮತ್ತು ಡ್ಯಾನ್ಸ್ ಮಾಡುವುದು ನಿವೇದಿತಾ ರವರ ಹಾಬೀಸ್.


'ಬಿಗ್ ಬಾಸ್' ಮನೆಯಲ್ಲಿ ಹೇಗಿರ್ತಾರೆ.? 
40 ಕೆಜಿ ತೂಗುವ ನಿವೇದಿತಾ, ''ಗಾಸಿಪ್ ಮಾಡಲ್ಲ, ಯಾರಿಗೂ ನೋವು ಮಾಡಲ್ಲ. ಯಾರಿಗೂ ಬೇಸರ ಮಾಡದಂತೆ ಟ್ರೈ ಮಾಡುವೆ. ಯಾರ ಜೊತೆಗೂ ಕೋಪ ಮಾಡಿಕೊಳ್ಳಲ್ಲ. ಎಲ್ಲರ ಜೊತೆಗೆ ಫ್ರೆಂಡ್ಲಿ ಆಗಿರೋಕೆ ಟ್ರೈ ಮಾಡ್ತೀನಿ'' ಎನ್ನುತ್ತಾ 'ಬಿಗ್ ಬಾಸ್' ಮನೆಗೆ ಬಲಗಾಲಿಟ್ಟು ಎಂಟ್ರಿಕೊಟ್ಟಿದ್ದಾರೆ. ನೋಡೋಣ, ಎಷ್ಟು ದಿನ ನಿವೇದಿತಾ 'ಬಿಗ್ ಬಾಸ್' ಮನೆಯಲ್ಲಿ ಇರಲು ಸಫಲ ಆಗ್ತಾರೆ ಅಂತ.!

ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ Reviewed by VIVEKARAMA on ಅಕ್ಟೋಬರ್ 17, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.