ಸನ್ನಿಲಿಯೋನ್ ಗೆ ತಪ್ಪಿದ ಅವಕಾಶ ಶಾನ್ವಿ ಶ್ರೀವಾತ್ಸವ್ ಮಡಿಲಿಗೆ!

ಕನ್ನಡ ಮತ್ತು ತೆಲುಗು ನಟಿ ಶಾನ್ವಿ ಶ್ರೀವಾತ್ಸವ ಪಾರ್ನ್ ಸ್ಟಾರ್ ಸನ್ನಿಲಿಯೋನ್ ಹಿಂದಿಕ್ಕಿ ಅಂತರಾಷ್ಟ್ರೀಯ ಪ್ರಾಜೆಕ್ಟ್ ತಮ್ಮದಾಗಿಸಿಕೊಂಡಿದ್ದಾರೆ.

ಚೈನೀಸ್ ಟೆಲಿವಿಷನ್ ನಲ್ಲಿ ಪ್ರಸಾರವಾಗುವ ವೆಬ್ ಸಿರೀಸ್ ನಲ್ಲಿ ದಿ ಡಾರ್ಕ್  ಲಾರ್ಡ್ ಎಂಬ ಶೋನಲ್ಲಿ  ಭಾರತೀಯ ರಾಜಕುಮಾರಿ ಪಾತ್ರದಲ್ಲಿ ಶಾನ್ವಿ ಅಭಿನಯಿಸಲಿದ್ದಾರೆ. ಇತ್ತೀಚೆಗೆ ಚೀನಾಗೆ ತೆರಳಿದ್ದ ಶಾನ್ವಿ ಶೋನ ಕೆಲವು ಭಾಗಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ತಾರಕ್ ಸಿನಿಮಾದಲ್ಲಿ ಎನ್ ಆರ್ ಐ ಪಾತ್ರ ಮಾಡಿ ಶಾನ್ವಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ತಂಡದ ಜೊತೆಗೆ ಶೂಟಿಂಗ್ ಅನುಭವವಿದೆ. ಸೆಪ್ಟಂಬರ ತಿಂಗಳ ಮೊದಲ ಅರ್ಧದಲ್ಲಿ ಚೀನಾಗೆ ತೆರಳಿದ್ದ ಶಾನ್ವಿ ಭಾರತೀಯ ರಾಜಕುಮಾರಿ ಪಾತ್ರಕ್ಕಾಗಿ ಟೆಸ್ಟ್ ನೀಡಿ ಬಂದಿದ್ದರು,  ಪಾತ್ರಕ್ಕಾಗಿ ನಾನು ಚೀನಿ ಭಾಷೆ ಕಲಿತೆ ಎಂದು ಶಾನ್ವಿ ಹೇಳಿದ್ದಾರೆ.


ಭಾರತ-ಚೀನಾ ಸಂಬಂಧಗಳ ಕುರಿತಾದ ಕಥೆಯುಳ್ಳ ಶೋ ಇದಾಗಿದೆ. ಈ ಪ್ರಾಜೆಕ್ಟ್ ನ ಭಾಗವಾಗಿರುವುದು ನನಗೆ ಹೆಮ್ಮೆ ತಂದಿದೆ. ನಟನಾ ವೃತ್ತಿ ಬೇರೆ ಎಲ್ಲಾ ವ್ಯತ್ಯಾಸಗಳನ್ನು ಮರೆ ಮಾಡಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಸನ್ನಿಲಿಯೋನ್ ಗೆ ತಪ್ಪಿದ ಅವಕಾಶ ಶಾನ್ವಿ ಶ್ರೀವಾತ್ಸವ್ ಮಡಿಲಿಗೆ! ಸನ್ನಿಲಿಯೋನ್ ಗೆ ತಪ್ಪಿದ ಅವಕಾಶ ಶಾನ್ವಿ ಶ್ರೀವಾತ್ಸವ್ ಮಡಿಲಿಗೆ! Reviewed by VIVEKARAMA on ಅಕ್ಟೋಬರ್ 05, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.