ಅಬ್ಬಬ್ಬಾ.! ನಿವೇದಿತಾ ಗೌಡ ಹೆಸರಿನಲ್ಲಿ ಶುರುವಾಗಿವೆ ಅಭಿಮಾನಿ ಸಂಘಗಳು!

'ನಿವೇದಿತಾ ಗೌಡ ಬರುವವರೆಗೂ ಮಾತ್ರ ಬೇರೆಯವರ ಹವಾ. ನಿವೇದಿತಾ ಗೌಡ ಬಂದ ಮೇಲೆ ಅವರದ್ದೇ ಹವಾ'. ಇದು ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸೃಷ್ಟಿಯಾಗಿರುವ ವಾತಾವರಣ.
'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಎಂಟ್ರಿಯಾದ ದಿನವೇ ನಿವೇದಿತಾ ಗೌಡ ಸ್ಟಾರ್ ಆಗಿ ಬಿಟ್ಟಿದ್ದಾರೆ. 17 ಸ್ಪರ್ಧಿಗಳ ಪೈಕಿ ಒಂದೇ ದಿನಕ್ಕೆ ನಿವೇದಿತಾ ಸಖತ್ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರ ದರ್ಬಾರ್ ಬಗ್ಗೆ ಹೇಳುವುದೇ ಬೇಡ. ಯಾವುದೇ ಟ್ರೋಲ್ ಪೇಜ್ ನೋಡಿದರೂ ಅಲ್ಲಿ ನಿವೇದಿತಾ ಬಗ್ಗೆಯೇ ಮಾತು-ಕಥೆ. ಹೀಗಿರುವಾಗಲೇ, ನಿವೇದಿತಾ ಹೆಸರಿನಲ್ಲಿ ಈಗ ಅಭಿಮಾನಿ ಸಂಘಗಳು ಕೂಡ ಹುಟ್ಟಿಕೊಂಡಿವೆ.


ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿರುವ ಕಂಗ್ಲೀಷ್ ಕುವರಿ ನಿವೇದಿತಾ ಗೌಡ ಹೆಸರಿನಲ್ಲಿ ಈಗ ಫೇಸ್ ಬುಕ್ ತುಂಬ ಸಾಕಷ್ಟು ಫ್ಯಾನ್ಸ್ ಪೇಜ್ ಶುರುವಾಗಿವೆ.
ನಿವೇದಿತಾ ಗೌಡ ಫ್ಯಾನ್ಸ್ ಅಸೋಸಿಯೇಷನ್, ನಿವೇದಿತಾ ಗೌಡ ಫ್ಯಾನ್ಸ್ ಕ್ಲಬ್, ನಿವೇದಿತಾ ಗೌಡ ಫ್ಯಾನ್ಸ್ ಅಸೋಸಿಯೇಷನ್ ಕರ್ನಾಟಕ ಎನ್ನುವ ಹೆಸರುಗಳಲ್ಲಿ ಹತ್ತಾರು ಫ್ಯಾನ್ಸ್ ಪೇಜ್ ಗಳು ಇದೀಗ ಸೃಷ್ಟಿಯಾಗಿದೆ.
ಇದರ ಜೊತೆಗೆ ನಿವೇದಿತಾ ಗೌಡ ಅವರ ವೈಯಕ್ತಿಕ ಫೇಸ್ ಬುಕ್ ಖಾತೆಯಲ್ಲಿಯೂ ಒಂದೇ ದಿನಕ್ಕೆ ನಾಲ್ಕುವರೆ ಸಾವಿರಕ್ಕೂ ಹೆಚ್ಚು ಜನ ಫಾಲೋವರ್ಸ್ ಜಾಸ್ತಿಯಾಗಿದ್ದಾರೆ.


ನಿವೇದಿತಾ ಗೌಡ ತಮ್ಮ ಡಿಫರೆಂಟ್ ಮ್ಯಾನರಿಸಂ ಮೂಲಕ ಟ್ರೋಲ್ ಪೇಜ್ ಗಳಿಗೆ ದೊಡ್ಡ ಆಹಾರ ಆಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಬಗ್ಗೆ ಟಾಕ್ ಜೋರಾಗಿದ್ದು, ಅದನ್ನು ನೋಡಿ ಅನೇಕರು ಅವರ ಜನಪ್ರಿಯತೆ ಬಳಸಿಕೊಂಡು ಫ್ಯಾನ್ಸ್ ಪೇಜ್ ಶುರು ಮಾಡಿದ್ದಾರೆ.

ನಾಮಿನೇಟ್ ಆದ ನಿವೇದಿತಾ 
ಹೊರಗಡೆ ಇಷ್ಟೊಂದು ಜನಪ್ರಿಯತೆ ಇದ್ದರೂ ನಿವೇದಿತಾ ಗೌಡ ಮೊದಲ ದಿನವೇ ನಾಮಿನೇಟ್ ಆದರು. ಕ್ಯಾಪ್ಟನ್ ಅನುಪಮಾ ನೇರವಾಗಿ ನಿವೇದಿತಾ ಹೆಸರನ್ನು ಸೂಚಿಸಿದ್ದರಿಂದ ಅವರು ನಾಮಿನೇಟ್ ಆದರು.
ಅಬ್ಬಬ್ಬಾ.! ನಿವೇದಿತಾ ಗೌಡ ಹೆಸರಿನಲ್ಲಿ ಶುರುವಾಗಿವೆ ಅಭಿಮಾನಿ ಸಂಘಗಳು! ಅಬ್ಬಬ್ಬಾ.! ನಿವೇದಿತಾ ಗೌಡ ಹೆಸರಿನಲ್ಲಿ ಶುರುವಾಗಿವೆ ಅಭಿಮಾನಿ ಸಂಘಗಳು! Reviewed by VIVEKARAMA on ಅಕ್ಟೋಬರ್ 19, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.