ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರು ಎಲಿಮಿನೇಟ್ ಆಗ್ತಾರೆ?

ಎಲ್ಲರೂ ಕಾತರದಿಂದ ಕಾಯುತ್ತಿದ್ದ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಆರಂಭಗೊಂಡಿದೆ. 'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳ ಆಟ ಶುರುವಾಗಿದೆ..

ಮೊಟ್ಟ ಮೊದಲ ಬಾರಿಗೆ ಜನಸಾಮಾನ್ಯರು 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿರುವುದರಿಂದ ಈ ಆವೃತ್ತಿ ಸ್ವಲ್ಪ ಸ್ಪೆಷಲ್ ಏನೋ ಹೌದು. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಮೊಟ್ಟ ಮೊದಲ ದಿನವೇ 'ಜನಸಾಮಾನ್ಯರು' ಟಾರ್ಗೆಟ್ ಆಗಿದ್ದಾರೆ.
ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ, 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆದ ಏಳು ಸ್ಪರ್ಧಿಗಳ ಪೈಕಿ ನಾಲ್ವರು 'ಜನಸಾಮಾನ್ಯ'ರೇ ಇದ್ದಾರೆ.


ಕಾರಣ ಏನು.? 
ಎಲ್ಲರೊಂದಿಗೆ ಬೆರೆಯುತ್ತಿಲ್ಲ, ಕೆಲಸ ಮಾಡುತ್ತಿಲ್ಲ, 'ಔಟ್ ಆಫ್ ದಿ ಬಾಕ್ಸ್', ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ.... ಹೀಗೆ ಒಂದಲ್ಲ ಒಂದು ಕಾರಣ ನೀಡಿ ಬಹುತೇಕ ಸೆಲೆಬ್ರಿಟಿ ಸ್ಪರ್ಧಿಗಳು 'ಶ್ರೀಸಾಮಾನ್ಯ' ಸ್ಪರ್ಧಿಗಳನ್ನೇ ಟಾರ್ಗೆಟ್ ಮಾಡಿದ್ದಾರೆ.


ಹೆಚ್ಚು ವೋಟ್ ಗಳು ಬಿದ್ದಿದ್ದು ದಿವಾಕರ್ ಗೆ.!
ಸಿಹಿ ಕಹಿ ಚಂದ್ರು, ಆಶಿತಾ ಚಂದ್ರಪ್ಪ, ಕೃಷಿ ತಾಪಂಡ, ಜೆ.ಕೆ, ಜಗನ್ನಾಥ್, ನಿವೇದಿತಾ ಗೌಡ ಹಾಗೂ ಜಯಶ್ರೀನಿವಾಸನ್ 'ಶ್ರೀಸಾಮಾನ್ಯ' ದಿವಾಕರ್ ರವರನ್ನ ನಾಮಿನೇಟ್ ಮಾಡಿದ್ದಾರೆ. ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದವರು ಇದೇ ದಿವಾಕರ್.!


ಡೇಂಜರ್ ಝೋನ್ ನಲ್ಲಿ ಮೇಘ 
'ಡೆವಿಲ್ ಈಸ್ ಹಿಯರ್' ಎನ್ನುತ್ತ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಕೊಡಗಿನ ಹುಡುಗಿ ಮೇಘ ಮೊದಲ ದಿನವೇ ನಾಮಿನೇಟ್ ಆಗಿದ್ದಾರೆ. ಮೇಘ ರನ್ನ ನಾಮಿನೇಟ್ ಮಾಡಿದ್ದು ದಯಾಳ್ ಪದ್ಮನಾಭನ್, ತೇಜಸ್ವಿನಿ ಹಾಗೂ ಜಗನ್ನಾಥ್.


ಸುಮಾ ರಾಜ್ ಕುಮಾರ್ 
'ಬಿಗ್ ಬಾಸ್' ಮನೆಯೊಳಗೆ ಸೈಲೆಂಟ್ ಆಗಿದ್ದರೂ, ವಿವಿಧ ಕಾರಣಗಳನ್ನು ನೀಡಿ ಸುಮಾ ರಾಜ್ ಕುಮಾರ್ ರವರನ್ನ ಆಶಿತಾ ಚಂದ್ರಪ್ಪ, ಕೃಷಿ ತಾಪಂಡ ಹಾಗೂ ಸಮೀರಾಚಾರ್ಯ ನಾಮಿನೇಟ್ ಮಾಡಿದರು.


ಜಯಶ್ರೀನಿವಾಸನ್ ಮಿಸ್ ಆಗಲಿಲ್ಲ 
ಸಿಹಿ ಕಹಿ ಚಂದ್ರು, ದಿವಾಕರ್ ಹಾಗೂ ರಿಯಾಝ್ ಮತ ಚಲಾಯಿಸಿದ್ದರಿಂದ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಮೊದಲ ವಾರ ಡೇಂಜರ್ ಝೋನ್ ನಲ್ಲಿ ಇದ್ದಾರೆ.


ಜೆಕೆ ಹೆಸರನ್ನು ಸೂಚಿಸಿದವರು... .
ಚಂದನ್ ಶೆಟ್ಟಿ, ದಿವಾಕರ್ ಹಾಗೂ ಸುಮಾ ಜೆ.ಕೆ ರನ್ನ ನಾಮಿನೇಟ್ ಮಾಡಿದರು.


ಜಗನ್ನಾಥ್ ವಿರುದ್ಧ ನಾಲ್ಕು ವೋಟ್ ಗಳು
ಸಮೀರಾಚಾರ್ಯ, ಮೇಘ. ನಿವೇದಿತಾ ಗೌಡ ಹಾಗೂ ರಿಯಾಝ್ ಜಗನ್ನಾಥ್ ವಿರುದ್ಧ ಮತ ಚಲಾಯಿಸಿದರು.


ನೇರವಾಗಿ ನಾಮಿನೇಟ್ ಆದ ನಿವೇದಿತಾ 
ನಿವೇದಿತಾ ಗೌಡ ಹೆಸರನ್ನ ಕ್ಯಾಪ್ಟನ್ ಅನುಪಮಾ ಸೂಚಿಸಿದರು. ಹೀಗಾಗಿ ನಿವೇದಿತಾ ಗೌಡ ನೇರವಾಗಿ ನಾಮಿನೇಟ್ ಆದರು.


ಏಳು ಸ್ಪರ್ಧಿಗಳ ಪೈಕಿ ಯಾರು ಉಳಿಯಬೇಕು.? 
ದಿವಾಕರ್, ಮೇಘ, ಸುಮಾ ರಾಜ್ ಕುಮಾರ್, ಜೆಕೆ, ಜಗನ್ನಾಥ್, ಜಯಶ್ರೀನಿವಾಸನ್ ಹಾಗೂ ನಿವೇದಿತಾ ಗೌಡ... ಈ ಏಳು ಜನರ ಪೈಕಿ ಯಾರು 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಉಳಿಯಬೇಕು..? ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...
ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರು ಎಲಿಮಿನೇಟ್ ಆಗ್ತಾರೆ? ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರು ಎಲಿಮಿನೇಟ್ ಆಗ್ತಾರೆ? Reviewed by VIVEKARAMA on ಅಕ್ಟೋಬರ್ 21, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.