ಗೋವಾ ಬೀಚ್ ನಲ್ಲಿ ನಟಿ ಹರಿಪ್ರಿಯಾ ಬೈಕ್ ರೈಡಿಂಗ್ !

ನಟಿ ಹರಿಪ್ರಿಯಾ ಕಳೆದ ಕೆಲವು ದಿನಗಳಿಂದ ಗೋವಾ ಬೀಚ್ ನಲ್ಲಿ ಕ್ಯಾಂಪ್ ಹಾಕಿದ್ದಾರೆ. ದಿನಕರ್ ತೂಗುದೀಪ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾಗಾಗಿ ಚಿತ್ರ ತಂಡದ ಜೊತೆ ಹರಿಪ್ರಿಯಾ ಗೋವಾ ಬೀಚ್ ಗೆ ತೆರಳಿದ್ದಾರೆ.


ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ಜೊತೆಗಿನ ಫೋಟೋಗಳನ್ನು ಹರಿಪ್ರಿಯಾ ಶೇರ್ ಮಾಡಿದ್ದಾರೆ. ಜೊತೆಗೆ ಬೀಚ್ ನಲ್ಲಿನ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ.


ಗೋವಾದಲ್ಲಿ ಚಿತ್ರತಂಡ ತಾತ್ಕಾಲಿಕ ಕ್ಯಾಂಪ್ ಹೂಡಿದೆ, ಹಾಡಿನ ಚಿತ್ರೀಕರಣದಲ್ಲಿ ತಂಡ ನಿರತವಾಗಿದ್ದು, ಸಮುದ್ರದ ದಂಡೆಯ ಮೇಲೆ ಹರಿಪ್ರಿಯಾ ಬೈಕ್ ರೈಡಿಂಗ್ ಮಾಡುವ ದೃಶ್ಯ ಚಿತ್ರೀಕರಿಸಲಾಗಿದೆ.


ಲೈಫ್ ಜೊತೆ ಒಂದ್ ಸೆಲ್ಫೀ ಸೆಟ್ ನಲ್ಲಿ ಬ್ಯುಸಿ ಇರುವಾಗಲೇ ಹಲವು ಹೊಸ ಚಿತ್ರಗಳ ಕಥೆ ಕೇಳುತ್ತೇನೆ, ಅದರಲ್ಲಿ ಉತ್ತಮವಾದ ಕಥೆಯನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 

ಗೋವಾ ಬೀಚ್ ನಲ್ಲಿ ನಟಿ ಹರಿಪ್ರಿಯಾ ಬೈಕ್ ರೈಡಿಂಗ್ ! ಗೋವಾ ಬೀಚ್ ನಲ್ಲಿ ನಟಿ ಹರಿಪ್ರಿಯಾ ಬೈಕ್ ರೈಡಿಂಗ್ ! Reviewed by VIVEKARAMA on ಅಕ್ಟೋಬರ್ 05, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.