ಹೊಚ್ಚ ಹೊಸ ಧಾರಾವಾಹಿಯಲ್ಲಿ 'ಲಕ್ಷ್ಮಿ ಬಾರಮ್ಮ' ಚಿನ್ನು ನಾಯಕಿ!!

ಕಿರುತೆರೆಯ ಜನಪ್ರಿಯ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ 'ಚಿನ್ನು' ಪಾತ್ರಕ್ಕೆ ಜೀವ ತುಂಬಿದ್ದ ನಟಿ ಕವಿತಾ ಗೌಡ ಅನಂತರ ಬೆಳ್ಳಿತೆರೆಗೆ ಪರಿಚಿತರಾದರು.

 'ಚಿನ್ನು' ಪಾತ್ರಕ್ಕೆ ಗುಡ್ ಬೈ ಹೇಳಿ 'ಶ್ರೀನಿವಾಸ ಕಲ್ಯಾಣ' ಮತ್ತು 'ಫಸ್ಟ್ ಲವ್' ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದ ನಟಿ ಕವಿತಾ ಗೌಡ ಇದೀಗ ವಾಪಸ್ ಕಿರುತೆರೆ ಕಡೆಗೆ ಮುಖ ಮಾಡಿದ್ದಾರೆ.


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿರುವ 'ವಿದ್ಯಾ ವಿನಾಯಕ' ಧಾರಾವಾಹಿಯ ನಾಯಕಿ 'ವಿದ್ಯಾ' ಪಾತ್ರದಲ್ಲಿ ಕವಿತಾ ಗೌಡ ಮಿಂಚಲಿದ್ದಾರೆ. ಸೀರಿಯಲ್ ನಲ್ಲಿ ಕವಿತಾ ಗೌಡ ರವರದ್ದು ಹೆಸರಿಗೆ ತಕ್ಕ ಹಾಗೆ ವಿದ್ಯಾವಂತೆಯ ಪಾತ್ರವಂತೆ.


ಪಾತ್ರ ತುಂಬಾ ಚೆನ್ನಾಗಿರುವ ಕಾರಣಕ್ಕೆ ಒಪ್ಪಿಕೊಂಡೆ ಎನ್ನುವ ಕವಿತಾ ಗೌಡ ಸದ್ಯ 'ವಿದ್ಯಾ ವಿನಾಯಕ' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.
ಹೊಚ್ಚ ಹೊಸ ಧಾರಾವಾಹಿಯಲ್ಲಿ 'ಲಕ್ಷ್ಮಿ ಬಾರಮ್ಮ' ಚಿನ್ನು ನಾಯಕಿ!! ಹೊಚ್ಚ ಹೊಸ ಧಾರಾವಾಹಿಯಲ್ಲಿ 'ಲಕ್ಷ್ಮಿ ಬಾರಮ್ಮ' ಚಿನ್ನು ನಾಯಕಿ!! Reviewed by VIVEKARAMA on ಅಕ್ಟೋಬರ್ 03, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.