ಪುನೀತ್, ದರ್ಶನ್, ಸುದೀಪ್ ಸಾಲಿಗೆ ಸೇರಿದ ರಾಕಿಂಗ್ ಸ್ಟಾರ್ ಯಶ್.!

ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್.....ಸ್ಯಾಂಡಲ್ ವುಡ್ ನ ತ್ರಿವಳಿ ರತ್ನಗಳು. ಇವರ ಸಾಲಿಗೆ ಈಗ ರಾಕಿಂಗ್ ಸ್ಟಾರ್ ಯಶ್ ಸೇರಿಕೊಂಡಿದ್ದಾರೆ.

ಈಗ ವಿಷ್ಯ ಏನಪ್ಪಾ ಅಂದ್ರೆ, ದರ್ಶನ್, ಸುದೀಪ್, ಪುನೀತ್ ಹಲವು ಸಿನಿಮಾಗಳಲ್ಲಿ ಪೊಲೀಸ್ ಪಾತ್ರವನ್ನ ನಿರ್ವಹಿಸಿದ್ದಾರೆ. ಆದ್ರೆ, ಯಶ್ ಇದುವರೆಗೂ ಪೊಲೀಸ್ ಆಗಿ ಕಾಣಿಸಿಕೊಂಡಿಲ್ಲ. ಇದೀಗ, ತಮ್ಮ ಮುಂದಿನ ಚಿತ್ರದಲ್ಲಿ ಯಶ್ ಪೊಲೀಸ್ ಕಾಪ್ ಆಗಿ ಮಿಂಚಲಿದ್ದಾರಂತೆ.


ರಾಣಾ' ಚಿತ್ರದಲ್ಲಿ ಖಾಕಿ ತೊಡಲಿದ್ದಾರೆ

ಸದ್ಯ, 'ಕೆ.ಜಿ.ಎಫ್' ಚಿತ್ರದಲ್ಲಿ ಬಿಜಿಯಾಗಿರುವ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಲಿದ್ದಾರೆ.

ನೃತ್ಯ ಸಂಯೋಜಕ ಕಮ್ ನಿರ್ದೇಶಕ ಹರ್ಷ ನಿರ್ದೇಶನದಲ್ಲಿ ಮೂಡಿ ಬರಲಿರುವ 'ರಾಣಾ' ಚಿತ್ರದಲ್ಲಿ ಯಶ್ ಖಾಕಿ ತೊಡಲಿದ್ದಾರಂತೆ.


'ಅಂದ್ಹಾಗೆ, ನಟ ಯಶ್ 'ರಾಣಾ' ಚಿತ್ರದ ಕಥೆಯ ಬಗ್ಗೆ ಪೂರ್ತಿ ವಿವರ ಕೇಳದೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರಂತೆ. ವಿಶೇಷ ಅಂದ್ರೆ, ಯಶ್ ಅವರನ್ನ ಈ ಪಾತ್ರದಲ್ಲಿ ನೋಡಲು ಹೊಸದಾಗಿದ್ದು, ಹೀಗಾಗಿ, ಈ ಸಿನಿಮಾ ಮತ್ತಷ್ಟು ನಿರೀಕ್ಷೆ ಹೆಚ್ಚಿಸಲಿದೆ.
ಪುನೀತ್, ದರ್ಶನ್, ಸುದೀಪ್ ಸಾಲಿಗೆ ಸೇರಿದ ರಾಕಿಂಗ್ ಸ್ಟಾರ್ ಯಶ್.! ಪುನೀತ್, ದರ್ಶನ್, ಸುದೀಪ್ ಸಾಲಿಗೆ ಸೇರಿದ ರಾಕಿಂಗ್ ಸ್ಟಾರ್ ಯಶ್.! Reviewed by VIVEKARAMA on ಅಕ್ಟೋಬರ್ 11, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.