ತಮಿಳು ನಟ ಅಜಿತ್ ಚಿತ್ರದ ರೀಮೇಕ್ ನಲ್ಲಿ ದರ್ಶನ್ ನಟನೆ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ತಮ್ಮ 50ನೇ ಚಿತ್ರ 'ಕುರುಕ್ಷೇತ್ರ'ದಲ್ಲಿ ಬಿಜಿಯಾಗಿದ್ದಾರೆ. 'ತಾರಕ್' ಚಿತ್ರದ ಯಶಸ್ಸಿನ ನಂತರ ವೃತ್ತಿ ಜೀವನದ ವಿಶೇಷ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ದರ್ಶನ್ ಅವರ 51 ಹಾಗೂ 52ನೇ ಚಿತ್ರಗಳ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿ ಬರುತ್ತಲೇ ಇದೆ. ಹೀಗಿರುವಾಗ, ದರ್ಶನ್ ಕಡೆಯಿಂದ ಹೊಸದೊಂದು ಬ್ಲ್ಯಾಸ್ಟಿಂಗ್ ನ್ಯೂಸ್ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾದ ಕನ್ನಡ ರೀಮೇಕ್ ನಲ್ಲಿ ದರ್ಶನ್ ಬಣ್ಣ ಹಚ್ಚಲಿದ್ದಾರಂತೆ.


ರೀಮೇಕ್ ಚಿತ್ರಕ್ಕೆ ಜೈ ಅಂತಾರ ದರ್ಶನ್.!

'ಕುರುಕ್ಷೇತ್ರ'ದ ನಂತರ ಶೈಲಜಾ ನಾಗ್ ಮತ್ತು ಸಂದೇಶ ನಾಗರಾಜ್ ಅವರ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಹೀಗಿರುವಾಗ, ತಮಿಳಿನ ರೀಮೇಕ್ ಚಿತ್ರವೊಂದಕ್ಕೆ ದರ್ಶನ್ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಹೊಸ ಸುದ್ದಿ ಚರ್ಚೆಯಾಗುತ್ತಿದೆ.ಕನ್ನಡದಲ್ಲಿ 'ವೀರಂ'

ಅಜಿತ್ ಕುಮಾರ್ ಅಭಿನಯಿಸಿದ್ದ 'ವೀರಂ' ಚಿತ್ರದ ಕನ್ನಡ ರೀಮೇಕ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.


ತಮಿಳು ನಟ ಅಜಿತ್ ಚಿತ್ರದ ರೀಮೇಕ್ ನಲ್ಲಿ ದರ್ಶನ್ ನಟನೆ.! ತಮಿಳು ನಟ ಅಜಿತ್ ಚಿತ್ರದ ರೀಮೇಕ್ ನಲ್ಲಿ ದರ್ಶನ್ ನಟನೆ.! Reviewed by VIVEKARAMA on ಅಕ್ಟೋಬರ್ 10, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.