ಪ್ರತಿ ಭಾನುವಾರ ಬಿಗ್‌ಬಾಸ್‌ ವೇದಿಕೆಯಲ್ಲಿ 'ಕಿಚ್ಚನ್‌ ಟೈಮ್‌'

ಬಿಗ್‌ಬಾಸ್‌ ಸೀಸನ್‌ 5 ಸಾಕಷ್ಟು ಹೊಸತನಗಳಿಂದ ಕೂಡಿದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಕಳೆದ ಬಿಗ್‌ಬಾಸ್‌ ಸೀಸನ್‌ಗಳಲ್ಲಿ ಪ್ರತಿ ಭಾನುವಾರ 'ಸೂಪರ್‌ ಸಂಡೇ ವಿತ್‌ ಕಿಚ್ಚ' ಎಂಬ ಕಾರ್ಯಕ್ರಮ ಬಿಗ್‌ ವೇದಿಕೆ ಮೇಲೆ ನಡೆಯುತ್ತಿತ್ತು.


ಸೂಪರ್‌ ಸಂಡೇ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ಚಿತ್ರರಂಗದ ಸೆಲೆಬ್ರಿಟಿಗಳು ಭಾಗವಹಿಸಿ, ಒಂದಿಷ್ಟು ಮನರಂಜನೆ ನೀಡುತ್ತಿದ್ದರು. ಅಷ್ಟೇ ಅಲ್ಲದೆ ಬಿಗ್‌ ಮನೆಯಿಂದ ಎಲಿಮಿನೇಟ್‌ ಆದ ಸ್ಪರ್ಧಿಯೊಂದಿಗೆ ಕಿಚ್ಚನ ಮಾತುಕತೆ ನಡೆಯುತ್ತಿದ್ದದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ ಈ ಬಾರಿ ಕಾನ್ಸೆಪ್ಟ್‌ ಸ್ವಲ್ಪ ಬದಲಾಗಿದೆ. ಇನ್ಮುಂದೆ ಬಿಗ್‌ಬಾಸ್‌ನ ಪ್ರತಿ ಭಾನುವಾರ 'ಕಿಚ್ಚನ್‌ ಟೈಮ್‌' ಪ್ರಸಾರವಾಗಲಿದೆ.

ಕಳೆದ ಬಿಗ್‌ಬಾಸ್‌ ಸೀಸನ್‌ 4ರ ಎಪಿಸೋಡ್‌ವೊಂದರಲ್ಲಿ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಸ್ಪರ್ಧಿಗಳು ಇಷ್ಟಪಟ್ಟ ತಿನಿಸುಗಳನ್ನು ಖುದ್ದಾಗಿ ತಯಾರಿಸಿದ್ದರು. ಈಗ ಸೀಸನ್‌ 'ಕಿಚ್ಚನ್‌ ಟೈಮ್‌'ನಲ್ಲಿ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಸೆಲೆಬ್ರಿಟಿಗಳು ಇಷ್ಟಪಡುವ ಡಿಶ್‌ ಅನ್ನು ಸುದೀಪ್‌ ರೆಡಿ ಮಾಡಿಕೊಡುತ್ತಾರೆ, ಇಲ್ಲವೇ ಬಂದ ಸೆಲೆಬ್ರಿಟಿಗಳಿಗೆ ರುಚಿಕರ ರೆಸಿಪಿಗಳನ್ನು ಹೇಳಿಕೊಡಲಿದ್ದಾರೆ.


ಅಂದಹಾಗೆ, ಈ ಭಾನುವಾರ 'ಕಿರಿಕ್‌ ಪಾರ್ಟಿ' ಚೆಲುವೆ ಸಂಯುಕ್ತಾ ಹೆಗಡೆ 'ಕಿಚ್ಚನ್‌ ಟೈಮ್‌'ನಲ್ಲಿ ಭಾಗವಹಿಸಿ, ಕಿಚ್ಚನ ಮಾರ್ಗದರ್ಶನದೊಂದಿಗೆ ಒಂದು ಸ್ಪೆಶಲ್‌ ಡಿಶ್‌ ತಯಾರಿಸಲಿದ್ದಾರೆ. ಅಷ್ಟೇ ಅಲ್ಲದೆ 'ಕೆಂಡ ಸಂಪಿಗೆ' ನಾಯಕ ವಿಕ್ಕಿ ಸಹ ' ಕಿಚ್ಚನ್‌ ಟೈಮ್‌'ನಲ್ಲಿ ಭಾಗವಹಿಸಿದ್ದಾರೆ. ಸಂಯುಕ್ತಾ ಮತ್ತು ವಿಕ್ಕಿ 'ಕಾಲೇಜ್‌ ಕುಮಾರ್‌' ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.
ಪ್ರತಿ ಭಾನುವಾರ ಬಿಗ್‌ಬಾಸ್‌ ವೇದಿಕೆಯಲ್ಲಿ 'ಕಿಚ್ಚನ್‌ ಟೈಮ್‌' ಪ್ರತಿ ಭಾನುವಾರ ಬಿಗ್‌ಬಾಸ್‌ ವೇದಿಕೆಯಲ್ಲಿ 'ಕಿಚ್ಚನ್‌ ಟೈಮ್‌' Reviewed by VIVEKARAMA on ಅಕ್ಟೋಬರ್ 23, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.