'ಬಿಗ್ ಬಾಸ್' ಮನೆ ಸೇರಿದ 'ಜೆ.ಕೆ'ಯ ಜರ್ನಿಯಲ್ಲಿ ಖುಷಿಗಿಂತ ನೋವು ಹೆಚ್ಚಿದೆ.!

'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮದಲ್ಲಿ 'ಬಿಗ್' ಮನೆ ಸೇರಿರುವ ಹ್ಯಾಂಡ್ ಸಮ್ ಸ್ಪರ್ಧಿ ಜೆ.ಕೆ ಅಲಿಯಾಸ್ ಕಾರ್ತಿಕ್ ಜಯರಾಂ. 'ಅಶ್ವಿನಿ ನಕ್ಷತ್ರ' ಖ್ಯಾತಿಯ ಜೆ.ಕೆ, ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲೂ ಮಿಂಚಿದ್ದಾರೆ.
ಕನ್ನಡದಲ್ಲಿ ಮಾತ್ರವಲ್ಲದೇ ಬಾಲಿವುಡ್ ನ ದೊಡ್ಡ ಧಾರಾವಾಹಿಯಲ್ಲಿ 'ರಾವಣ'ನ ಪಾತ್ರ ನಿರ್ವಹಿಸುವ ಮೂಲಕ ದೊಡ್ಡ ಯಶಸ್ಸು ಗಳಿಸಿಕೊಂಡಿರುವ ಖ್ಯಾತಿ ಅವರದ್ದು. ಆದ್ರೆ, 'ಜೆ.ಕೆ'ಯ ಈ ಯಶಸ್ಸಿನ ಜರ್ನಿ ಹೂವಿನ ಹಾಸಿಗೆಯಾಗಿರಲಿಲ್ಲ. ಮುಳ್ಳಿನ ಹಾದಿಯಾಗಿತ್ತು.
ಹಾಗಿದ್ದರೆ, ಬಿಗ್ ಬಾಸ್ ಮನೆ ಸೇರಿದ 'ಜೆ.ಕೆ'ಯ ರೋಚಕ ಬದುಕು ಹೇಗಿತ್ತು ಎಂದು ಮುಂದೆ


ಜೆ.ಕೆ ವೃತ್ತಿಯಲ್ಲಿ ಇಂಜಿನಿಯರ್ 
ಕಿರುತೆರೆ ಸೂಪರ್ ಸ್ಟಾರ್ ಕಾರ್ತಿಕ್ ಜಯರಾಂ ಅವರು ವೃತ್ತಿಯಲ್ಲಿ ಇಂಜಿನಿಯರ್ (Structural engineer). ಆದ್ರೆ, ಸಿನಿಮಾದ ಮೇಲಿನ ಆಸಕ್ತಿಯಿಂದ ಚಿತ್ರರಂಗದಲ್ಲಿ ಏನಾದರೂ ಸಾಧಿಸಿಬೇಕು ಎಂಬ ಛಲದಿಂದ ಚಿತ್ರರಂಗಕ್ಕೆ ಕಾಲಿಟ್ಟರು.
ಸಿನಿಮಾ ಮಾಡ್ಬೇಕು ಎಂಬ ಆಸೆಯಿಂದ ಬಂದ 'ಜೆ.ಕೆ'ಗೆ ಆರಂಭದಲ್ಲಿ ಅವಕಾಶ ಸಿಗಲಿಲ್ಲ. ಕಾದು ಕಾದು ಬೇಸರಗೊಂಡಿದ್ದ ಕಾರ್ತಿಕ್ ಜಯರಾಂ, ಸಿಕ್ಕ ಸಣ್ಣಪುಟ್ಟ ಪಾತ್ರಗಳನ್ನ ಮಾಡಿಕೊಂಡು ನೆಲೆ ಕಾಣಲು ಹರಸಾಹಸ ಪಡುತ್ತಿದ್ದರು. ಈ ವೇಳೆ ಸಾಕಷ್ಟು ಅವಮಾನಗಳನ್ನ ಎದುರಿಸಿದರು.


ಅವಮಾನಕ್ಕೆ ಉತ್ತರ ಕೊಟ್ಟ 'ಅಶ್ವಿನಿ ನಕ್ಷತ್ರ' 
ಆರಂಭದಲ್ಲಿ ಕಾರ್ತಿಕ್ ಜಯರಾಂ ಅವರನ್ನ ''ನೀನು ಹೀರೋ ಆಗ್ಬೇಕಾ'' ಎಂದು ಹೀಯಾಳಿಸಿದ್ದರು. ಮತ್ತೊಂದೆಡೆ ಅವಕಾಶ ಸಿಗದೆ ಕಂಗಲಾಗಿದ್ದರು. ಇಂತಹ ಅವಮಾನಗಳಿಗೆ ಉತ್ತರ ನೀಡಬೇಕು ಎಂಬ ಕಾರಣಕ್ಕೆ ಮೊದಲ ಬಾರಿಗೆ ಧಾರಾವಾಹಿ ಮಾಡಲು ಒಪ್ಪಿಕೊಂಡರು. ಅದೇ 'ಅಶ್ವಿನಿ ನಕ್ಷತ್ರ'. ಈ ಧಾರಾವಾಹಿಯಲ್ಲಿ ಕಾರ್ತಿಕ್ ಜಯರಾಂ ಅವರದ್ದು ಸೂಪರ್ ಸ್ಟಾರ್ ನಟನ ಪಾತ್ರ. ಈ ಪಾತ್ರವನ್ನ ಚೆನ್ನಾಗಿ ಸದ್ಬಳಕೆ ಮಾಡಿಕೊಂಡ 'ಜೆ.ಕೆ'ಯ ಅದೃಷ್ಟ ಇಲ್ಲಿಂದ ಬದಲಾಯಿತು.


ಬಾಲಿವುಡ್ ನಲ್ಲಿ ಕಂಡ ಯಶಸ್ಸು 
ಸತತ ಎರಡು ವರ್ಷ ಕಿರುತೆರೆಯಲ್ಲಿ ಮಿಂಚಿದ 'ಜೆ.ಕೆ' ಅಪಾರ ಅಭಿಮಾನಿಗಳನ್ನ ಗಳಿಸಿಕೊಂಡರು. ಇದರ ಜೊತೆಗೆ ಸಿನಿಮಾದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು. ಆದ್ರೆ, ಯಾವುದು ಖ್ಯಾತಿ ತಂದುಕೊಡಲಿಲ್ಲ. ಇಂತಹ ಸಂದರ್ಭದಲ್ಲೇ ಬಾಲಿವುಡ್ ನಿಂದ ದೊಡ್ಡ ಆಫರ್ ಬಂತು. 'ಸಿಯಾ ಕೇ ರಾಮ್' ಎಂಬ ಪೌರಾಣಿಕ ಧಾರಾವಾಹಿಯಲ್ಲಿ 'ರಾವಣ'ನ ಪಾತ್ರ ಸಿಕ್ತು. ಖುಷಿಯಿಂದ ಅಭಿನಯಿಸಿ, ಅಲ್ಲಿಯೂ ಗೆದ್ದರು.

ಅಲ್ಲಿ ಗೆದ್ದರು, ಇಲ್ಲಿ ಬೆಲೆ ಸಿಕ್ಕಿಲ್ಲ.! 
ಬಾಲಿವುಡ್ ಅಂತಹ ಇಂಡಸ್ಟ್ರಿಯಲ್ಲಿ ಅಭಿನಯಿಸಿ ಗೆದ್ದು ಬಂದ 'ಜೆ.ಕೆ'ಗೆ ಪುನಃ ಕನ್ನಡದಲ್ಲಿ ಅವಕಾಶಗಳು ಸಿಗಲೇ ಇಲ್ಲ. ಇದರಿಂದ ಬೇಸರಗೊಂಡ ಜೆಕೆ, ಎದೆಗುಂದದೆ ಸ್ನೇಹಿತರ ಜೊತೆಗೂಡಿ ಈಗ 'ಮೇ 1st' ಎಂಬ ಹೊಸ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

'ಬಿಗ್ ಬಾಸ್'ಗೆ ಎಂಟ್ರಿ 
ಇಷ್ಟೆಲ್ಲಾ ಥ್ರಿಲ್ಲಿಂಗ್ ಜರ್ನಿಯ ಮಧ್ಯೆ ಈಗ 'ಬಿಗ್ ಬಾಸ್' ಮನೆಗೆ ಜೆಕೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಮನೆಯಲ್ಲಿ ಜರ್ನಿ ಅರಂಭಿಸಿರುವ ಜೆಕೆ ಮೊದಲ ವಾರದಲ್ಲಿ ಏಳು ಜನರ ಪೈಕಿ ನಾಮಿನೇಟ್ ಆಗಿದ್ದಾರೆ. ಜೆಕೆ ಈ ವಾರ ಸೇಫ್ ಆಗ್ತಾರಾ. ಕಾದು ನೋಡಬೇಕಿದೆ.

'ಬಿಗ್ ಬಾಸ್' ಮನೆ ಸೇರಿದ 'ಜೆ.ಕೆ'ಯ ಜರ್ನಿಯಲ್ಲಿ ಖುಷಿಗಿಂತ ನೋವು ಹೆಚ್ಚಿದೆ.! 'ಬಿಗ್ ಬಾಸ್' ಮನೆ ಸೇರಿದ 'ಜೆ.ಕೆ'ಯ ಜರ್ನಿಯಲ್ಲಿ ಖುಷಿಗಿಂತ ನೋವು ಹೆಚ್ಚಿದೆ.! Reviewed by VIVEKARAMA on ಅಕ್ಟೋಬರ್ 19, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.