ಮೂರನೇ ವಾರ ಬಿಗ್‌ ಮನೆಯಿಂದ ಹೊರಗೆ ಬರ್ತಾರಾ ನಿವೇದಿತಾ?

ಬಿಗ್‌ಬಾಸ್‌ ಮನೆಯಿಂದ ಈಗಾಗಲೇ ಇಬ್ಬರು ಸಾಮಾನ್ಯ ಸ್ಪರ್ಧಿಗಳು ಹೊರ ನಡೆದಿದ್ದಾರೆ. ಇನ್ನು ಮೂರನೇ ವಾರದಲ್ಲಿ ಯಾರು ಮನೆಯಿಂದ ಹೋಗಲಿದ್ದಾರೆ ಎಂಬ ಲೆಕ್ಕಾಚಾರ ಸೋಮವಾರದಿಂದ ಶುರುವಾಗಿದೆ.ಹೌದು, ಸೋಮವಾರ ಎಂದಿನಂತೆ ಬಿಗ್‌ಬಾಸ್‌ ಮನೆಯಲ್ಲಿ ಮೂರನೇ ವಾರದ ನಾಮಿನೇಷನ್‌ ಪ್ರಕ್ರಿಯೆ ನಡೆಯಿತು. ಮನೆಯ ಸದಸ್ಯರ ಆಯ್ಕೆಯ ಅನುಸಾರ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದು ರಿಯಾಜ್‌, ಜಯಶ್ರೀನಿವಾಸನ್,ದಯಾಳ್‌ ಮತ್ತು ನಿವೇದಿತಾ ಗೌಡ.ಇನ್ನು ದಿವಾಕರ್ ಮತ್ತು ಶ್ರುತಿ ಪ್ರಕಾಶ್ ಕಳೆದ ವಾರ 'ಕಳಪೆ' ಬೋರ್ಡ್‌ಗಾಗಿ ಮನೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಈ ವಾರ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದರು ಬಿಗ್‌ಬಾಸ್‌. ಇನ್ನು ಈ ವಾರ ಮನೆಯ ಕ್ಯಾಪ್ಟನ್‌ ಆಗಿರುವ ಸಮೀರ್‌ ಆಚಾರ್ಯ ಬಿಗ್‌ಬಾಸ್‌ ಆದೇಶದಂತೆ ಅನುಪಮಾ ಗೌಡ ಅವರನ್ನು ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಅವರು ಭಾವುಕರಾಗಿರುವ ಕಾರಣ ಅವರನ್ನು ನೇರವಾಗಿ ನಾಮಿನೇಟ್‌ ಮಾಡುತ್ತಿರುವುದಾಗಿ ಸಮೀರ್‌ ಹೇಳಿದರು.
ಮೂರನೇ ವಾರ ಬಿಗ್‌ ಮನೆಯಿಂದ ಹೊರಗೆ ಬರ್ತಾರಾ ನಿವೇದಿತಾ? ಮೂರನೇ ವಾರ ಬಿಗ್‌ ಮನೆಯಿಂದ ಹೊರಗೆ ಬರ್ತಾರಾ ನಿವೇದಿತಾ? Reviewed by VIVEKARAMA on ಅಕ್ಟೋಬರ್ 31, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.