'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?

'ಬಿಗ್ ಬಾಸ್' ಮನೆಗೆ ಕೊಡಗಿನ ಕುವರಿ'' ಎಂಟ್ರಿ ಕೊಡ್ತಿದ್ದಾರೆ ಅಂತ ಕಿಚ್ಚ ಸುದೀಪ್ ಘೋಷಣೆ ಮಾಡಿದಾಗ, ''ಶುಭ್ರ ಅಯ್ಯಪ್ಪ ಒಳಗೆ ಹೋಗಬಹುದು'' ಎಂದು ಎಲ್ಲರೂ ಭಾವಿಸಿದ್ರು. ಆದ್ರೆ, ಶುಭ್ರ ಅಯ್ಯಪ್ಪ ಡ್ಯಾನ್ಸ್ ಮಾಡುತ್ತಿರುವಾಗಲೇ 'ಬಿಗ್ ಬಾಸ್' ವೇದಿಕೆ ಮೇಲೆ 'ನೋ ಪ್ರಾಬ್ಲಂ' ಎನ್ನುತ್ತ ಪ್ರತ್ಯಕ್ಷವಾಗಿದ್ದು ಕೊಡಗಿನ ಬೆಡಗಿ, ಶನಿವಾರಸಂತೆಯ ಸುಂದರಿ ಮೇಘ.!

ಹೌದು, ಕೊಡಗಿನಿಂದ ಇದೀಗ 'ಬಿಗ್ ಬಾಸ್' ಮನೆಗೆ ಎಂಟ್ರಿ ಪಡೆದಿರುವ 'ಶ್ರೀಸಾಮಾನ್ಯ' ಸ್ಪರ್ಧಿ ಮೇಘ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೂಲಕ ಸದ್ಯ ಕನ್ನಡಿಗರ ಮನೆ ಮನದಲ್ಲಿ ಸದ್ದು ಮಾಡುತ್ತಿರುವವರು ಚಿಟ-ಪಟ ಅಂತ ಮಾತನಾಡುವ ಚೆಲುವೆ ಮೇಘ.ಕೊಡಗಿನ ಕುವರಿ ಮೇಘ 
''ಹಲೋ ಅಣ್ತಮ್ಮಾಸ್, ಅಕ್ತಂಗೀಸ್'' ಎನ್ನುತ್ತಾ 'ಬಿಗ್ ಬಾಸ್' ಮನೆಯಲ್ಲಿ 'ಮಾಸ್' ಫೀಲ್ ಕೊಡುತ್ತಿರುವ ಮೇಘ ಮೂಲತಃ ಕೊಡಗು ಜಿಲ್ಲೆಯ ಶನಿವಾರ ಸಂತೆಯ ಹಾರೆಹೊಸೂರು ಗ್ರಾಮದ ಹುಡುಗಿ.

ಸದ್ಯ ಅಂತಿಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ ಮೇಘ.ಮದುವೆ ಆಗುವುದರಿಂದ ತಪ್ಪಿಸಿಕೊಳ್ಳಲು ವಿವಿಧ ರೀತಿಯಲ್ಲಿ ಹುಡುಗರನ್ನು ಓಡಿಸಿರುವ ಮೇಘ ಇದೀಗ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ.ಇಲ್ಲಿಯವರೆಗೂ ಮೇಘ ಬೆಂಗಳೂರಿಗೆ ಬಂದಿರುವುದು ಮೂರೇ ಬಾರಿ. ಒಮ್ಮೆ ಒಬ್ಬರ ಮದುವೆಗೆ, ಇನ್ನೊಮ್ಮೆ 'ಬಿಗ್ ಬಾಸ್' ಆಡಿಷನ್ ಗೆ ಅಂತ ಬೆಂಗಳೂರಿಗೆ ಬಂದಿದ್ದ ಮೇಘ ಈಗ ನೇರವಾಗಿ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇರುವ 'ದೊಡ್ಮನೆ'ಯೊಳಗೆ ಕಾಲಿಟ್ಟಿದ್ದಾರೆ.


ಮೇಘ 'ಬಿಗ್ ಬಾಸ್' ಜರ್ನಿ ಹೇಗಿರುತ್ತೋ.? 
ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ 'ಪ್ರಥಮ್ ತಂಗಿ' ಅಂತಲೇ ಮೇಘ ರವರನ್ನ ಟ್ರೋಲ್ ಮಾಡಲಾಗುತ್ತಿದೆ. ''ಪಕ್ಕಾ ಲೋಕಲ್ ನಾನು'' ಎಂದಿರುವ ಮೇಘ ರವರ 'ಬಿಗ್ ಬಾಸ್' ಜರ್ನಿ ಹೇಗಿರುತ್ತೋ, ನೋಡೋಣ.
'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.? 'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.? Reviewed by VIVEKARAMA on ಅಕ್ಟೋಬರ್ 18, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.