'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

ಪುಟ್ಟಗೌರಿಯನ್ನ ಸಾಯಿಸುವುದೇ ಒಂದು ಥ್ರಿಲ್ಲಿಂಗ್ ಕಥೆಯಾಗಿದೆ. ಕ್ಯಾನ್ಸರ್ ಬಂದ್ರು ಸಾಯಲಿಲ್ಲ, ಮಣ್ಣಲ್ಲಿ ಜೀವಂತ ಸಮಾಧಿ ಮಾಡಿದ್ರು ಸಾಯಲಿಲ್ಲ.
ಪಾಪ ಗೌರಿನ ಏನೇ ಮಾಡಿದ್ರು ಸಾಯಿಸೋಕೆ ಆಗ್ತಿಲ್ಲ. ಆದ್ರೆ, ಕಳೆದ ಎರಡು ದಿನದ ಹಿಂದಿನ ಎಪಿಸೋಡ್ ನಲ್ಲಿ ಗೌರಿಯನ್ನ ಅತಿ ಎತ್ತರದ ಬೆಟ್ಟದಿಂದ ತಳ್ಳಲಾಗಿದೆ. ಹೀಗೆ, ಬೆಟ್ಟದಿಂದ ಬಿದ್ದ ಗೌರಿ ಸಾಯಲೇ ಇಲ್ಲ. ಅಲ್ಲಿಂದ ಆದ ಅದ್ಭುತಗಳು ಒಂದೆರಡಲ್ಲ. ಇದನ್ನ ಕಂಡು ಟ್ರೋಲ್ ಪೇಜ್ ಗಳು ಪುಟ್ಟಗೌರಿಯನ್ನ ಟ್ರೋಲ್ ಮಾಡಿದ್ದಾರೆ.


ಗೌರಿ ಮೇಲೆ ಹುಲಿ ಅಟ್ಯಾಕ್ 
ಬೆಟ್ಟದಿಂದ ಬಿದ್ದ ಗೌರಿಗೇನೂ ಆಗಲಿಲ್ಲ. ಮುಖದಲ್ಲಿ ಹಾಗೂ ಕೈಮೇಲೆ ಒಂದಿಷ್ಟು ರಕ್ತ ಬಿಟ್ಟರೇ ಗಾಯವೂ ಆಗಿಲ್ಲ. ಇದರ ಮಧ್ಯೆ ಕಾಡಿನಲ್ಲಿ ಗೌರಿ ಮೇಲೆ ಹುಲಿ ಅಟ್ಯಾಕ್ ಮಾಡಿತ್ತು. ಆದ್ರೆ, ಹುಲಿಯ ವಿರುದ್ಧ ಹೋರಾಡಿ ತಪ್ಪಿಸಿಕೊಂಡ ಗೌರಿಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಗೌರಿ ಸಾಹಸಕ್ಕೆ ಹಾವು ಮಟಾಶ್.! 
ಬೆಟ್ಟದಿಂದ ಬಿದ್ದ ಗೌರಿ ಮರದ ಕೊಂಬೆ ಮೇಲೆ ಬೀಳುತ್ತಾಳೆ. ಆ ಸಮಯದಲ್ಲೊಂದು ದೊಡ್ಡ ಹಾವು ಕಣ್ಣೆದುರಿಗೆ ಬಂದು ಬುಸುಗುಡುತ್ತೆ. ಆದ್ರೆ, ಗೌರಿ, ಹಾವಿನ ಕಪಾಳಕ್ಕೆ ಹೊಡೆದು ಅಲ್ಲಿಂದ ಎಸ್ಕೆಪ್ ಆಗುತ್ತಾಳೆ.

ಚಪ್ಪಲಿ ಏನೂ ಆಗಿಲ್ಲ, ಹೂವು ಬಾಡಿಲ್ಲ.! 
ಅತಿ ಎತ್ತರದ ಬೆಟ್ಟದಿಂದ ಕೆಳಗೆ ಬಿದ್ದ ಪುಟ್ಟಗೌರಿ ಮರದ ಕೊಂಬೆಗಳ ಮೇಲೆ ಬಿದ್ದು, ಹುಲಿಯಿಂದ ತಪ್ಪಿಸಿಕೊಂಡು ಬಂದರೂ, ತಲೆಯಲ್ಲಿನ ಹೂವು ಬಾಡಿಲ್ಲ, ಚಪ್ಪಲಿ ಕಳೆದುಕೊಂಡಿಲ್ಲ ಎನ್ನುವುದು ಗಮನಾರ್ಹ.

'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.! 'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.! Reviewed by VIVEKARAMA on ಅಕ್ಟೋಬರ್ 13, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.