ಪ್ರಜ್ವಲ್ ಮತ್ತು ದಿಗಂತ್ ಗೆ ಓಪನ್ ಚಾಲೆಂಜ್ ಹಾಕಿದ ಗಣೇಶ್.!

ಗೋಲ್ಡನ್ ಸ್ಟಾರ್ ಗಣೇಶ್, ಪ್ರಜ್ವಲ್ ದೇವರಾಜ್‌ ಮತ್ತು ಧೂದ್ ಪೇಡಾ ದಿಗಂತ್ ಮೂವರು ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ಸ್ನೇಹಿತರು. ಮೂವರು ತಮ್ಮದೇ ಆದ ಪ್ರತಿಭೆ ಮೂಲಕ ಅಭಿಮಾನ ಸಂಪಾದಾನೆ ಮಾಡಿರುವ ಕಲಾವಿದರು. ಹೀಗಿರುವಾಗ, ನಟ ಗಣೇಶ್ ತಮ್ಮ ಇಬ್ಬರು ಸ್ನೇಹಿತರಿಗೆ ಬಹಿರಂಗವಾಗಿ ಒಂದು ಸವಾಲೆಸೆದಿದ್ದಾರೆ.
ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಈ ಸವಾಲೆಸೆದಿದ್ದು, ಪ್ರಜ್ವಲ್ ಮತ್ತು ದಿಗಂತ್ ಈ ಚಾಲೆಂಜ್ ನ್ನ ಹೇಗೆ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.

            ಮುವಾಯ್ ಥಾಯ್‍ ಕಲಿತಿರುವ ಗಣೀ 
ಈಗಾಗಲೇ ಗೊತ್ತಿರುವಾಗೆ, ಗೋಲ್ಡನ್‌ ಸ್ಟಾರ್‌ ಗಣೇಶ್ ಮುವಾಯ್ ಥಾಯ್‍ ಕಲೆಯನ್ನ ಕಲಿತಿದ್ದಾರೆ. ಸತತ ಮೂರು ತಿಂಗಳ ತರಬೇತಿ ಪಡೆದುಕೊಂಡಿದ್ದು, ಈಗ ಮುವಾಯ್ ಥಾಯ್‌ ನ ಭಾರತೀಯ ರಾಯಭಾರಿ ಕೂಡ ಆಗಿದ್ದಾರೆ.

ನಟ ಗಣೇಶ್ ಅವರು ತಮ್ಮ ಮುವಾಯ್ ಥಾಯ್‍ ಕಲೆಯಿಂದ, ತಮ್ಮ ಕಾಲಿನ ಕಿಕ್ ಮೂಲಕ ಎದುರಗಡೆ ವ್ಯಕ್ತಿಯ ಕೈಯಲ್ಲಿದ್ದ ಕಲ್ಲಂಗಡಿಯನ್ನ ಹೊಡೆದು ಹಾಕಿದ್ದಾರೆ.


ದಿಗಂತ್ ಮತ್ತು ಪ್ರಜ್ವಲ್ ಮಾಡಬೇಕಾಗಿರುವುದೇ ಇಷ್ಟೇ 
ಹೀಗೆ, ಕಾಲಿನ ಕಿಕ್ ಮೂಲಕ ಗಣೇಶ್ ಕಲ್ಲಂಗಡಿ ಹೊಡೆದಾಗೆ, ನಟ ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಇಬ್ಬರು ಕಿಕ್ ಮೂಲಕ ಕಲ್ಲಂಗಡಿ ಹೊಡೆಯಬೇಕು. ಇದು ಗಣೇಶ್ ಅವರ ಚಾಲೆಂಜ್. ಅಭಿಮಾನಿಗಳು ಕೂಡ ಈ ಚಾಲೆಂಜ್ ಸ್ವೀಕರಿಸಬಹುದು ಎಂದು ಸ್ವತಃ ಗಣೇಶ್ ಅವರೇ ತಿಳಿಸಿದ್ದಾರೆ.

ಪ್ರಜ್ವಲ್ ಮತ್ತು ದಿಗಂತ್ ಗೆ ಓಪನ್ ಚಾಲೆಂಜ್ ಹಾಕಿದ ಗಣೇಶ್.! ಪ್ರಜ್ವಲ್ ಮತ್ತು ದಿಗಂತ್ ಗೆ ಓಪನ್ ಚಾಲೆಂಜ್ ಹಾಕಿದ ಗಣೇಶ್.! Reviewed by VIVEKARAMA on ಅಕ್ಟೋಬರ್ 19, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.