ಸೆಲೆಬ್ರಿಟಿ ಸ್ಟಾರ್ ಗಳೊಂದಿಗೆ 'ವೈರ' ಚಿತ್ರ ನೋಡಿ, ಬಹುಮಾನ ಗೆಲ್ಲಿ

ಇದೇ ಅಕ್ಟೋಬರ್ 4 ರಂದು ಒರಿಯನ್ ಮಾಲ್ ನಲ್ಲಿ ಚಿತ್ರದ ಪ್ರೀಮಿಯರ್ ಶೋ ಆಯೋಜನೆ ಇದೇ ಅಕ್ಟೋಬರ್ 6 ರ ಶುಕ್ರವಾರ ತೆರೆಗೆ ಬರಲಿರುವ ಬಹುನಿರೀಕ್ಷಿತ ಚಿತ್ರ "ವೈರ" ಈಗಾಗಲೇ ಚಿತ್ರರಸಿಕರಲ್ಲಿ ಬಹಳಷ್ಟು ಕುತೂಹಲ ಹೆಚ್ಚಿಸಿದೆ. ಅದಕ್ಕೂ ಮುನ್ನ ಚಿತ್ರತಂಡದವರು ಪೇಯ್ಡ್ ಪ್ರೀಮಿಯರ್ ಶೋವನ್ನು  ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಪ್ರದರ್ಶನ ಮಾಡಲಿದ್ದು, ಅಭಿಮಾನಿಗಳಿಗೆ ಹಲವು ಸೆಲೆಬ್ರಿಟಿಗಳ ಜೊತೆಗೆ ಸಿನಿಮಾ ನೋಡುವ ಅವಕಾಶವನ್ನು ಕಲ್ಪಿಸಿರುವುದಲ್ಲದೇ, ಬಹುಮಾನ ಗೆಲ್ಲುವ ಸುವರ್ಣಾವಕಾಶವನ್ನು ಕಲ್ಪಿಸಿದೆ.

ಅಕ್ಟೋಬರ್ 4 ರ ಸಂಜೆ 6 ಗಂಟೆಗೆ ರಾಜಾಜಿನಗರದ ಒರಿಯನ್ ಮಾಲ್ ನಲ್ಲಿ ಪ್ರಿವ್ಯೂ ಶೋ ನೋಡುವ ಭಾಗ್ಯವನ್ನು ವೈರ ಚಿತ್ರತಂಡ ಒದಗಿಸಲಿದೆ. ಚಿತ್ರ ಬಿಡುಗಡೆಯಾದ ಒಂದು ವಾರದ ನಂತರ ನಡೆಯುವ ಲಕ್ಕಿಡಿಪ್  ನಲ್ಲಿ ಅದೃಷ್ಟಶಾಲಿಗಳ ಆಯ್ಕೆ ಲಕ್ಕಿಡಿಪ್ ಮೂಲಕ ನೆಡೆಯಲಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ಸ್ಕೂಟಿ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಮೊಬೈಲ್ ದೊರೆಯಲಿದೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ  ತಿಳಿಸಿದೆ.


ಆ ಅದೃಷ್ಟಶಾಲಿಗಳು ನೀವೂ ಆಗಬೇಕಿದ್ದಲ್ಲಿ ಮಾಡಬೇಕಾದ್ದಿಷ್ಟೇ!!! ಪೇಯ್ಡ್ ಪ್ರೀಮಿಯರ್ ಶೋ ನೋಡಿದ ಟಿಕೇಟ್ ನ ಅರ್ಧಭಾಗವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಇನ್ನುಳಿದ ಅರ್ಧಭಾಗ ಲಕ್ಕಿಡಿಪ್ ನ ಬಾಕ್ಸ್ ನಲ್ಲಿರುತ್ತದೆ.  ಆರಿಸಿದ ಆಯ್ಕೆ ನಿಮ್ಮ ನಂಬರ್ ಆಗಿದ್ದರೆ ನೀವೇ ವಿಜೇತರು. ಹಾಗಿದ್ದರೆ ತಡವೇಕೆ?? ಈಗಲೇ ನಿಮ್ಮ ಟಿಕೇಟನ್ನು ಪ್ರೀಮಿಯರ್ ಶೋ ಗಾಗಿ ಕಾಯ್ದಿರಿಸಿ...ಬಹುಮಾನ ಗೆಲ್ಲಿ...
ಸೆಲೆಬ್ರಿಟಿ ಸ್ಟಾರ್ ಗಳೊಂದಿಗೆ 'ವೈರ' ಚಿತ್ರ ನೋಡಿ, ಬಹುಮಾನ ಗೆಲ್ಲಿ ಸೆಲೆಬ್ರಿಟಿ ಸ್ಟಾರ್ ಗಳೊಂದಿಗೆ 'ವೈರ' ಚಿತ್ರ ನೋಡಿ, ಬಹುಮಾನ ಗೆಲ್ಲಿ Reviewed by VIVEKARAMA on ಅಕ್ಟೋಬರ್ 03, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.