ನಟಿ ರಮ್ಯಾ ಬಗ್ಗೆ ಹೀಗೊಂದು ಗುಸುಗುಸು.. ಪಿಸುಪಿಸು.. ಸುದ್ದಿ!

'ಅಭಿ', 'ಆಕಾಶ್', 'ಅರಸು', 'ಸಿದ್ಲಿಂಗು'... ಈ ರೀತಿಯ ಸಿನಿಮಾಗಳನ್ನು ನೋಡುವಾಗ ಅರೇ... ರಮ್ಯಾ ಮತ್ತೆ ಸಿನಿಮಾ ಮಾಡಬೇಕು ಅಂತ ಅನಿಸುತ್ತದೆ. ಎಷ್ಟೋ ಅಭಿಮಾನಿಗಳು ಈಗಲೂ ರಮ್ಯಾ ಸಿನಿಮಾ ಮಾಡಿದರೆ ನಾವು ನೋಡುತ್ತೇವೆ ಎಂದು ಹೇಳುತ್ತಿರುತ್ತಾರೆ.
ಅಂತಹ ಅಭಿಮಾನಿಗಳಿಗೆ ಇಷ್ಟ ಆಗುವ ಒಂದು ಸಿಹಿ ಸುದ್ದಿ ಹೊರ ಬಂದಿದೆ. ಹೌದು, ಮತ್ತೆ ನಟಿ ರಮ್ಯಾ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಈಗ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಸ್ಯಾಂಡಲ್ ವುಡ್ ಕ್ವೀನ್ ಆಗಿದ್ದ ರಮ್ಯಾ ಕೊನೆಯದಾಗಿ ನಟಿಸಿದ್ದು 'ನಾಗರಹಾವು' ಸಿನಿಮಾದಲ್ಲಿ.


'ಮಹೇಂದರ್ ಮನಸಲ್ಲಿ ಮುಮ್ತಾಜ್' ಚಿತ್ರ
ಎಸ್.ಮಹೇಂದರ್ ನಿರ್ದೇಶನದ 'ಮಹೇಂದರ್ ಮನಸಲ್ಲಿ ಮುಮ್ತಾಜ್' ಎಂಬ ಹೊಸ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ರಮ್ಯಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ.
ನಿರ್ದೇಶಕ ನಾಗಶೇಖರ್ ಈಗ ಒಂದು ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದು, ಈ ಚಿತ್ರದ ಮೂಲಕ ನಟಿ ರಮ್ಯಾ ಕಮ್ ಬ್ಯಾಕ್ ಮಾಡಲಿದ್ದಾರಂತೆ.


'ಮಹೇಂದರ್ ಮನಸಲ್ಲಿ ಮುಮ್ತಾಜ್' ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿದ್ದು, ಗಣೇಶ್ ಜೊತೆ ರಮ್ಯಾ ತೆರೆ ಹಂಚಿಕೊಳ್ಳಲಿದ್ದಾರಂತೆ.
ನಟಿ ರಮ್ಯಾ ಬಗ್ಗೆ ಹೀಗೊಂದು ಗುಸುಗುಸು.. ಪಿಸುಪಿಸು.. ಸುದ್ದಿ! ನಟಿ ರಮ್ಯಾ ಬಗ್ಗೆ ಹೀಗೊಂದು ಗುಸುಗುಸು.. ಪಿಸುಪಿಸು.. ಸುದ್ದಿ! Reviewed by VIVEKARAMA on ಅಕ್ಟೋಬರ್ 12, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.