​ಈ ವಾರ ನಾಮಿನೇಷನ್‌ನಿಂದ ನಿವೇದಿತಾ ಗೌಡ ಸುರಕ್ಷಿತ

ಬಿಗ್‌ಬಾಸ್‌ ಮನೆಯಲ್ಲಿ ಬಾರ್ಬೀ ಡಾಲ್‌ ಅಂತಲೇ ಕರೆಯಿಸಿಕೊಳ್ಳುವ ನಿವೇದಿತಾ ಗೌಡ ಈ ವಾರದ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಸೇಫ್‌ ಆಗಿದ್ದಾರೆ.'ತಮಗೆ ಬಿಗ್‌ಬಾಸ್‌ ಮನೆ ತುಂಬಾನೇ ಇಷ್ಟವಾಗಿದ್ದು, ನಾನಿಲ್ಲಿ ಸಂತೋಷದಿಂದ ಇದ್ದೇನೆ. ಇಲ್ಲಿ ನನ್ನ ತಂದೆ-ತಾಯಿಯನ್ನೂ ನಾನು ಅಷ್ಟೊಂದು ಮಿಸ್‌ ಮಾಡಿಕೊಳ್ಳುತ್ತಿಲ್ಲ. ದಯವಿಟ್ಟು ನನ್ನನ್ನು ಆಚೆ ಕಳುಹಿಸಬೇಡಿ' ಎಂದು ಕಿಚ್ಚ ಸುದೀಪ್‌ ಮುಂದೆ ಹೇಳಿಕೊಂಡಿದ್ದರು. ಇದೀಗ ನಿವೇದಿತಾ ವಾರದ ನಾಮಿನೇಷನ್‌ನಿಂದ ಬಚಾವ್‌ ಆಗಿದ್ದು, ಬಿಗ್‌ ಮನೆಯಿಂದ ಹೊರಹೋಗುವ ಆತಂಕದಿಂದ ದೂರವಾಗಿದ್ದಾರೆ.


ಅಂದಹಾಗೆ ಈ ವಾರ ಮನೆಯ ಕ್ಯಾಪ್ಟನ್‌ ಆಗಿದ್ದು ಬೆಳಗಾವಿ ಬೆಡಗಿ ಶೃತಿ ಪ್ರಕಾಶ್‌. ಹಾಗಾಗಿ ಸ್ಫರ್ಧಿಗಳು ಶೃತಿ ಅವರ ಹೆಸರನ್ನು ನಾಮಿನೇಷನ್‌ಗೆ ಸೂಚಿಸುವಂತಿರಲಿಲ್ಲ. ಮನೆಯ ಸದಸ್ಯರ ವೋಟ್‌ಗಳ ಅನುಸಾರ ದಿವಾಕರ್‌, ಮೇಘಾ, ಸಮೀರ್‌ ಆಚಾರ್ಯ, ಕೃಷಿ , ಜಗನ್ನಾಥ್‌, ಆಶಿತಾ, ದಯಾಳ್‌, ಕಾರ್ತಿಕ್‌ ಮತ್ತು ರಿಯಾಜ್‌ ನಾಮಿನೇಟ್‌ ಆಗಿದ್ದರು.

ಆದರೆ ಈ ಸಂದರ್ಭದಲ್ಲಿ ಕ್ಯಾಪ್ಟನ್‌ ಶೃತಿಗೆ ಬಿಗ್‌ಬಾಸ್‌ ಒಂದು ವಿಶೇಷ ಅಧಿಕಾರ ನೀಡಿದರು. ನಾಮಿನೇಷನ್‌ನಿಂದ ಒಬ್ಬರನ್ನು ಸೇಫ್‌ ಮಾಡುವ ಅಧಿಕಾರ ಕ್ಯಾಪ್ಟನ್‌ಗೆ ಸಿಕ್ಕಿತು. ಈ ವೇಳೆ ಕಾರ್ತಿಕ್‌ ಹೆಸರನ್ನು ಸೂಚಿಸಿದ ಶೃತಿ, ನಾಮಿನೇಷನ್‌ನಿಂದ ಅವರನ್ನು ಬಚಾವ್‌ ಮಾಡಿದರು.
​ಈ ವಾರ ನಾಮಿನೇಷನ್‌ನಿಂದ ನಿವೇದಿತಾ ಗೌಡ ಸುರಕ್ಷಿತ ​ಈ ವಾರ ನಾಮಿನೇಷನ್‌ನಿಂದ ನಿವೇದಿತಾ ಗೌಡ ಸುರಕ್ಷಿತ Reviewed by VIVEKARAMA on ಅಕ್ಟೋಬರ್ 26, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.