ಪಿಚ್ಚೈಕಾರನ್ ಕನ್ನಡ ರೀಮೇಕ್‍ನಲ್ಲಿ ಚಿರು ಸರ್ಜಾ

ಚಿರಂಜೀವಿ ಸರ್ಜಾ ಈಗ ಮದುವೆ ಮೂಡ್‌ನಲ್ಲಿದ್ದಾರೆ. ಈಗಾಗಲೆ ಮೇಘನಾ ರಾಜ್ ಜತೆಗೆ ಚಿರು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ಹಸೆಮಣೆ ಏರಲಿದೆ ಈ ತಾರಾ ಜೋಡಿ. ಜತೆಗೆ ಹಲವಾರು ಪ್ರಾಜೆಕ್ಟ್‌ಗಳು ಚಿರು ಕೈಯಲ್ಲಿವೆ. ಇದೀಗ ತಮಿಳಿನ 'ಪಿಚ್ಚೈಕಾರನ್' ರೀಮೇಕ್‌ಗೆ ಚಿರಂಜೀವಿ ಸರ್ಜಾ ಬಣ್ಣಹಚ್ಚಿದ್ದಾರೆ. ಈ ಪಾತ್ರಕ್ಕಾಗಿ ನಾನಾ ಹೆಸರುಗಳು ಕೇಳಿಬಂದಿದ್ದವು. ಇದೀಗ ಕೆ ಎಂ ಚೈತನ್ಯ ಆಕ್ಷನ್ ಕಟ್‍ನಲ್ಲಿ ಚಿರಂಜೀವಿ ಸರ್ಜಾ ಅಭಿನಯಿಸಲಿದ್ದಾರೆ.ಈಗಾಗಲೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂರು ಚಿತ್ರಗಳು ಬಂದಿದ್ದು, ಇದು ನಾಲ್ಕನೇ ಸಿನಿಮಾ. ಆಟಗಾರ, ಆಕೆ ಹಾಗೂ ತೆಲುಗಿನ ಕ್ಷಣಂ ರೀಮೇಕ್ ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೀಗ ಪಿಚ್ಚೈಕಾರನ್ ಸಿನಿಮಾಗೆ ರೆಡಿಯಾಗಿದ್ದಾರೆ ಚಿರು.


'ಇದೇ ಶುಕ್ರವಾರ ಚಿತ್ರದ ಮುಹೂರ್ತ ಹಾಗೂ ಮೊದಲ ಸನ್ನಿವೇಶವನ್ನು ಚಿತ್ರೀಕರಿಸಿಕೊಂಡಿದ್ದೇವೆ. ಚಿರಂಜೀವಿ ಸರ್ಜಾ ಮತ್ತು ಪ್ರಕಾಶ್ ಬೆಳವಾಡಿ ಅವರ ಪಾತ್ರವನ್ನು ಎರಡು ದಿನಗಳ ಕಾಲ ಚಿತ್ರೀಕರಿಸಿಕೊಳ್ಳುತ್ತೇವೆ' ಎಂದಿದ್ದಾರೆ ಚೈತನ್ಯ. ನಾಯಕಿ ಪಾತ್ರಕ್ಕಾಗಿ ಹುಡುಕಾಟ ನಡೆದಿದೆ.
ಪಿಚ್ಚೈಕಾರನ್ ಕನ್ನಡ ರೀಮೇಕ್‍ನಲ್ಲಿ ಚಿರು ಸರ್ಜಾ ಪಿಚ್ಚೈಕಾರನ್ ಕನ್ನಡ ರೀಮೇಕ್‍ನಲ್ಲಿ ಚಿರು ಸರ್ಜಾ Reviewed by VIVEKARAMA on ಅಕ್ಟೋಬರ್ 31, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.