‘ಅಗ್ನಿಸಾಕ್ಷಿ’ ಸಿದ್ಧಾರ್ಥ್-ಸನ್ನಿಧಿ ಇನ್ನು ಇಲ್ಲೂ ಜೋಡಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿರುವ ಸಿದ್ಧಾರ್ಥ್-ಸನ್ನಿಧಿ ಅಲಿಯಾಸ್ ವಿಜಯ್ ಸೂರ್ಯ, ವೈಷ್ಣವಿ ಇನ್ನು ಇನ್ನೊಂದು ಕಾರ್ಯಕ್ರಮಕ್ಕೆ ಜೋಡಿಯಾಗಲಿದ್ದಾರೆ.
ಈ ಧಾರವಾಹಿ ಮೂಲಕ ಇವರಿಬ್ಬರ ಜೋಡಿಯನ್ನು ಜನ ಎಷ್ಟು ಇಷ್ಟಪಟ್ಟಿದ್ದಾರೆಂದರೆ ನಿಜ ಜೀವನದಲ್ಲೂ ಇವರೇ ಜೋಡಿಯಾಗಲಿ ಎನ್ನುವಷ್ಟರ ಮಟ್ಟಿಗೆ ಪಾಪ್ಯುಲರ್. ಇದೀಗ ವೀಕ್ಷಕರ ಆಸೆ ಪೂರೈಸಲು ವೀಕೆಂಡ್ ನಲ್ಲೂ ಇವರಿಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.ಮಜಾ ಟಾಕೀಸ್ ಮುಕ್ತಾಯದ ನಂತರ ಹೊಸದಾಗಿ ಆರಂಭವಾಗುತ್ತಿರುವ ‘ಕಾಮಿಡಿ ಟಾಕೀಸ್’ಗೆ ಇವರಿಬ್ಬರೂ ಜತೆಯಾಗಿ ನಿರೂಪಣೆ ಮಾಡಲಿದ್ದಾರೆ. ಹಾಗಾಗಿ ಇದುವರೆಗೆ ಸೋಮವಾರದಿಂದ ಶುಕ್ರವಾರದರೆಗಷ್ಟೇ ಇವರಿಬ್ಬರ ಸರಸ ಸಲ್ಲಾಪ ನೋಡುತ್ತಿದ್ದ ವೀಕ್ಷಕರು ಇನ್ನು ಶನಿವಾರ ಮತ್ತು ಭಾನುವಾರವೂ ರಾತ್ರಿ 8 ಗಂಟೆಗೆ ಇವರಿಬ್ಬರನ್ನು ನೋಡಿ ಖುಷಿಪಡಬಹುದು.
‘ಅಗ್ನಿಸಾಕ್ಷಿ’ ಸಿದ್ಧಾರ್ಥ್-ಸನ್ನಿಧಿ ಇನ್ನು ಇಲ್ಲೂ ಜೋಡಿ ‘ಅಗ್ನಿಸಾಕ್ಷಿ’ ಸಿದ್ಧಾರ್ಥ್-ಸನ್ನಿಧಿ ಇನ್ನು ಇಲ್ಲೂ ಜೋಡಿ Reviewed by VIVEKARAMA on ಅಕ್ಟೋಬರ್ 31, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.