ಗಣೇಶ್ ಈಗ ಮುವಾಯ್‌ಥಾಯ್‌ ನ ಇಂಡಿಯನ್ ಬ್ರಾಂಡ್ ಅಂಬಾಸಿಡರ್!


 ಚಮಕ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿರುವ ಗಣೇಶ್ ಪ್ರಶಾಂತ್ ಅವರ ಆರೇಂಜ್ ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದೇ ವೇಳೆ ಗಣೇಶ್ ಜನಪ್ರಿಯ ಸಮರ ಕಲೆಯಾದ ಮುವಾಯ್ ಥಾಯ್ ಆರ್ಟ್ಸ್ ಕಲಿಯುತ್ತಿದ್ದಾರೆ.

ಕಳೆದ 10 ತಿಂಗಳಿಂದ ಪ್ರತಿದಿನ ಮೂರು ಗಂಟೆಯನ್ನು ಮುವಾಯ್ ಥಾಯ್  ಮಾರ್ಷಲ್ ಆರ್ಟ್ಸ್ ಕಲಿಯಲು ಮೀಸಲಾಗಿರಿಸಿದ್ದಾರೆ, ಅದಕ್ಕೆ ಸಿಕ್ಕ ಪ್ರತಿಫಲ ಎಂಬಂತೆ ಇಂಡಿಯನ್‌ ಬ್ರಾಂಡ್‌ ಅಂಬಾಸಿಡರ್‌ ಆಫ್‌ ಮುವಾಯ್‌ಥಾಯ್‌ ಆಗಿಯೂ ಆಯ್ಕೆಯಾಗಿದ್ದಾರೆ.ನಾನು ಮಾರ್ಷಲ್ ಆರ್ಟ್ಸ್ ಕಲಿಯುತ್ತಿದ್ದೆ, ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿರುವುದು ಖುಷಿಯ ವಿಚಾರವಾಗಿದೆ ಎಂದು ಹೇಳಿದ್ದಾರೆ, ಬ್ರ್ಯಾಂಡ್ ಅಂಬಾಸಿಡರ್ ಗಾಗಿ ಮುವಾಯ್‌ಥಾಯ್‌ ಕಂಪನಿ ಹುಡುಕಾಟ ನಡೆಸುತ್ತಿತ್ತು, ನನ್ನ ಅಭಿರುಚಿಯ ಬಗ್ಗೆ ತಿಳಿದ ಫೆಡರೇಷನ್ ನನ್ನನ್ನು ಪರಿಗಣಿಸಿದೆ ಎಂದು ಹೇಳಿದ್ದಾರೆ.

ಮಾರ್ಷಲ್‌ ಆರ್ಟ್‌ನಲ್ಲಿ ತುಂಬಾ ಕಠಿಣವಾದ ಕಲೆ ಇದಾಗಿದ್ದರಿಂದ ನಾನೂ ಕೂಡ ಅಷ್ಟೇ ಶ್ರಮಪಟ್ಟು ಕಲಿತಿದ್ದೇನೆ. ಅವಕಾಶ ಸಿಕ್ಕರೆ ಇದನ್ನು ಸಿನಿಮಾದಲ್ಲಿಯೂ ಬಳಸಿಕೊಳ್ಳುತ್ತೇನೆ' ಎಂದು ಗಣೇಶ್‌ ತಿಳಿಸಿದ್ದಾರೆ.
ಗಣೇಶ್ ಈಗ ಮುವಾಯ್‌ಥಾಯ್‌ ನ ಇಂಡಿಯನ್ ಬ್ರಾಂಡ್ ಅಂಬಾಸಿಡರ್! ಗಣೇಶ್ ಈಗ ಮುವಾಯ್‌ಥಾಯ್‌ ನ ಇಂಡಿಯನ್ ಬ್ರಾಂಡ್ ಅಂಬಾಸಿಡರ್! Reviewed by VIVEKARAMA on ಅಕ್ಟೋಬರ್ 19, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.