''ದೀಪಾವಳಿ ದೀಪಗಳ ಹಬ್ಬ, ಪಟಾಕಿ ಹಬ್ಬ ಅಲ್ಲ'' ಎನ್ನುವ ಈ ನಟಿಯರು

ದೀಪಾವಳಿ ಎಂದ ತಕ್ಷಣ ಮೊದಲು ನೆನಪಾಗುವುದು ಪಟಾಕಿ. ಸಣ್ಣ ವಯಸ್ಸಿನಲ್ಲಿ ದೀಪಾವಳಿ ಅಂದರೆ ಪಟಾಕಿ ಅಷ್ಟೆ ಆಗಿರುತ್ತದೆ. ನಂತರ ದೀಪಾವಳಿಯಲ್ಲಿ ಪಟಾಕಿ ಒಂದು ಭಾಗವಾಗಿರುತ್ತದೆ. ಇನ್ನು ದೊಡ್ಡವರಾದ ಮೇಲೆ ದೀಪಾವಳಿಯಲ್ಲಿ ಪಟಾಕಿ ಯಾಕೆ ಎನಿಸುತ್ತದೆ. ಇಂದಿನ ದಿನಗಳಲ್ಲಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯುವುದು ಕಡಿಮೆ ಮಾಡಿ ಅಥವಾ ಸಾಧ್ಯ ಆದರೆ ಅದನ್ನು ನಿಲ್ಲಿಸಿ ಎನ್ನುವ ಮಾತುಗಳು ಅಧಿಕವಾಗಿವೆ. ಇನ್ನು ಅದೇ ರೀತಿ ಕನ್ನಡದ ಕೆಲ ನಟಿಯರು ಕೂಡ ಪಟಾಕಿ ಬಗ್ಗೆ ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. ''ನಾವು ಮೊದಲ ನಮ್ಮ ಪರಿಸರ ಕಾಪಾಡೋಣ, ದೀಪಾವಳಿಯಲ್ಲಿ ದೀಪ ಓಕೆ.. ಪಟಾಕಿ ಯಾಕೆ'' ಎನ್ನುತ್ತಾರೆ ಈ ನಟಿಯರು.


''ಪಟಾಕಿಯನ್ನು ನಾನು ಚಿಕ್ಕ ವಯಸ್ಸಿನಿಂದ ಪ್ರೋತ್ಸಾಹ ಮಾಡಿದವಳು ಅಲ್ಲ. ಪಟಾಕಿ ವಿಷಯದಲ್ಲಿ ನಾನು ಪುಕ್ಲಿ. ಪಟಾಕಿ ಬೇಡವೇ ಬೇಡ ಎನ್ನುವುದು ಒಂದು ಕಡೆ. ಆದರೆ ಹಬ್ಬದ ಸಂತೋಷಕ್ಕೆ ನಮ್ಮ ಸಮಾಧಾನಕ್ಕೆ ಸಣ್ಣ ಪುಟ್ಟ ಪಟಾಕಿಯನ್ನು ಬಳಕೆ ಮಾಡಿ. ಹಬ್ಬದ ದಿನ ವಾಯು ಮಾಲಿನ್ಯ ಮಾಡದಂತೆ.. ಬೇರೆಯವರಿಗೆ ತೊಂದರೆ ಮಾಡದಂತೆ ಹಬ್ಬ ಆಚರಿಸಿ.


''ನಮ್ಮ ಮನೆಯಲ್ಲಿ ಮುಂಚೆಯಿಂದ ಪಟಾಕಿ ಕಡಿಮೆ. ಬೆಳೆಯುತ್ತ ನಮಗೂ ಪಟಾಕಿ ಬೇಡ ಅನಿಸಿತು. ಈಗ ಎಲ್ಲ ರೀತಿಯಲ್ಲಿಯೂ ಪ್ರಕೃತಿ ಮಲೀನವಾಗುತ್ತಿದೆ. ಮೊದಲ ನಾವು ನಮ್ಮ ಪ್ರಕೃತಿಯನ್ನು ಕಾಪಾಡಿಕೊಳ್ಳಬೇಕಾಗಿದೆ. ನನ್ನ ಪ್ರಕಾರ ಪಟಾಕಿ ಅಂದರೆ ದುಡ್ಡನ್ನು ಸುಡುತ್ತಿದ್ದೀವಿ ಎನ್ನುವ ಭಾವನೆ. ದುಡ್ಡು ಕೊಟ್ಟು ನಮ್ಮ ಪ್ರಕೃತಿಯನ್ನು ನಾವೇ ಹಾಳು ಮಾಡುತ್ತಿದ್ದೇವೆ. ಪಟಾಕಿಯಿಂದ ಸಣ್ಣ ಖುಷಿ ಇದ್ದರೂಅದರಿಂದ ಹಾನಿ ಜಾಸ್ತಿ. ಸೋ.. ನನ್ನ ಪ್ರಕಾರ ಪರಿಸರ ಸ್ನೇಹಿ ದೀಪಾವಳಿಯನ್ನು ಎಲ್ಲರೂ ಆಚರಿಸಬೇಕು.'' 


''ನಾನು 13 ವರ್ಷದ ಹುಡುಗಿ ಆದಾಗ ನಮ್ಮ ಅಪ್ಪ ಅಮ್ಮ ಪಟಾಕಿ ನಿಮಗೆ ಇಷ್ಟನಾ ಅಥವಾಅದನ್ನು ನಿಲ್ಲಿಸೋಣ ಅಂತ ಹೇಳಿದರು. ಅಂದೇ ನಾನು ಮತ್ತು ಅಕ್ಕಬೇಡ ಅಂತ ನಿರ್ಧಾರ ಮಾಡಿದ್ವಿ. ಅಲ್ಲದೆ ಆ ಪಟಾಕಿಯನ್ನು ತಯಾರಿಸುವವರು ಕೂಡ ಚಿಕ್ಕ ಚಿಕ್ಕ ಮಕ್ಕಳು ಅಲ್ವಾ. ದೀಪಾವಳಿ ಅಂದರೆ ಬೆಳಕಿನ ಹಬ್ಬ.. ಅದುಪಟಾಕಿಯ ಹಬ್ಬ ಅಲ್ಲ. ನಾನು ಹೆಚ್ಚು ಪ್ರಕೃತಿಯಪರವಾಗಿ ಇದ್ದೀನಿ. ಸೋ, ಪಟಾಕಿ ಬೇಡ ಎನ್ನುವುದು ನನ್ನ ಅಭಿಪ್ರಾಯ.'' 


''ದಯವಿಟ್ಟು ಪಟಾಕಿ ಹೊಡೆಯಬೇಡಿ. ನಾನು ಎಲ್ಲ ಕಡೆ ಇದನ್ನೇ ಹೇಳಿಕೊಂಡು ಬರುತ್ತಿದ್ದೇನೆ. ಪಟಾಕಿ ಹೊಡೆಯುವುದರಿಂದ ಪ್ರಾಣಿಗಳಿಗೆ ಎಷ್ಟು ಹಿಂಸೆ ಆಗುತ್ತದೆ. ಅದನ್ನು ನೋಡಿದರೆ ಕರುಳು ಚುರುಕ್ ಎನಿಸುತ್ತದೆ. ನಮ್ಮ ನಾಯಿ ಕೂಡ ಹಬ್ಬದ ದಿನ ಮೂಲೆಯಲ್ಲಿ ಕುಳಿತಿರುತ್ತಾನೆ. ಹಬ್ಬದಲ್ಲಿ ಪಟಾಕಿಬದಲು ದೀಪ ಹಚ್ಚಿ ಎನ್ನುವುದು ನನ್ನ ಅನಿಸಿಕೆ.''

''ದೀಪಾವಳಿ ದೀಪಗಳ ಹಬ್ಬ, ಪಟಾಕಿ ಹಬ್ಬ ಅಲ್ಲ'' ಎನ್ನುವ ಈ ನಟಿಯರು    ''ದೀಪಾವಳಿ ದೀಪಗಳ ಹಬ್ಬ, ಪಟಾಕಿ ಹಬ್ಬ ಅಲ್ಲ'' ಎನ್ನುವ ಈ ನಟಿಯರು   Reviewed by VIVEKARAMA on ಅಕ್ಟೋಬರ್ 19, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.