ರಕ್ಷಿತಾ ಬೇಡಿಕೆ ಈಡೇರಿಸಿದ್ದು ದರ್ಶನ್

ನಟಿ ರಕ್ಷಿತ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹಕ್ಕೆ ದಶಕಗಳ ಇತಿಹಾಸವಿದೆ. ಕನ್ನಡ ಚಿತ್ರರಂಗದ ಸೂಪರ್ ಹಿಟ್ ಜೋಡಿಗಳಲ್ಲಿ ದರ್ಶನ್-ರಕ್ಷಿತ ಜೋಡಿ ಸಹ ಒಂದು. ಆ ಸ್ನೇಹ ಇಂದಿಗೂ ಮಾಸಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ.


ಡ್ಯಾನ್ಸ್ ಕರ್ನಾಟಕ ಡಾನ್ಸ್ 'ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬರಾದ ಚನ್ನಪ್ಪ, ನಟ ದರ್ಶನ್ ಅವರ ದೊಡ್ಡ ಅಭಿಮಾನಿ. ಕಾರ್ಯಕ್ರಮದ ವಿನ್ನರ್ ಕೂಡಾ ಇವರೇ. ಆದರೆ, ಚನ್ನಪ್ಪನವರಿಗೆ ದರ್ಶನ್ ಅವರನ್ನು ಒಮ್ಮೆ ಭೇಟಿಯಾಗಬೇಕು  ಎಂಬ ಆಸೆಯಿತ್ತು. ಆದರೆ, ಅದು ಈಡೇರಿರಲಿಲ್ಲ.


ಚನ್ನಪ್ಪನವರ ಈ ಕನಸು ರಕ್ಷಿತಾ ಅವರಿಗೆ ಗೊತ್ತಾದ ನಂತರ, ರಕ್ಷಿತಾ ಅವರೇ ದರ್ಶನ್ ಅವರಲ್ಲಿ ಮನವಿ ಮಾಡಿಕೊಂಡರು.


ರಕ್ಷಿತರ ಬೇಡಿಕೆ ಮನ್ನಿಸಿರುವ ದರ್ಶನ್, ಕೆಲವೇ ದಿನಗಳಲ್ಲಿ ಚೆನ್ನಪ್ಪನವರ ಭೇಟಿ ಮಾಡಿ  ಅಭಿಮಾನಿಯ ಆಸೆಯನ್ನಷ್ಟೇ ಅಲ್ಲ, ಸ್ನೇಹಿತನ ಬೇಡಿಕೆಯನ್ನೂ ಪೂರೈಸಿದ್ದಾರೆ.
ರಕ್ಷಿತಾ ಬೇಡಿಕೆ ಈಡೇರಿಸಿದ್ದು ದರ್ಶನ್ ರಕ್ಷಿತಾ ಬೇಡಿಕೆ ಈಡೇರಿಸಿದ್ದು ದರ್ಶನ್ Reviewed by VIVEKARAMA on ಅಕ್ಟೋಬರ್ 02, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.