'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಗೌರಿ ಈಸ್ ಬ್ಯಾಕ್

ಕಾಡಿನಲ್ಲಿ ಸಿಲುಕಿಹಾಕಿಕೊಂಡು, ಸಾಕಷ್ಟು ನೋವುಗಳನ್ನ ಎದುರಿಸಿದ್ದ 'ಪುಟ್ಟಗೌರಿ' ಕೊನೆಗೆ ನಗರಕ್ಕೆ ವಾಪಸ್ ಆಗಿದ್ದಾರೆ. ಈ ಮೂಲಕ ಕಾಡಿನಲ್ಲಿ ಸಾಹಸ ಮರೆದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದ ಗೌರಿಯ ಅರಣ್ಯವಾಸ ಅಂತ್ಯವಾಗಿದೆ.
ಇನ್ನು ಕಾಡಿನಿಂದ ವಾಪಸ್ ಬಂದ ಗೌರಿ, ರೀ-ಎಂಟ್ರಿಯಲ್ಲೇ ರೌಡಿಗಳ ಹೊಡೆದೊಡಿಸಿದ್ದಾರೆ. ಹೀಗಾಗಿ, ಇನ್ಮುಂದೆ ನಾಡಿನಲ್ಲೂ ಗೌರಿಯ ಅಟ್ಟಹಾಸ ನಡೆಯಬಹುದು ಎಂಬ ಸೂಚನೆ ಸಿಕ್ಕಿದೆ.
ಅಷ್ಟಕ್ಕೂ, ಪುಟ್ಟಗೌರಿ ಕಾಡಿನಿಂದ ನಾಡಿಗೆ ವಾಪಸ್ ಬಂದಿದ್ದು ಹೇಗೆ? ಅರಣ್ಯದಿಂದ ಗೌರಿ ವಾಪಸ್ ಆಗಲು ಸಹಾಯ ಮಾಡಿದ್ದು ಯಾರು?


ದಟ್ಟಾರಣ್ಯದಲ್ಲಿ ಸಿಲುಕಿಕೊಂಡು ಕಷ್ಟಪಡುತ್ತಿದ್ದ ಪುಟ್ಟಗೌರಿ ಯಾವಾಗ ವಾಪಸ್ ಆಗುತ್ತಾಳೆ ಎಂಬ ಕುತೂಹಲದಿಂದ ಪ್ರೇಕ್ಷಕರು ಕಾಯುತ್ತಿದ್ದರು. ಕೊನೆಗೂ ಗೌರಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು ನಾಡಿಗೆ ಗೌರಿ ವಾಪಸ್ ಆಗಿದ್ದಾಳೆ.


ನಗರಕ್ಕೆ ಬರುತ್ತಿದ್ದಂತೆ ತಮ್ಮ ತಂದೆಯನ್ನ ಕೊಲ್ಲು ಬಂದಿದ್ದ ರೌಡಿಗಳನ್ನ ಗೌರಿ ಹೊಡೆದೊಡಿಸಿದ್ದಾಳೆ. ಸುಮಾರು ಆರೇಳು ದಾಂಡಿಗರ ಜೊತೆ ಗೌರಿ ಫೈಟ್ ಮಾಡಿ ತಂದೆಯನ್ನ ಕಾಪಾಡಿಕೊಂಡಿದ್ದಾಳೆ.

ಇನ್ಮುಂದೆ ಗೌರಿ ಕಷ್ಟ ಪರಿಹಾರ ಆಗ್ಬಹುದಾ? 
ಇನ್ನು ಕಾಡಿನಲ್ಲಿ ಸಾಕಷ್ಟು ಕಷ್ಟ, ಅನುಭವಿಸಿದ ಬಂದ ಗೌರಿ ಇನ್ನುಂದೆ ಈ ಕಷ್ಟದಿಂದ ಹೊರಬರ್ತಾರ ಎಂಬ ಕುತೂಹಲ ಕಾಡುತ್ತಿದೆ. ಮುಂದಿನ ದಿನದಲ್ಲಿ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ತಿರುವುಗಳು ಹೇಗಿರುತ್ತೆ ಎಂಬುದನ್ನ ಕಾದುನೋಡೋಣ.
'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಗೌರಿ ಈಸ್ ಬ್ಯಾಕ್ 'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಗೌರಿ ಈಸ್ ಬ್ಯಾಕ್ Reviewed by VIVEKARAMA on ಅಕ್ಟೋಬರ್ 21, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.