ಕೊನೆಗೂ ಈ ನಟ-ನಟಿಯರು 'ಮಜಾ ಟಾಕೀಸ್' ಮೆಟ್ಟಿಲು ಹತ್ತಲೇ ಇಲ್ಲ

'ಕಲರ್ಸ್ ಕನ್ನಡ' ವಾಹಿನಿಯ 'ಮಜಾ ಟಾಕೀಸ್' ಕಾರ್ಯಕ್ರಮ ಮುಗಿಯುವ ಹಂತ ತಲುಪಿದೆ. ಈಗಾಗಲೇ ಕೊನೆಯ ಸಂಚಿಕೆಯ ಚಿತ್ರೀಕರಣ ಕೂಡ ನಡೆದಿದ್ದು, ಅದು ಪ್ರಸಾರವಾಗುವುದು ಮಾತ್ರ ಬಾಕಿ ಇದೆ.

'ಮಜಾ ಟಾಕೀಸ್' ನಲ್ಲಿ ತಮ್ಮ ಮೆಚ್ಚಿನ ಸ್ಟಾರ್ ಗಳನ್ನು ನೋಡಬೇಕು ಎಂಬುದು ಅನೇಕ ಅಭಿಮಾನಿಗಳಲ್ಲಿ ಆಸೆ ಇದ್ದೇ ಇರುತ್ತದೆ. ಅದೇ ರೀತಿ ಕನ್ನಡದ ಬಹುತೇಕ ನಟ ನಟಿಯರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಸುಮಾರು 280 ಸಂಚಿಕೆ ದಾಟಿರುವ ಈ ಕಾರ್ಯಕ್ರಮದಲ್ಲಿ ಕೆಲವರು ಮಾತ್ರ 'ಮಜಾ ಟಾಕೀಸ್' ಮೆಟ್ಟಿಲು ಹತ್ತಲೇ ಇಲ್ಲ.


ಯಶ್ 
'ಮಜಾ ಟಾಕೀಸ್'ನಲ್ಲಿ ಕಾಣಿಸಿಕೊಳ್ಳದ ನಟರ ಪೈಕಿ ನಟ ಯಶ್ ಪ್ರಮುಖರು. ರಾಕಿಂಗ್ ಸ್ಟಾರ್ ಅಭಿಮಾನಿಗಳು ಯಶ್ ಇವತ್ತೋ-ನಾಳೆಯೋ 'ಮಜಾ ಟಾಕೀಸ್'ಗೆ ಬರಬಹುದು ಎಂಬ ಆಸೆ ಇಟ್ಟುಕೊಂಡಿದ್ದರು. ಆದರೆ ಕಡೆಗೂ ಯಶ್ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ.

ಈ ಹಿಂದೆಯೇ ಸೃಜನ್ ಲೋಕೇಶ್ ಹೇಳಿರುವ ಹಾಗೆಯೇ ಅನೇಕ ಬಾರಿ ಪ್ಲಾನ್ ಮಾಡಿದರೂ ಯಶ್ ತಮ್ಮ ಬಿಜಿ ಶೆಡ್ಯೂಲ್ ನಿಂದ ಈ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ.


ಗಣೇಶ್ 
ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ತಮಾಷೆಯನ್ನು 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ನೋಡಬೇಕು ಎಂಬ ಅಭಿಮಾನಿಗಳ ಆಸೆ ಇನ್ನೂ ನೆರವೇರಿಲ್ಲ.


ದುನಿಯಾ ವಿಜಯ್ 
ಕನ್ನಡದ ಮತ್ತೊಬ್ಬ ನಟ ದುನಿಯಾ ವಿಜಯ್ ಕೂಡ ಅದೇಕೋ 'ಮಜಾ ಟಾಕೀಸ್'ಗೆ ಬರಲಿಲ್ಲ.

ರಾಧಿಕಾ ಪಂಡಿತ್ 
ಸ್ಟಾರ್ ನಟಿ ಆಗಿರುವ ರಾಧಿಕಾ ಪಂಡಿತ್ ಅವರು ಸಹ 'ಮಜಾ ಟಾಕೀಸ್'ನಲ್ಲಿ ಕಾಣಿಸಲೇ ಇಲ್ಲ.

ರಕ್ಷಿತಾ ಪ್ರೇಮ್ 
ಇತ್ತೀಚಿಗೆ ಹೆಚ್ಚಾಗಿ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಬಿಜಿ ಆಗಿರುವ ನಟಿ ರಕ್ಷಿತಾ 'ಮಜಾ ಟಾಕೀಸ್'ಗೆ ಬರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಕೂಡ ಹುಸಿ ಆಗಿದೆ.ಕಾರ್ಯಕ್ರಮಕ್ಕೆ ಬಂದಿದ್ದ ಸ್ಟಾರ್ ಗಳು 
ಸೃಜನ್ ಲೋಕೇಶ್ ಅವರ 'ಮಜಾ ಟಾಕೀಸ್'ಗೆ ಕನ್ನಡದ ಬಹುತೇಕ ಟಾಪ್ ನಟರು ಭೇಟಿ ನೀಡಿದ್ದಾರೆ. ನಟ ಶಿವರಾಜ್ ಕುಮಾರ್, ದರ್ಶನ್, ಉಪೇಂದ್ರ, ರವಿಚಂದ್ರನ್, ಪುನೀತ್, ಸುದೀಪ್, ಜಗ್ಗೇಶ್ ಸೇರಿದಂತೆ ಸಾಕಷ್ಟು ನಟರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.


ಮುಗಿದ 'ಮಜಾ ಟಾಕೀಸ್ '
'ಮಜಾ ಟಾಕೀಸ್' ಮುಗಿದಿದಕ್ಕೆ ಅನೇಕ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಕಾರ್ಯಕ್ರಮವನ್ನು ಮತ್ತೆ ಶುರು ಮಾಡಿ ಎಂದು ಹೇಳುತ್ತಿದ್ದಾರೆ. ಇನ್ನೂ ಕಾರ್ಯಕ್ರಮದ ಕೊನೆಯ ಸಂಚಿಕೆ ದೀಪಾವಳಿ ಹಬ್ಬದ ವಿಶೇಷವಾಗಿ ಪ್ರಸಾರವಾಗುವ ಸಾಧ್ಯತೆ ಇದೆ.


ಕೊನೆಗೂ ಈ ನಟ-ನಟಿಯರು 'ಮಜಾ ಟಾಕೀಸ್' ಮೆಟ್ಟಿಲು ಹತ್ತಲೇ ಇಲ್ಲ ಕೊನೆಗೂ ಈ ನಟ-ನಟಿಯರು 'ಮಜಾ ಟಾಕೀಸ್' ಮೆಟ್ಟಿಲು ಹತ್ತಲೇ ಇಲ್ಲ Reviewed by VIVEKARAMA on ಅಕ್ಟೋಬರ್ 13, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.