ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!

'ಪುಟ್ಟಗೌರಿ' ಕಾಡಿನಲ್ಲಿ ಸಿಕ್ಕಿಹಾಕಿಕೊಂಡು ಎದುರಿಸುತ್ತಿರುವ ಕಷ್ಟಗಳನ್ನ ವೀಕ್ಷಕರು ನೋಡಿ ''ಅಯೋ....ಪಾಪ, ದೇವರೇ ಹೇಗಾದ್ರೂ ಗೌರಿಯನ್ನ ಕಾಪಾಡಪ್ಪ'' ಎನ್ನುತ್ತಿದ್ದಾರೆ.

ಪ್ರೇಕ್ಷಕರ ಕೂಗು ದೇವರಿಗೆ ಮುಟ್ಟಿತೋ ಏನೋ ಗೊತ್ತಿಲ್ಲ, ಹುಲಿ ಮತ್ತು ಹಾವಿನಿಂದ ಪುಟ್ಟಗೌರಿ ತಪ್ಪಿಸಿಕೊಂಡಳು. ಆದ್ರೀಗ, ಗೌರಿಗೆ ಮತ್ತೊಂದು ರೀತಿಯಲ್ಲಿ ಪ್ರಾಣಾಪಾಯ ಎದುರಾಗಿದೆ.
ಈ ಬಾರಿ ಗೌರಿ ಜೀವಂತವಾಗಿ ಉಳಿಯುತ್ತಾಳಾ ಎನ್ನುವುದೇ ಅನುಮಾನವಾಗಿದೆ.


ಕಾಡು ಮನುಷ್ಯರಿಗೆ ಆಹಾರವಾದ ಗೌರಿ.!
ಹುಲಿ ಮತ್ತು ಹಾವಿನಿಂದ ತಪ್ಪಿಸಿಕೊಂಡ ಪುಟ್ಟಗೌರಿ ಇನ್ನೇನೂ ಬಚಾವ್ ಆದೇ ಎಂದುಕೊಳ್ಳುವಷ್ಟರಲ್ಲಿ, ಕಾಡು ಮನುಷ್ಯರ ಕೈ ಗೆ ಸಿಕ್ಕಿ ಹಾಕಿಕೊಂಡಿದ್ದಾಳೆ.


ಬೇಟೆಯಲ್ಲಿ ಸಿಕ್ಕ ಪ್ರಾಣಿಯಂತೆ ಗೌರಿಯನ್ನ ಬಲಿ ಕೊಡುವುದಕ್ಕೆ ಕಾಡು ಮನುಷ್ಯರು ಎಳೆದುಕೊಂಡು ಹೋಗಿದ್ದಾರೆ.


ಗೌರಿಯನ್ನ ಕರೆದುಕೊಂಡು ಹೋದ ಕಾಡು ಮನುಷ್ಯರು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ

ಗೌರಿಯನ್ನ ಬಲಿ ನೀಡುವುದಕ್ಕೆ ಸಿದ್ದ ಮಾಡಲಾಗಿದ್ದು, ಕಾಡು ಮನುಷ್ಯರ ಸಂಪ್ರದಾಯದಂತೆ ಉಡುಗೆ, ತೊಡುಗೆ ಕೊಟ್ಟು ಶೃಂಗಾರ ಮಾಡಿದ್ದಾರೆ.


ಸಾಮಾನ್ಯವಾಗಿ ಪ್ರಾಣಿ ಬಲಿ ನೀಡುವುದಕ್ಕೆ ಮುಂಚೆ ತಮ್ಮ ದೇವರಿಗೆ ಪೂಜೆ ಮಾಡುವ ರೀತಿ, ಗೌರಿಗೂ ಪೂಜೆ ಮಾಡಲಾಗಿದೆ.


ಇನ್ನೇನೂ ಗೌರಿಯನ್ನ ಬಲಿ ಕೊಟ್ಟೇಬಿಟ್ಟರು ಎನ್ನುವಷ್ಟರಲ್ಲಿ ನಿನ್ನೆಯ (ಅಕ್ಟೋಬರ್ 13) ಎಪಿಸೋಡ್ ಮುಗಿದಿದೆ. ಇನ್ನು ನಿಜಕ್ಕೂ ಗೌರಿಯನ್ನ ಬಲಿ ಕೊಡುವುದಕ್ಕೆ ಕಟ್ಟಿಹಾಕಿದ್ದಾರಾ? ಒಂದು ವೇಳೆ ಬಲಿ ಕೊಡುವುದಕ್ಕೆ ಹಾಗಿದ್ದರೇ ಗೌರಿ ಸಾಯುತ್ತಾಳಾ ಅಥವಾ ಮತ್ತೇನಾದ್ರೂ ಪವಾಡ ನಡೆಯುತ್ತಾ? ಸೋಮವಾರದ ಸಂಚಿಕೆಯಲ್ಲಿ ಮಿಸ್ ಮಾಡದೆ ನೋಡಿ......
ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.! ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.! Reviewed by VIVEKARAMA on ಅಕ್ಟೋಬರ್ 16, 2017 Rating: 5

ಕಾಮೆಂಟ್‌ಗಳಿಲ್ಲ:

ಈ ಬ್ಲಾಗ್ ಅನ್ನು ಹುಡುಕಿ

Blogger ನಿಂದ ಸಾಮರ್ಥ್ಯಹೊಂದಿದೆ.