ಹಂಬಲ್ ಪೊಲಿಟಿಶಿಯನ್ ನೊಗರಾಜ್: ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ಪವರ್ ಸ್ಟಾರ್!

 ಡ್ಯಾನಿಶ್ ಸೇಠ್ ಅಭಿನಯದ ಹಂಬಲ್ ಪೊಲಿಟಿಶಿಯನ್ ನೊಗರಾಜ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ತೀವ್ರ ಆಸಕ್ತಿ ಮೂಡಿಸಿದೆ.

ಸಿನಿಮಾ ಶೂಟಿಂಗ್ ಸಿಂಧಿ ಕಾಲೇಜ್ ನಲ್ಲಿ ನಡೆಯುತ್ತಿದ್ದು ಪುನೀತ್ ಭಾಗವಹಿಸಿದ್ದರು. ಸಿನಿಮಾದಲ್ಲಿ ಪುನೀತ್ ಪಾತ್ರ ಏನು ಎಂಬ ಬಗ್ಗೆ ನಿರ್ದೇಶಕರು ಎಲ್ಲಿಯೂ ವಿಷಯ ಬಿಟ್ಟುಕೊಟ್ಟಿಲ್ಲ. 


ಈ ಸಿನಿಮಾದಲ್ಲಿ ಪುನೀತ್ ನಟನೆಯಿಂದಾಗಿ ಹೆಚ್ಚಿನ ಆಸಕ್ತಿ ಮೂಡಿಸಿದೆ. ಸಿನಿಮಾದಲ್ಲಿನ ಪುನೀತ್ ಪಾತ್ರದ ಬಗ್ಗೆ ರಹಸ್ಯ ಕಾಪಾಡಿರುವ ನಿರ್ದೇಶಕರು ಸಿನಿಮಾ ರಿಲೀಸ್ ವೇಳೆ ಸರ್ ಪ್ರೈಸ್ ಪ್ರೈಸ್ ಕೊಡಲಿದ್ದಾರೆ.

ಸಾದ್ ಖಾನ್ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಡ್ಯಾನಿಸ್ ಸೇಠ್ ಕೂಡ ಚಿತ್ರಕಥೆ ಬರೆದಿದ್ದಾರೆ, ಸಿನಿಮಾ ಶೂಟಿಂಗ್ ಅಂತಿಮ ಹಂತ ತಲುಪಿದ್ದು, ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಹಂಬಲ್ ಪೊಲಿಟಿಶಿಯನ್ ನೊಗರಾಜ್: ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ಪವರ್ ಸ್ಟಾರ್! ಹಂಬಲ್ ಪೊಲಿಟಿಶಿಯನ್ ನೊಗರಾಜ್: ಮೊದಲ ಬಾರಿಗೆ ಅತಿಥಿ ಪಾತ್ರದಲ್ಲಿ ಪವರ್ ಸ್ಟಾರ್! Reviewed by VIVEKARAMA on ಅಕ್ಟೋಬರ್ 17, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.